ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಕಳವು
ವಿಟ್ಲ : ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಕಳವು ಮಾಡಿಕೊಂಡು ಹೋಗಿರುವ ಘಟನೆ ಬಂಟ್ವಾಳ ತಾಲೂಕು ವಿಟ್ಪಪಡ್ನೂರು ಗ್ರಾಮದ ಕಾಪುಮಜಲು ಎಂಬಲ್ಲಿ ನಡೆದಿದೆ.ವಿಟ್ಲಪಡ್ನೂರು ಕಾಪುಮಜಲು ನಿವಾಸಿ ಪೂವಪ್ಪಗೌಡ ಅವರು ಮನೆಯ ಅಂಗಳದಲ್ಲಿ ಒಣಗಲು ಹಾಕಿದ ಸುಮಾರು 10 ಗೋಣಿ ಚೀಲದಷ್ಟು ಅಡಿಕೆಯನ್ನು ಕಳ್ಳರೂ ಕಳವು ಮಾಡಿಕೊಂಡು ಹೋಗಿದ್ದು ಅದರ ಮೌಲ್ಯ 75.000 ರೂ ಆಗಬಹುದು...
ಅಕ್ರಮವಾಗಿ ಜಾನುವಾರುಗಳ ಸಾಗಾಟ
ಬೆಳ್ತಂಗಡಿ: ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ 4 ಜಾನುವಾರುಗಳನ್ನು ವಾಹನ ಸಮೇತ ವೇಣೂರು ಪೊಲೀಸರು ವಶಪಡಿಸಿಕೊ೦ಡಿದ್ದಾರೆ.ಶನಿವಾರ ಸಂಜೆ ಬೆಳ್ತಂಗಡಿ ತಾಲೂಕು ಬಜಿರೆ ಗ್ರಾಮದ ಬಾಡಾರು ಎಂಬಲ್ಲಿ ವೇಣೂರು- ನೈನಾಡು ಸಾರ್ವಜನಿಕ ರಸ್ತೆಯಲ್ಲಿ ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶೈಲ ಡಿ. ಮುಗೋಡು ಹಾಗೂ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿದ್ದಾಗ, ಸದ್ರಿ...
ದೆಹಲಿ ಪೊಲೀಸ್ ಎ೦ದು ನ೦ಬಿಸಿ 16 ಲಕ್ಷ ರೂ. ದೋಚಿದರು !
ಪುತ್ತೂರು:ದೆಹಲಿ ಪೊಲೀಸ್ ಎ೦ದು ನ೦ಬಿಸಿ ಪುತ್ತೂರಿನ ವ್ಯಕ್ತಿಯೋವ೯ರಿ೦ದ ಅಪರಿಚಿತ ವ್ಯಕ್ತಿಗಳು ಆನ್ ಲೈನ್ ಮೂಲಕ 16,50,000 ರೂ.ದೋಚಿದ ಪ್ರಕರಣ ವರದಿಯಾಗಿದ್ದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ, ಪ್ರಕರಣ ದಾಖಲಾಗಿದೆ.ಪುತ್ತೂರು ಬೊಳ್ವಾರು ನಿವಾಸಿಯಾಗಿರುವ ವ್ಯಕ್ತಿ ಪೊಲೀಸರಿಗೆ ನೀಡಿರುವ ದೂರಿನಂತೆ, ಸದ್ರಿಯವರ ದೂರವಾಣಿಗೆ ಮಾ. 28ರಂದು ಬೆಳಿಗ್ಗೆ, ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಬಂದಿದ್ದು, ಕರೆ ಸ್ವೀಕರಿಸಿ...
17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬ೦ಧನ
ಬಂಟ್ವಾಳ : 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಬ೦ಧಿಸಿದ್ದಾರೆ. ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಕಂಚಿಲ ನಿವಾಸಿ ಅಬುಸಾಲಿ (41) ಬ೦ಧಿತ ಆರೋಪಿ.ಪ್ರಕರಣವೊ೦ದರಲ್ಲಿ ಆರೋಪಿಯಾಗಿದ್ದ ಅಬುಸಾಲಿ 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆತನನ್ನು ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆ ಎಂಬಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸ್ ಉಪ ನಿರೀಕ್ಷಕ...
ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದು ಹೇಳಿದ್ದಕ್ಕೆ ಕತ್ತಿಯಿಂದ ಹಲ್ಲೆ!
ಕಡಬ :ಸಣ್ಣ ಮಗು ಮಲಗಿದೆ; ಜೋರಾಗಿ ಮಾತನಾಡಬೇಡಿ ಎಂದು ಹೇಳಿದ್ದಕ್ಕೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಕಡಬದ ಬಳ್ಪದಲ್ಲಿ ನಡೆದಿದೆ. ಕಡಬ ನಿವಾಸಿ ರಮೇಶ್ ಕೆ. ಹಲ್ಲೆಗೊಳಗಾದವರು.ಸುಂದರ ಹೊಸ್ಮಠ ಹಲ್ಲೆ ನಡೆಸಿದ ಆರೋಪಿ.ರಮೇಶ್ ಹೆಂಡತಿ ಮತ್ತು ಸಣ್ಣ ಮಗನೊಂದಿಗೆ ಬಳ್ಪದಲ್ಲಿ ವಾಸವಾಗಿದ್ದು ಮ೦ಗಳವಾರ ಸಂಜೆ ಮನೆಯಲ್ಲಿರುವಾಗ, ಸಂಬಂಧಿಕ ಆರೋಪಿ ಸುಂದರ ಹೊಸ್ಮಠ ಮನೆಗೆ ಬಂದಿದ್ದ....
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಸೆರೆ
ಮಂಗಳೂರು: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬೆಂಗಳೂರು ಮೂಲಕ ಮಂಗಳೂರು ನಗರಕ್ಕೆ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದವನನ್ನು ಪತ್ತೆ ಹಚ್ಚಿ 6.325 ಕೆ ಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.ವಾಮಂಜೂರು ಪೆದಮಲೆ ನಿವಾಸಿ, ಪ್ರಸ್ತುತ ನೀರುಮಾರ್ಗ ಜಂಕ್ಷನ್ ಬಳಿ ವಾಸವಿರುವ ನಿಶಾಂತ್ ಶೆಟ್ಟಿ(35) ಬ೦ಧಿತ ಆರೋಪಿ.
ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾವನ್ನು ಖರೀದಿಸಿಕೊಂಡು...
ಇಪ್ಪತ್ತೈದು ಲಕ್ಷ ರೂ.ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಮುಡಾ ಆಯುಕ್ತ,ಬ್ರೋಕರ್
ಮಂಗಳೂರು:ಟಿ.ಡಿ.ಆರ್ ನೀಡಲು 25,00,000 ರೂ. (ಇಪ್ಪತ್ತೈದು ಲಕ್ಷ) ಲಂಚ ಬೇಡಿಕೆ ಇಟ್ಟಿದ್ದ ಮುಡಾ ಆಯುಕ್ತ ಮನ್ಸೂರ್ ಆಲಿ ಹಾಗೂ ಅವರ ಪರವಾಗಿ ಲಂಚದ ಹಣ ಸ್ವೀಕರಿಸುತ್ತಿದ್ದ ಬ್ರೋಕರ್ ಮಹಮ್ಮದ್ ಸಲಿಂ ಅವರನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ಬ೦ಧಿಸಿದ್ದಾರೆ.
ಮಹಮ್ಮದ್ ಸಲಿಂ
ದೂರುದಾರರು ಮಂಗಳೂರು ತಾಲೂಕು ಕುಡುಪು ಗ್ರಾಮದಲ್ಲಿ ಒಟ್ಟು 10.8 ಎಕ್ರೆ ಜಮೀನನ್ನು ಖರೀದಿಸಿದ್ದು, ಮಂಗಳೂರು ಮಹಾನಗರ...
ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಮೂವರ ಹತ್ಯೆ ಪ್ರಕರಣ : 6 ಮಂದಿ ವಶಕ್ಕೆ
ಬೆಳ್ತಂಗಡಿ:ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಬೆಳ್ತಂಗಡಿಯ ಮೂವರನ್ನು ಹತ್ಯೆಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಮದ್ದಡ್ಕ ನಿವಾಸಿ ಇಸಾಕ್(56), ಶಿರ್ಲಾಲುನಿವಾಸಿ ಸಿದ್ದಿಕ್(34) ಅವರು ಹನ್ನೊಂದು ದಿನಗಳ ಹಿಂದೆ ವ್ಯವಹಾರ ಸಂಬಂಧ ತುಮಕೂರಿಗೆ...
ಐವರ್ನಾಡು : ಅಡಿಕೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು
ಬೆಳ್ಳಾರೆ: ಮಾ.14 ರಂದು ರಾತ್ರಿ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಕುಳ್ಳಂಪ್ಪಾಡಿ ಹಿರಿಯಣ್ಣ ಎಂಬವರ, ಕೊಟ್ಟಿಗೆಯಲ್ಲಿ ಸುಲಿದು ದಾಸ್ತಾನು ಇರಿಸಿದ್ದ 5 ಗೋಣಿ ಚೀಲ ಅಡಿಕೆಯ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಳ್ಯ ಮಂಡೆಕೋಲು ನಿವಾಸಿ ಸುಪೀತ್ ಕೆ (20) ಎಂಬಾತನನ್ನು ಪೊಲೀಸರು ಬ೦ಧಿಸಿದ್ದಾರೆ.ಆರೋಪಿಯಿ೦ದ 83,000/ ರೂ ಮೌಲ್ಯದ 209 ಕೆ ಜಿ ಸುಲಿದ...
ಎಂಡಿಎಂಎ ಮಾರಾಟ ಮಾಡುತ್ತಿದ್ದವನ ಸೆರೆ
ಮಂಗಳೂರು : ಬೆಂಗಳೂರಿನಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ಮಾರಾಟ ಮಾಡುತ್ತಿದ್ದವನನ್ನು ಪತ್ತೆ ಹಚ್ಚಿ 46 ಗ್ರಾಂ ಎಂಡಿಎಂಎ ನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಬಂಟ್ವಾಳ ತಾಲೂಕು ಲೋರೆಟ್ಟೋ ನಿವಾಸಿ ಅಬ್ದುಲ್ ಸಮದ್ @ ಸಮದ್ @ ಚಮ್ಮು(36) ಬ೦ಧಿತ ಆರೋಪಿ.
ಮಂಗಳೂರು ನಗರಕ್ಕೆ...