30.3 C
Karnataka
Sunday, September 13, 2026

ಸುದ್ದಿ

ಕುದ್ರೋಳಿ : ಅಲಂಕಾರಿಕ ಬೀದಿ ದೀಪದ ಕಂಬಗಳ ಉದ್ಘಾಟನೆ

0
ಮಂಗಳೂರು: ಸುಪ್ರಸಿದ್ಧ ಧಾರ್ಮಿಕ ಸ್ಥಳ, ಮಂಗಳೂರು ದಸರಾದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಬಳಿ ಪಾಲಿಕೆಯ 2022-23 ನೇ ಸಾಲಿನ 15ನೇ ಹಣಕಾಸಿನಿಂದ ಸುಮಾರು 48 ಲಕ್ಷ ರೂ.ವೆಚ್ಚದಲ್ಲಿ ಅಳವಡಿಸಲಾದ ಅಲಂಕಾರಿಕ ಬೀದಿ ದೀಪದ ಕಂಬಗಳನ್ನು ಶಾಸಕ ವೇದವ್ಯಾಸ ಕಾಮತ್ ಅವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಈಗಾಗಲೇ...

ಕೊಡಗು ವಿ.ವಿ ಸಿಂಡಿಕೇಟ್ ಸೆನೆಟ್ ಸದಸ್ಯರಾಗಿ ಜನಾರ್ದನ್ ನೇಮಕ

0
ಬೆಳ್ತಂಗಡಿ: ಕೊಡಗು ವಿಶ್ವವಿದ್ಯಾಲಯದ ಸಿಂಡಿಕೇಟ್ ಸೆನೆಟ್ ಸದಸ್ಯನಾಗಿ ಶ್ರಿ ಕ್ಷೇತ್ರ ಧರ್ಮಸ್ಥಳದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ ಎನ್ ಜನಾರ್ದನ್ ನೇಮಕಗೊಂಡಿದ್ದಾರೆ. ಇವರು ರುಡ್ ಸೆಟ್,ಮತ್ತು ಅರ್ ಸೆಟಿಗಳ ರಾಷ್ಟ್ರೀಯ ನಿರ್ದೇಶಕರಾಗಿದ್ದು ದೇಶದಾದ್ಯಂತ 560 ಕ್ಕು ಅಧಿಕ ಅರ್ ಸೆಟಿಗಳ ಸ್ಥಾಪನೆಗೆ ಅರ್ ಸೆಟಿ ಅದ್ಯಕ್ಷ ಡಾ ಡಿ ವೀರೇಂದ್ರ ಹೆಗ್ಗಡೆಯವರೊಂದಿಗೆ ಶ್ರಮಿಸಿದ್ದರು.ಅರ್...

ಮಾ.10ರಂದು ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆ: ಮೈಮೂನಾ ಮತ್ತು ಮರ್ಝಿನಾರಿಗೆ ಪ್ರೆಸ್‌ಕ್ಲಬ್ ವರ್ಷದ ಪ್ರಶಸ್ತಿ

0
ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರೆಸ್‌ಕ್ಲಬ್ ದಿನಾಚರಣೆ ಮಾ.10ರಂದು ಬೆಳಗ್ಗೆ 9.30ರಿಂದ ಮರವೂರಿನ ದಿ ಗ್ರಾೃಂಡ್ ಬೇಯಲ್ಲಿ ನಡೆಯಲಿದೆ. ಹೈನುಗಾರಿಕೆಯಲ್ಲಿ ಅಪೂರ್ವ ಸಾಧನೆಗೈದ ಹರೇಕಳದ ಮೈಮೂನಾ ಮತ್ತು ಮರ್ಝಿನಾ ಅವರು ಪ್ರೆಸ್‌ಕ್ಲಬ್ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪತ್ರಕರ್ತರಾದ ಅನ್ನು ಮಂಗಳೂರು, ರಾಘವೇಂದ್ರ ಭಟ್, ಪ್ರಕಾಶ್ ಮ೦ಜೇಶ್ವರ , ಕೃಷ್ಣ ಕೋಲ್ಚಾರ್, ರವಿ ಪೊಸವಣಿಕೆ,...

ಬಿಜೈ ನ್ಯೂರೋಡ್ : ಬದಲಿ ಮಾರ್ಗದ ವ್ಯವಸ್ಥೆ

0
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ವಿಭಾಗ ಸಂಖ್ಯೆ 31, ಬಿಜೈ ನ್ಯೂರೋಡ್ ಪ್ರದೇಶದ ರಸ್ತೆ ಅಗಲೀಕರಣ, ಒಳಚರಂಡಿ, ವಿದ್ಯುತ್ ಕಂಬ ಸ್ಥಳಾಂತರ ಮತ್ತು ಕಾಂಕ್ರೀಟೀಕರಣ ಕಾಮಗಾರಿಕೆಯನ್ನು ಪಾಲಿಕೆಯ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ.ಕಾಮಗಾರಿ ಸುಗಮ ರೀತಿಯಲ್ಲಿ ತ್ವರಿತವಾಗಿ ನಿರ್ವಹಿಸಲು ರಸ್ತೆಯನ್ನು ಮಾರ್ಚ್ 11 ರಿಂದ ಮುಚ್ಚಲಾಗುತ್ತದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಕಾಮಗಾರಿಯನ್ನು ನಿರ್ವಹಿಸುವ ಅವಧಿಯಲ್ಲಿ ಅನುಕೂಲವಾಗುವಂತೆ...

ಮಾ. 9 : ಕಂದಾಯ ಸಚಿವರ, ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

0
ಮಂಗಳೂರು: ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಮಾರ್ಚ್ 9 ರಂದು ಶನಿವಾರ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಮಧ್ಯಾಹ್ನ 2.10ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಸಂಜೆ 4.30 ಗಂಟೆಗೆ...

ಮಂಗಳೂರು ತಾಲೂಕು ಗ್ಯಾರಂಟಿ ಫಲಾನುಭವಿಗಳ ಸಮಾವೇಶ

0
ಮಂಗಳೂರು: ಇಲ್ಲಿನ ಕರಾವಳಿ ಉತ್ಸವ ಮೈದಾನದಲ್ಲಿ ಮಾ.7ರ ಗುರುವಾರ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನುವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಅವರು ಉದ್ಘಾಟಿಸಿದರು.ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಒ ಡಾ. ಆನಂದ್,ಮೂಡದ ನೂತನ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಮೆಸ್ಕಾಂ ಎಂಡಿ ಪದ್ಮಾವತಿ, ಮಂಗಳೂರು ಮಹಾನಗರ ಪಾಲಿಕೆ...

ಕದ್ರಿ: ಮಳೆನೀರು ಚರಂಡಿ ಹಾಗೂ ಫುಟ್ಬಾತ್ ಅಭಿವೃದ್ಧಿ ಕಾಮಗಾರಿಗೆ ಚಾಲನೆ

0
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಪ್ರೀಮಿಯಂ ಎಫ್. ಐ. ಆರ್. ನಿಧಿಯಿಂದ 2 ಕೋಟಿ ವೆಚ್ಚದ ಕದ್ರಿ ಗ್ರೌಂಡಿನಿಂದ ಕದ್ರಿ ಕಂಬಳ ರಸ್ತೆವರೆಗೆ ಮಳೆನೀರು ಚರಂಡಿ ಹಾಗೂ ಫುಟ್ಬಾತ್ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಚಾಲನೆ ನೀಡಿದರು ನಂತರ ಮಾತನಾಡಿದ ಶಾಸಕರು, ಮಳೆಗಾಲದಲ್ಲಿ ಇಲ್ಲಿನ ಸ್ಥಳೀಯರಿಗೆ ಅತೀವ ತೊಂದರೆಯಾಗುತ್ತಿದ್ದ ಬಗ್ಗೆ ಮ.ನ.ಪಾ...

ರೋಹನ್ ಸಿಟಿ ಸ್ಮರಣೀಯ ಸಾಧನೆ: 1 ಮಿಲಿಯನ್ ಸುರಕ್ಷಿತ ಮಾನವ ಗಂಟೆಗಳು

0
ಮ೦ಗಳೂರು: ಸುರಕ್ಷತೆಗೆ ಸಾಕ್ಷಿಯಾಗಿ, ರೋಹನ್ ಕಾರ್ಪೊರೇಶನ್ ಮಾ.6 ರಂದು ರೋಹನ್ ಸಿಟಿ ಬಿಜೈನಲ್ಲಿ 1 ಮಿಲಿಯನ್ ಸುರಕ್ಷಿತ ಮಾನವ ಗಂಟೆಗಳನ್ನು ತಲುಪಿದ ಗಮನಾರ್ಹ ಸಾಧನೆಯನ್ನು ಆಚರಿಸಿತು. 5ನೇ ರಾಷ್ಟ್ರೀಯ ಸುರಕ್ಷತಾ ದಿನದ ವಾರದ ಅಭಿಯಾನದಲ್ಲಿ ಸಾಧಿಸಿದ ಮೈಲಿಗಲ್ಲು, ಸುರಕ್ಷತೆ ಮತ್ತು ಯೋಗಕ್ಷೇಮದ ಸಂಸ್ಕೃತಿಯನ್ನು ಬೆಳೆಸುವಲ್ಲಿ ರೋಹನ್ ಕಾರ್ಪೊರೇಶನ್ ಬದ್ಧವಾಗಿದೆ. ಈ ಐತಿಹಾಸಿಕ ಕ್ಷಣವನ್ನು ಕಾರ್ಮಿಕರು, ಉದ್ಯೋಗಿಗಳು...

ಬಜರಂಗದಳದ ಮುರಳಿಕೃಷ್ಣ ಹಸಂತಡ್ಕ ಬಂಧನ; ಜಿಲ್ಲಾ ಬಿಜೆಪಿ ಖಂಡನೆ

0
ಮ೦ಗಳೂರು: ಕರ್ನಾಟಕದಲ್ಲಿ ನಡೆದ ಬಾಂಬ್ ದಾಳಿ ,ಭಯೋತ್ಪಾದಕ ಕೃತ್ಯಗಳನ್ನು ಖಂಡಿಸಿ ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿಯಿ೦ದ ತುಮಕೂರಿನಲ್ಲಿ ನಡೆಯಲಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬಜರಂಗದಳ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕರವರನ್ನು ಕುಣಿಗಲ್ ನಲ್ಲಿ ಪೊಲೀಸರು ಬಂಧಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ತಡೆದಿದ್ದು ಸರಕಾರದ ಈ ನಡೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ...

ಜನಜಾಗೃತಿ ರಥಕ್ಕೆ ಚಾಲನೆ

0
ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಬಾಲಕಾರ್ಮಿಕ ಯೋಜನಾ ಸಂಘದ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಹಾಗೂ ಮಾನವ ಕಳ್ಳ ಸಾಗಣಿಕೆ ತಡೆ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಾ.6 ರಂದು...