ಯಕ್ಷಾಶ್ರಯ ಯೋಜನೆಯಡಿ ಕಲಾವಿದರಿಗೆ ಸಹಾಯಧನ ವಿತರಣೆ
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಸದನ್ ಟ್ರಸ್ಟ್ ನ ಯಕ್ಷಾಶ್ರಯ ಯೋಜನೆಯಡಿ ಅರ್ಹ ಫಲಾನುಭವಿ ತೆಂಕು ಬಡಗಿನ ಕಲಾವಿದರುಗಳಿಗೆ ಸುಮಾರು ರೂಪಾಯಿ 25 ಲಕ್ಷ ಮೊತ್ತದ ಸಹಾಯ ಧನವನ್ನು ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು ಬಲ್ಲಾಳ್ ಬಾಗ್ ನಲ್ಲಿರುವ ಪತ್ತ್ ಮುಡಿ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿದರು.ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ...
ಜನಾಂಗೀಯ ಅಧ್ಯಯನದ ಮಾದರಿ ಸೃಷ್ಟಿಸಿದ ವಾಮನ ನಂದಾವರರು : ಡಾ. ಚಲಪತಿ
ಮಂಗಳೂರು: ಜಾನಪದ ಸಂಶೋಧಕರಾಗಿದ್ದ ಡಾ. ವಾಮನ ನಂದಾವರ ಅವರು ವೈಯಕ್ತಿಕ ನೆಲೆಯಲ್ಲಿ ನಡೆಸಿದ ಅಧ್ಯಯನ ಕೇವಲ ಕರಾವಳಿಯ ಜನಪದೀಯ ಹಾಗೂ ಜನಾಂಗೀಯ ಅಧ್ಯಯನಕ್ಕೆ ಮಾತ್ರ ಸೀಮಿತವಾದುದಲ್ಲ, ಅದು ಒಟ್ಟು ಕರ್ನಾಟಕದ ಒಳಗೆ ಜನಪದೀಯವಾಗಿ ಜನಾಂಗೀಯ ಅಧ್ಯಯನವನ್ನು ಹೇಗೆ ಮಾಡಬೇಕೆಂಬ ಮಾದರಿಯನ್ನು ತೋರಿಸಿ ಕೊಟ್ಟಿತು ಎಂದು ಮೈಸೂರು ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದ ಸಂಶೋಧಕ ಡಾ....
ಎಸ್‌ಡಿಎಂ ಕಾನೂನು ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘದ ಪದಗ್ರಹಣ
ಮಂಗಳೂರು : ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘದ 2026 -28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಹೈಕೋರ್ಟ್ ವಕೀಲ ಪಿ.ಪಿ.ಹೆಗ್ಡೆ ವಿದ್ಯಾರ್ಥಿ ವೇತನ ವಿತರಿಸಿದರು....
ಕಂದಾಯ-ಅರಣ್ಯ ಭೂಮಿ: ಜಿಲ್ಲಾ ಮಟ್ಟದಲ್ಲಿ ಎಸ್ ಐ ಟಿ ರಚನೆ: ಸಚಿವ ಕೃಷ್ಣ ಬೈರೇಗೌಡ
ಮಂಗಳೂರು: ಸುಪ್ರೀಂ ಕೋರ್ಟ್ ನ ಆದೇಶದಂತೆ ಅರಣ್ಯ ಭೂಮಿ ಮತ್ತು ಕಂದಾಯ ಭೂಮಿ ಗುರುತಿಸಿ ವರದಿ ಸಲ್ಲಿಸಲು ಜಿಲ್ಲಾ ಮಟ್ಟದಲ್ಲಿ ವಿಶೇಷ ತನಿಖಾ ದಳ (ಎಸ್ ಐ ಟಿ ) ರಚಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.ಅವರು ಶನಿವಾರ ಮುಲ್ಕಿ ತಾಲೂಕು ಆಡಳಿತ ಕೇಂದ್ರ ಪ್ರಜಾಸೌಧ ಉದ್ಘಾಟಿಸಿ ಮಾತನಾಡಿದರು.ಕಂದಾಯ ಮತ್ತು ಅರಣ್ಯ...
ಕೆವಿನ್ ಮಿಸ್ಕಿತ್ ಸಂಗೀತ ಕಾರ್ಯಕ್ರಮದ ಪೊಸ್ಟರ್ ಬಿಡುಗಡೆ
ಮ೦ಗಳೂರು: ಸಮಾಜಮುಖಿ ಕಾರ್ಯಕ್ರಮಗಳಿಗೆ ಸ್ಪಂದಿಸುವ, ಮಾನಸಿಕ ಅಸ್ವಸ್ಥರಿಗೆ ಉಭಯಹಸ್ತ ನೀಡಿ ಅಶ್ರಯದಾತರಾಗಿ ಹೆಸರುವಾಸಿಯಾಗಿರುವ "ಸ್ನೇಹಾಲಯ ಚ್ಯಾರಿಟೇಬಲ್ ಸಂಸ್ಥೆ ಮಂಜೇಶ್ವರ" ಇವರ 17 ವರುಷಗಳ ಸೇವೆಯ ತನ್ನ ವಿವಿಧ ಕಾರ್ಯ ಯೋಜನೆಗಳ ಅನುಷ್ಟಾನಕ್ಕೆ ಸಹಾಯರ್ಥವಾಗಿ ಮಂಗಳೂರಿನ ಪ್ರಖ್ಯಾತ ಸಂಗೀತಗಾರ, ಯುವ ಪ್ರತಿಭೆಯಾಗಿರುವ ಕೆವಿನ್ ಮಿಸ್ಕಿತ್ ಇವರ 54ನೇ ಕೊಂಕಣಿ ಸಂಗೀತ ಸಂಜೆಯನ್ನು ಅಯೋಜಿಸಿದೆ.ಜೂನ್ 21ನೇ ಭಾನುವಾರ...
ಕಡಲ್ಕೊರೆತ : ಕರಾವಳಿ ತೀರದ ಸಂರಕ್ಷಣೆಗೆ ಅಗತ್ಯ ಕ್ರಮಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಆಗ್ರಹ
ನವದೆಹಲಿ: ಉಳ್ಳಾಲ-ಸೋಮೇಶ್ವರ ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಹೆಚ್ಚಾಗುತ್ತಿರುವ ಕಡಲ್ಕೊರೆತ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕರಾವಳಿ ತೀರದ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆ.
ನಿಯಮ 377ರಡಿ ಇಂದು ಈ ಗಂಭೀರ ವಿಷಯ ಪ್ರಸ್ತಾಪಿಸಿರುವ ಸಂಸದರು, ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 36.66 ಕಿ.ಮೀ ಕರಾವಳಿ ತೀರದ ಪೈಕಿ...
ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಕುಂದು ಕೊರತೆ : ಸಹಾಯವಾಣಿ
ಮಂಗಳೂರು: ಜಿಲ್ಲೆಯಲ್ಲಿ ಗೃಹ ಬಳಕೆ ಅನಿಲ ಸಿಲಿಂಡರ್‍ಗಳ ದಾಸ್ತಾನು ಲಭ್ಯವಿದ್ದು, ಜಿಲ್ಲೆಯ ಎಲ್ಲಾ ಗೃಹ ಬಳಕೆ ಅನಿಲ ಗ್ರಾಹಕರು ಯಾರು ಸಹ ಗಾಬರಿ/ ಆತಂಕಪಡಬಾರದೆಂದು ಹಾಗೂ ಹೆಚ್ಚುವರಿ ದಾಸ್ತಾನು ಮಾಡಿಕೊಳ್ಳಬಾರದು.ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಸಿಲಿಂಡರ್‍ಗಳ ಕೊರತೆ ಇಲ್ಲದಿರುವುದರಿಂದ ಸಾರ್ವಜನಿಕರು ಭಯ ಬೀಳುವ ಅಗತ್ಯವಿಲ್ಲ ಮತ್ತು ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು...
ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
ಮಂಗಳೂರು: ಅಪ್ರಾಪ್ತ ವಯಸ್ಕ ಬಾಲಕನನ್ನು ದುಡಿಸುತ್ತಿದ್ದ ಮಾಲೀಕನಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಮೂಡಬಿದ್ರೆ ನ್ಯಾಯಾಲಯ ತೀರ್ಪು ನೀಡಿದೆ.2024 ರ ಸೆ. 19 ರಂದು ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಮೂಡಬಿದ್ರೆ ಕಡಲಕೆರೆಯಲ್ಲಿ ಅನೀರೀಕ್ಷಿತ ತಪಾಸಣೆ ನಡೆಸಿದ ಸಂದರ್ಭದಲ್ಲಿ ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಸಂಸ್ಥೆಯೊಂದರಲ್ಲಿ 16 ವಯಸ್ಸಿನ ಕಿಶೋರ ಕಾರ್ಮಿಕನು ಕೆಲಸ...
ಮಾ.21ರಂದು ಮಂಗಳೂರಿನಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ:ಡಾ.ಎಂ.ಮೋಹನ ಆಳ್ವ
ಮಂಗಳೂರು : ಆಳ್ವಾಸ್ ನುಡಿಸಿರಿ- ವಿರಾಸತ್ ಮಂಗಳೂರು ಘಟಕದ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿ ಕಲಾವಿದರಿಂದ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಮಾ.21ರಂದು ಸಾಯಂಕಾಲ 6 ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ. ನಮ್ಮ ಸಾಂಸ್ಕೃತಿಕ, ಜನಪದ ಹಾಗೂ ಶಾಸ್ತ್ರೀಯ ಕಲೆಗಳನ್ನುಜನಮಾನಸಕ್ಕೆ ತಲುಪಿಸುವುದು ಈ ಕಾರ್ಯಕ್ರಮದ ಆಶಯವಾಗಿದೆ ಎಂದು ಆಳ್ವಾಸ್ ಶಿಕ್ಷಣ...
ಅಭಾಸಾಪ ದ.ಕ.ಜಿಲ್ಲಾ ಅದ್ಯಕ್ಷೆಯಾಗಿ ವೀಣಾ.ಟಿ.ಶೆಟ್ಟಿ ಆಯ್ಕೆ
ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ದ.ಕ.ಜಿಲ್ಲಾ ಘಟಕದ ಅಧ್ಯಕ್ಷೆಯಾಗಿ ವೀಣಾ. ಟಿ .ಶೆಟ್ಟಿ ಆಯ್ಕೆಯಾಗಿದ್ದಾರೆ
ಕಾರ್ಯದರ್ಶಿಯಾಗಿ ಲತೇಶ ಬಾಕ್ರಬೈಲ್ , ಜತೆ ಕಾರ್ಯದರ್ಶಿಗಳಾಗಿ ಗೀತಾ ಲಕ್ಷ್ಮೀಶ, ಶ್ರೀಲಕ್ಷ್ಮೀ ಮಠದಮೂಲೆ, ಕೋಶಾಧಿಕಾರಿಯಾಗಿ ರತ್ನಾವತಿ ಬೈಕಾಡಿ. ಮಾಧ್ಯಮ ಪ್ರಮುಖರಾಗಿ ಚಂದ್ರಶೇಖರ ಕುಳವರ್ಮ, ಮಹಿಳಾ ಪ್ರಕಾರ ಪ್ರಮುಖರಾಗಿ ಸುಮಂಗಲ ರತ್ನಾಕರ , ಮಕ್ಕಳ ಪ್ರಕಾರ...






