ಮ೦ಗಳೂರು: 1912ರಲ್ಲಿ ಸ್ಥಾಪನೆಯಾಗಿ 114 ವರ್ಷಗಳ ಯಶಸ್ವಿ ಸೇವೆಯನ್ನು ಪೂರೈಸಿರುವ ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ 22ನೇ ಶಾಖೆ ಹಾಗೂ ನೂತನ ಎಟಿಎಂ ಅನ್ನು ಜೂನ್ 28ರಂದು ದೇರಳಕಟ್ಟೆಯ ಫಾ. ಮುಲ್ಲರ್ಕಾಂಪ್ಲೆಕ್ಸ್ನ ನೆಲ ಮಹಡಿಯಲ್ಲಿ ಉದ್ಘಾಟಿಸಿತು.
ನೂತನ ಶಾಖೆಯನ್ನು ಎಂಸಿಸಿ ಬ್ಯಾಂಕ್ನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಉದ್ಘಾಟಿಸಿದರು. ದೇರಳಕಟ್ಟೆಯ ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ವಂ. ಫಾ. ನಿಲೇಶ್ಕ್ರಾಸ್ತಾ ಅವರು ಎಟಿಎಂ ಅನ್ನು ಉದ್ಘಾಟಿಸಿ ಚಾಲನೆ ನೀಡಿದರು. ಉರ್ಸುಲಿನ್ ಫ್ರಾನ್ಸಿಸ್ಕನ್ ಸಿಸ್ಟರ್ಸ್ನಸುಪೀರಿಯರ್ ಜನರಲ್ ವಂ. ಸಿ. ಮಿಲ್ಲಿ ಫೆರ್ನಾಂಡಿಸ್ ಅವರು ಸೇಫ್ ರೂಂ ಅನ್ನು ಉದ್ಘಾಟಿಸಿದರೆ, ಫಾ. ಮುಲ್ಲರ್ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ವಿಭಾಗದ (FMHPD) ಆಡಳಿತಾಧಿಕಾರಿ ವಂ. ಫಾ. ನೆಲ್ಸನ್ ದೀರಜ್ಪಾಯ್ಸ್ ಅವರು ಬ್ಯಾಂಕಿನ ಇ-ಸ್ಟಾಂಪ್ ಸೇವೆಗೆ ಚಾಲನೆ ನೀಡಿದರು. ಪಾಣೀರ್ನ ಅವರ್ ಲೇಡಿ ಆಫ್ ಮರ್ಸಿ ಚರ್ಚ್ನ ಧರ್ಮಗುರು ವಂ. ಫಾ. ವಿಕ್ಟರ್ ಡಿ’ಮೆಲ್ಲೊ ಅವರು ನೂತನ ಶಾಖೆಗೆ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿ ವಂ. ಸಿ. ಮಿಲ್ಲಿ ಫೆರ್ನಾಂಡಿಸ್ ಭಾಗವಹಿಸಿದ್ದರು. ಗೌರವ ಅತಿಥಿಗಳಾಗಿ ರೆವ. ಫಾ. ನಿಲೇಶ್ ಕ್ರಾಸ್ತಾ ಹಾಗೂ ಕೋಟೆಕಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾಹಾಗೂ ಮಹಾಪ್ರಬಂಧಕ ಸುನಿಲ್ ಮೆನೇಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷೀಯ ಭಾಷಣದಲ್ಲಿ ಅನಿಲ್ ಲೋಬೊ ಅವರು ಸಹಕಾರ ಬ್ಯಾಂಕಿಂಗ್ ಮತ್ತು ಗ್ರಾಹಕ ಸೇವೆಯತ್ತ ಎಂಸಿಸಿಬ್ಯಾಂಕ್ನ ಬದ್ಧತೆಯನ್ನು ಪುನರುಚ್ಚರಿಸಿದರು. ದೇರಳಕಟ್ಟೆ ಜನತೆ ನೀಡಿದ ಆತ್ಮೀಯ ಸ್ವಾಗತಕ್ಕೆ ಕೃತಜ್ಞತೆಸಲ್ಲಿಸಿದ ಅವರು, ಜನರ ವಿಶ್ವಾಸ ಮತ್ತು ಸಹಕಾರದಿಂದ ಈ ಶಾಖೆ ಯಶಸ್ಸು ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಆರ್ಬಿಐ ಮಾರ್ಗಸೂಚಿಗಳ ಅನುಸಾರ ಕಾರ್ಯನಿರ್ವಹಿಸುತ್ತಿರುವ ಎಂಸಿಸಿ ಬ್ಯಾಂಕ್ ಗ್ರಾಹಕರ ಅಗತ್ಯಗಳಿಗೆಆದ್ಯತೆ ನೀಡುವ ಮೂಲಕ ಉತ್ತಮ ಹೆಸರು ಗಳಿಸಿದೆ ಎಂದು ಅವರು ಹೇಳಿದರು. ಅರ್ಹ ಠೇವಣಿಗಳೆಲ್ಲವೂಡಿಐಸಿಜಿಸಿ (DICGC) ಮೂಲಕ ವಿಮಾ ರಕ್ಷಣೆಯಲ್ಲಿರುವುದರಿಂದ ಗ್ರಾಹಕರು ಆತಂಕವಿಲ್ಲದೆ ಬ್ಯಾಂಕಿನಲ್ಲಿವ್ಯವಹರಿಸಬಹುದು ಎಂದು ತಿಳಿಸಿದರು.ಪ್ರಸ್ತುತ ಆಡಳಿತದ ಅವಧಿಯಲ್ಲಿ ಐದು ಹೊಸ ಶಾಖೆಗಳನ್ನು ಆರಂಭಿಸಲಾಗಿದ್ದು, ಪ್ರತಿಯೊಂದು ಶಾಖೆಯೂಮೊದಲ ವರ್ಷದಲ್ಲೇ ₹10 ಕೋಟಿ ವ್ಯವಹಾರ ಸಾಧಿಸಿರುವುದು ಸಿಬ್ಬಂದಿಯ ಪರಿಶ್ರಮ ಮತ್ತು ಗ್ರಾಹಕರ ವಿಶ್ವಾಸದಫಲ ಎಂದು ಹೇಳಿದರು.
ಸಮುದಾಯ ಸೇವೆಯ ಅಂಗವಾಗಿ ಎಂಸಿಸಿ ಬ್ಯಾಂಕ್ ದೇರಳಕಟ್ಟೆ ಭಾಗದ ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರಗಳಸಾಧಕರಾದ ಫ್ರ್ಯಾಂಕಿ ಫ್ರಾನ್ಸಿಸ್ ಕುಟಿನ್ಹಾ, ಅಲ್ವಿನ್ ಜೆರೋಮ್ ಡಿಸೋಜಾ, ಫಯಾಝ್ ಮಡೂರು, ಸಿಎಮ್ಯಾಕ್ಸಿಮ್ ಫೆರ್ನಾಂಡಿಸ್, ಉಗ್ಗಪ್ಪ ಪೂಜಾರಿ ಹಾಗೂ ಶಫಿ ಬಬ್ಬುಕಟ್ಟೆ ಅವರನ್ನು ಸನ್ಮಾನಿಸಿತು.ಬ್ಯಾಂಕ್ ವತಿಯಿಂದ ಉರ್ಸುಲಿನ್ ಸಿಸ್ಟರ್ಸ್ ವಿಶೇಷ ಚೇತನ ಮಕ್ಕಳ ಶಾಲೆಗೆ ₹1,00,000, ಪ್ರಿನ್ಸಿತಾ ಡಿಸೋಜಾಅವರ ವಿದ್ಯಾಭ್ಯಾಸಕ್ಕೆ ₹25,000, ಮರ್ಸಿ ಕೇರ್ ಚಾರಿಟೇಬಲ್ ಟ್ರಸ್ಟ್ಗೆ ₹50,000 ಹಾಗೂ ಓಲವಿನಹಳ್ಳಿಆಶ್ರಮಕ್ಕೆ ₹1,00,000 ಧನಸಹಾಯ ವಿತರಿಸಲಾಯಿತು.
ನೂತನ ಶಾಖೆಯ ಒಳಾಂಗಣ ಕಾಮಗಾರಿಗೆ ಕೊಡುಗೆ ನೀಡಿದ ಎಂಜಿನಿಯರ್ ಕಾರ್ತಿಕ್ ಕಿರಣ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳು ಹಾಗೂ ಗೌರವ ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿ
ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿ ಸಿಲ್ವಾ, ನಿರ್ದೇಶಕರಾದ ಆಂಡ್ರ್ಯೂ ಡಿಸೋಜಾ, ಡೇವಿಡ್ಡಿ;ಸೋಜಾ, ಮೆಲ್ವಿನ್ ವಾಸ್, ಜೆ.ಪಿ. ರೋಡ್ರಿಗಸ್, ಅನಿಲ್ ಪತ್ರಾವೊ, ಎಲ್ರಾಯ್ ಕಿರಣ್ ಕ್ರಾಸ್ತಾ, ಐರಿನ್
ರೆಬೆಲ್ಲೋ, ವಿನ್ಸೆಂಟ್ ಲಸ್ರಾದೊ, ಸುಶಾಂತ್ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರೂಜ್, ಅಲ್ವಿನ್ ಪಿ. ಮೊಂತೇರೊ ಹಾಗೂ ಮಹಾಪ್ರಬಂಧಕ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.


