ವಿಧಾನ ಪರಿಷತ್ ಚುನಾವಣೆ : ಗುರುವಾರ ಮತ ಎಣಿಕೆ
ಮಂಗಳೂರು: ವಿಧಾನಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆದ ಉಪಚುನಾವಣೆಯ ಮತಗಳ ಎಣಿಕೆ ಗುರುವಾರ ನಡೆಯಲಿದೆ. ನಗರದ ಸಂತ ಅಲೋಷಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ.
ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮತ ಎಣಿಕೆಗೆ ಒಂದು ಕೊಠಡಿ ವ್ಯವಸ್ಥೆ ಮಾಡಲಾಗಿದ್ದು 12 ಮೇಜುಗಳಲ್ಲಿ...
ದುಬೈ ಗಡಿನಾಡ ಉತ್ಸವದಲ್ಲಿ ಶೈಕ್ಷಣಿಕ ಶ್ರೇಷ್ಠತೆಗಾಗಿ ಡಾ. ಫಖ್ರುದ್ದೀನ್ ಕುನಿಲ್ ಅವರಿಗೆ ಸನ್ಮಾನ
ಮ೦ಗಳೂರು: ದುಬೈನ ಔದ್ ಮೆಥಾದಲ್ಲಿರುವ ‘ಜೆಮ್’ ಖಾಸಗಿ ಶಾಲೆಯಲ್ಲಿ ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕದಿಂದ ಅಕ್ಟೋಬರ್ 13ರಂದು ಆಯೋಜಿಸಲಾದ ದುಬೈ ಗಡಿನಾಡ ಉತ್ಸವ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳಿಗಾಗಿ ಪ್ರತಿಷ್ಠಿತ ಗಡಿನಾಡ ಪ್ರಶಸ್ತಿಯನ್ನು ಕುನಿಲ್ ಗ್ರೂಪ್ ಅಧ್ಯಕ್ಷರಾದ ಡಾ। ಫಖ್ರುದ್ದೀನ್ ಕುನಿಲ್, ಅವರಿಗೆ ನೀಡಿ ಗೌರವಿಸಿತು.
35 ವರ್ಷಗಳ ಹಿಂದೆ...
ಉಚಿತ ಆರೋಗ್ಯ ತಪಾಸಣೆ
ಮ೦ಗಳೂರು: ಮಂಗಳೂರಿನ ಬಾಲ ಮರಿಯಮ್ಮನವರ ದೇವಾಲಯ, ಬಜ್ಜೋಡಿ, ಸಭಾಂಗಣದಲ್ಲಿ ಆಕ್ಟೋಬರ್ 20 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ವಂದನೀಯ ಫಾ.ಡೊಮಿನಿಕ್ ವಾಜ್ ರವರು ಪ್ರಾರ್ಥನೆ ನಡೆಸಿ ಆಶೀರ್ವದಿಸಿದರು, ಡೊ ಅಕ್ಶಯ್, ಸ್ಥಳೀಯ ಕಾರ್ಪೊರೇಟರ್ ಕೇಶವ ಮರೊಳಿ ಹಾಗೂ ಕಥೊಲಿಕ್ ಸಭೆಯ ಅಧ್ಯಕ್ಷ ವಿನ್ಸೆಂಟ್ ಪಿಂಟೊ ದೀಪ ಬೆಳಗಿಸಿ ಉದ್ಘಾಟನೆ ನಡೆಸಿದರು.
ಫಾದರ್ ಮುಲ್ಲರ್...
ಅಬಕಾರಿ ಕಾರ್ಯಾಚರಣೆ : ಮದ್ಯ, ಗಾಂಜಾ ವಶ
ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಮಾರಾಟ/ಸಾಗಾಟ ಚಟುವಟುಕೆಗಳನ್ನು ತಡೆಗಟ್ಟುವ ಸಂಬಂಧ ಅಬಕಾರಿ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ತೀವ್ರ ಕಾರ್ಯಾಚರಣೆ ನಡೆಸಿ ಅಕ್ಟೋಬರ್ ತಿಂಗಳಿನಲ್ಲಿ ಜಪ್ತುಪಡಿಸಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಅಕ್ಟೋಬರ್ 18ರಂದು ಬೈಕಂಪಾಡಿಯ, ಕೆ.ಎಸ್.ಬಿ.ಸಿ.ಎಲ್ ಡಿಪೊ-2ಇಲ್ಲಿಗೆ ಹಾಸನದಿಂದ ಒಟ್ಟು 1100 ಪೆಟ್ಟಿಗೆ (10,680 ಲೀ) ಬಿಯರ್ ಅವಧಿ ಮೀರಿದ ರಹದಾರಿ ಪತ್ರದೊಂದಿಗೆ ಲಾರಿಯ ಮೂಲಕ...
ವಿಪತ್ತು ನಿಯಂತ್ರಣ ಅನುದಾನ ಬಳಕೆಗೆ ಯೋಜನೆ : ಜಿ.ಪಂ ಸಿಇಓ ಡಾ. ಆನಂದ್
ಮಂಗಳೂರು: ರಾಜ್ಯ ವಿಪತ್ತು ತಗ್ಗಿಸುವಿಕೆ ಅನುದಾನದಿಂದ ಜಿಲ್ಲೆಯಲ್ಲಿ ಪದೇ ಪದೇ ಸಂಭವಿಸುವ ಪ್ರಾಕೃತಿಕ ವಿಕೋಪ ಅನಾಹುತಗಳನ್ನು ಗುರುತಿಸಿ ಅವುಗಳ ಅಪಾಯ ತಗ್ಗಿಸಲು ಅಗತ್ಯ ಯೋಜನೆಗಳನ್ನು ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಕೆ ತಿಳಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಿಟಿಗೇಶನ್ ಅನುದಾನದಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಹಾಗೂ...
ನ.9-10ರಂದು ಆಳ್ವಾಸ್ ಕಾಲೇಜಿನಲ್ಲಿ “ಗದ್ದಿಗೆ” ಕರಾವಳಿ ಮರಾಟಿ ಸಮಾವೇಶ
ಮಂಗಳೂರು: “ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ನ.9 ಮತ್ತು 10ರಂದು ಮರಾಟಿಗರ ಸಮಗ್ರ ಬಲವರ್ಧನೆ ಮತ್ತು ಪ್ರಗತಿಗಾಗಿ ”ಗದ್ದಿಗೆ“ ಮರಾಟಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಕರಾವಳಿ ಮರಾಠಿ ಸಮಾವೇಶದ ಅಧ್ಯಕ್ಷ ಹೆಚ್.ರಾಜೇಶ್ ಪ್ರಸಾದ್ ಐಎಎಸ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.22 ವರ್ಷಗಳ ಬಳಿಕ ಸಮಾವೇಶ ನಡೆಯಲಿದ್ದು ನಮ್ಮ ಈ ಸಮಾವೇಶವು ಮುಖ್ಯವಾಗಿ ಶಿಕ್ಷಣ,...
ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮ
ಮಂಗಳೂರು: ರಾಷ್ಟ್ರೀಯ ರೋಗ ನಿಯಂತ್ರಣ ಕಾರ್ಯಕ್ರಮದಡಿ 6ನೇ ಸುತ್ತಿನ ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಅಕ್ಟೋಬರ್ 21 ರಿಂದ ನವೆಂಬರ್ 20 ರ ತನಕ ಹಮ್ಮಿಕೊಳ್ಳಲಾಗಿದ್ದು, ಈ ಲಸಿಕಾ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಕೆ. ಸೂಚಿಸಿದ್ದಾರೆ.
ಅವರು ಕಾರ್ಯಕ್ರಮದ ಜಿಲ್ಲಾ ಮಟ್ಟದ...
ಮಾತಾ ಅಮೃತಾನಂದಮಯಿ ಮಠ: ಮಾದಕ ವ್ಯಸನಗಳ ವಿರುದ್ಧ ಯುವ ಜನರ ಜಾಗೃತಿ ಕಾರ್ಯಕ್ರಮ
ಮಂಗಳೂರು : ನಗರದ ಮಾತಾ ಅಮೃತಾನಂದಮಯಿ ಮಠದ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರದ ವತಿಯಿಂದ ಮಾದಕ ವ್ಯಸನಗಳ ವಿರುದ್ಧ ಯುವ ಜನರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣರವರ ನಿರ್ದೇಶನದಂತೆ ಮಂಗಳೂರಿನ ಅಮೃತ ವಿದ್ಯಾಲಯಂನಲ್ಲಿ ಜರುಗಿದ ಈ ವಿಶೇಷ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಕುಲಕರ್ಣಿಯವರು...
ಅರವಿಂದ ಬೋಳಾರ್: ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಅ.23ರಂದು ಬೆಳಗ್ಗೆ 11.30ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಜನಪ್ರಿಯ ನಟ ಅರವಿಂದ ಬೋಳಾರ್ ಭಾಗವಹಿಸಿ ಸಂವಾದ ನಡೆಸಲಿದ್ದಾರೆ.
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ...
ದೀಪಾವಳಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲಗಳ ಸಂಚಾರ
ಮ೦ಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸುವ ಸಲುವಾಗಿ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯಟರ್ಮಿನಲ್-ಕಾರವಾರ ಮತ್ತು ಯಶವಂತಪುರ-ಮಂಗಳೂರು ಜಂಕ್ಷನ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನುಓಡಿಸಲು ನೈಋತ್ಯ ರೈಲ್ವೆ ವಲಯವು ನಿರ್ಧರಿಸಿದೆ.
ವಿವರಗಳು ಈ ಕೆಳಗಿನಂತಿವೆ:
ರೈಲು ಸಂಖ್ಯೆ 06597 ಅಕ್ಟೋಬರ್ 30ರಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್...