ಮಾದಕ ವಸ್ತು ಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳ ಸೆರೆ
ಮಂಗಳೂರು : ಮಾದಕ ವಸ್ತು ಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬ೦ಧಿಸಿದ್ದಾರೆ.ಮಂಜೇಶ್ವರ ಹೊಸಬೆಟ್ಟುನ ಮುಸ್ತಫಾ (37) ಹಾಗೂ ಮಂಜೇಶ್ವರ ಕುಂಜತ್ತೂರು ನ ಶಂಶುದ್ದೀನ್ ಎ(38 ) ಬ೦ಧಿತ ಆರೋಪಿಗಳು.ಆರೋಪಿಗಳಿಂದ ಒಟ್ಟು 95,000 ರೂ ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ.
ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣಾ...
ಕಣಾ೯ಟಕ ಬ್ಯಾ೦ಕಿನ ಹಿರಿಯ ಅಧಿಕಾರಿ ಆತ್ಮಹತ್ಯೆ
ಮ೦ಗಳೂರು: ಕಣಾ೯ಟಕ ಬ್ಯಾ೦ಕಿನ ಹಿರಿಯ ಅಧಿಕಾರಿ ವಾದಿರಾಜ್ ಕೆ.ಎ.(5೧) ಅವರು ಕತ್ತು ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದುಕೊ೦ಡು ಆತ್ಮಹತ್ಯೆ ಮಾಡಿಕೊ೦ಡಿರುವ ಘಟನೆ ಗುರುವಾರ ನಡೆದಿದೆ.
ಕಣಾ೯ಟಕ ಬ್ಯಾ೦ಕಿನ ಕೇ೦ದ್ರ ಕಚೇರಿಯಲ್ಲಿ ಚೀಫ್ ಕ೦ಪ್ಲೆಯೆನ್ಸ್ ಅಫೀಸರ್ ಆಗಿರುವ ವಾದಿರಾಜ್ ಕೆ.ಎ.(5೧) ನಗರದ ಬೋ೦ದೇಲ್ ನ ಅಪಾಟ್‌೯ಮೆ೦ಟ್ ವೊ೦ದರಲ್ಲಿ ವಾಸಿಸುತ್ತಿದ್ದರು....
ಪಿ.ಎಂ.ಸ್ವನಿಧಿ ಯೋಜನೆ ಅನುಷ್ಠಾನಕ್ಕೆ ಎಸ್.ಎ.ರಾಮದಾಸ್ ಕರೆ
ಮ೦ಗಳೂರು: ಮಾಜಿ ಸಚಿವರಾದ ಹಾಗೂ ಪಿ.ಎಂ. ಸ್ವನಿಧಿ ಯೋಜನೆಯ ರಾಜ್ಯ ಸಂಚಾಲಕ ಎಸ್.ಎ. ರಾಮದಾಸ್‌ರವರು ನ.8 ರಂದು ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖರೊಂದಿಗೆ, ಶಾಸಕರು ಹಾಗೂ ಮಹಾನಗರ ಪಾಲಿಕೆ ಸದಸ್ಯರೊಂದಿಗೆ ಕೇಂದ್ರ ಸರಕಾರದ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಹಾಗೂ ವಿಶ್ವಕರ್ಮ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಸಭೆ ನಡೆಸಿದರು.ಸ್ವನಿಧಿ ಯೋಜನೆಯ ಅಡಿಯಲ್ಲಿ...
ಮಹಿಳೆಯರು ನೀರು ಸ೦ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ : ನಳಿನ್ ಕುಮಾರ್ ಕಟೀಲ್
ಮಂಗಳೂರು:ನೀರು ನಿಸರ್ಗದ ಅಮೂಲ್ಯವಾದ ಕೊಡುಗೆ, ಮನುಷ್ಯ ಜೀವಿಸಲು ಆಹಾರಕ್ಕಿಂತ ನೀರು ಮಹತ್ವವಾದದ್ದು. ನೀರು ಇಲ್ಲದೆ ಯಾವುದೇ ಜೀವ ಬದುಕಲು ಅಸಾಧ್ಯ ಎಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಹೇಳಿದರು.ಅವರು ಗುರುವಾರ ತುಂಬೆಯಲ್ಲಿ ಮಹಾನಗರ ಪಾಲಿಕೆ ನೀರು ಸಂಸ್ಕರಣ ಘಟಕದಲ್ಲಿ ನಡೆದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಿರ್ದೇಶನ, ಅಮೃತ 2.0 ಯೋಜನೆಯಡಿ...
ನಿಶ್ಚಿತಾರ್ಥಕ್ಕಾಗಿ ಪಡೆದುಕೊ೦ಡ ಚಿನ್ನಾಭರಣಗಳನ್ನು ಹಿಂತಿರುಗಿಸದೆ ವಂಚನೆ: ದೂರು
ಬಂಟ್ವಾಳ : ನಿಶ್ಚಿತಾರ್ಥಕ್ಕೆ೦ದು ಪಡೆದುಕೊ೦ಡ ಚಿನ್ನಾಭರಣಗಳನ್ನು ಹಿಂತಿರುಗಿಸದೇ ವಂಚನೆ ಮಾಡಲಾಗಿದೆ ಎ೦ದು ಬಂಟ್ವಾಳ ನಗರ ಠಾಣೆಗೆ ಮಹಿಳೆಯೋವ೯ರುದೂರು ನೀಡಿದ್ದಾರೆ.
ಬಂಟ್ವಾಳ ಬಿ ಮೂಡ ಗ್ರಾಮದ ನಿವಾಸಿ ಸಂಧ್ಯಾ ಎಂಬವರ ದೂರಿನಂತೆ, ಅವರು 23.04.2023 ರಂದು ವಿದೇಶಕ್ಕೆ ತೆರಳಲು ಮಂಗಳೂರು ಏರ್ ಪೋರ್ಟ್ ನಲ್ಲಿದ್ದಾಗ ಸ್ನೇಹಿತೆ ಅಶ್ಚಿನಿ ಎಂಬವರು ಮದುವೆಯಾಗುವ ಹುಡುಗ ಎಂದು ಹೇಳಿ ಪರಿಚಯಿಸಿದ ಶ್ರೀಕಾಂತ್...
ಮಂಗಳೂರು – ಬೆಂಗಳೂರು ಗ್ರೀನ್ ಫೀಲ್ಡ್ ಹೈಸ್ಪೀಡ್ ಕಾರಿಡಾರ್ ಬಗ್ಗೆ ಮಹತ್ವದ ಚರ್ಚೆ
ಬೆಂಗಳೂರು - ಮಂಗಳೂರು ಇಂಟಗ್ರೆಟೇಡ್ ಗ್ರೀನ್ ಫೀಲ್ಡ್ ಹೈ ಸ್ಪಿಡ್ ಕಾರಿಡಾರ್ ನಿರ್ಮಾಣ ಕುರಿತಂತೆ ಯೂರೋಪಿಯನ್ ಬ್ಯುಸಿನೆಸ್ ಆಂಡ್ ಟೆಕ್ನಾಲಜಿ ಸಂಸ್ಥೆಯ ಮುಖ್ಯಸ್ಥರು ಗುರುವಾರ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಚರ್ಚೆ ನಡೆಸಿದರು. ಸಭೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಪಾಲ್ಗೊಂಡಿದ್ದರು.
ಮಂಗಳೂರು - ಬೆಂಗಳೂರು ಹಸಿರುವ...
ಪಟಾಕಿ ಮಳಿಗೆ ಗೊಂದಲ ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದ ಹುನ್ನಾರ : ಶಾಸಕ ಕಾಮತ್
ಮ೦ಗಳೂರು: ದೀಪಾವಳಿಯ ಸಂದರ್ಭದಲ್ಲಿಯೇ ಹತ್ತು ಹಲವು ನೆಪವೊಡ್ಡಿ ಹಬ್ಬದ ಸಂಭ್ರಮದ ವಾತಾವರಣಕ್ಕೆ ಅಡ್ಡಿಪಡಿಸುವ ತನ್ನ ಎಂದಿನ ಚಾಳಿಯನ್ನು ಕಾಂಗ್ರೆಸ್ ಸರ್ಕಾರ ಮತ್ತೆ ಶುರು ಮಾಡಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೀಪಾವಳಿಯ ಸಂದರ್ಭದಲ್ಲಿ ಮಾತ್ರ ಪಟಾಕಿ ವಿಷಯದಲ್ಲಿ ಇಲ್ಲ ಸಲ್ಲದ ನಿಯಮಾವಳಿಗಳನ್ನು ಹೇರಿ ಗೊಂದಲಮಯ ವಾತಾವರಣ ಸೃಷ್ಟಿಸುವುದು, ಆ ಮೂಲಕ ಹಿಂದೂ...
ಮೇಸೆಜ್ ನಲ್ಲಿದ್ದ ಲಿಂಕ್ ನ್ನು ಓಪನ್ ಮಾಡಿ 21.51 ಲಕ್ಷ ರೂ. ಕಳೆದುಕೊ೦ಡರು !
ಮ೦ಗಳೂರು: ವ್ಯಕ್ತಿಯೋವ೯ರಿಗೆ ವಾಟ್ಸಾಪ್ ನಲ್ಲಿ ಟಾಸ್ಕ್ ನೀಡಿ 21.51 ಲಕ್ಷ ರೂ.ಮೋಸದಿಂದ ವರ್ಗಾಯಿಸಿಕೊಂಡಿರುವ ಬಗ್ಗೆ ಮ೦ಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ದೂರುದಾರರ ವಾಟ್ಸಾಪ್ ನಂಬರ್ ಗೆ ದಿನಾಂಕ 4-11-2023 ರಂದು +84334590184 ನಂಬ್ರದಿಂದ ಮೇಸೆಜ್ ಬಂದಿತ್ತು. ಸದ್ರಿ ಮೇಸೆಜ್ ನಲ್ಲಿದ್ದ https://t.me/khkf021 ಎಂಬ ಲಿಂಕ್ ನ್ನು ಓಪನ್ ಮಾಡಿದಾಗ ಟೆಲಿಗ್ರಾಂ ಆಪ್ ನಲ್ಲಿ...
ವಿವಿ ಕಾಲೇಜಿನಲ್ಲಿ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ
ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ವಾಣಿಜ್ಯ ಸಂಘ, ಗ್ರಾಹಕ ವೇದಿಕೆ ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಮಂಗಳೂರಿನ ಪ್ರಮಾಣೀಕೃತ ಆರ್ಥಿಕ ಯೋಜಕ ನವೀನ್ ಜೂಲಿಯನ್ ರೆಗೊ, ವಿದ್ಯಾರ್ಥಿ ಹಂತದಲ್ಲೇ ವೈಯಕ್ತಿಕ ಆರ್ಥಿಕ ಶಿಸ್ತು ಹಾಗೂ ಉಳಿತಾಯದ ಕುರಿತಾದ ಜ್ಞಾನವನ್ನು ಬೆಳೆಸಿಕೊಳ್ಳಬೇಕು....
ಪೊಲೀಸ್ ಆಯುಕ್ತರ ಕಚೇರಿ:ಫೋನ್-ಇನ್, ಸಾರ್ವಜನಿಕರ ಕುಂದುಕೊರತೆಗಳ ಸಭೆ
ಮಂಗಳೂರು: ಮಂಗಳೂರು ನಗರ ಪೊಲೀಸ್ ಘಟಕದ ವತಿಯಿಂದ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುವ ಸಲುವಾಗಿ ದಿನಾಂಕ: 11-11-2023 ನೇ ಶನಿವಾರದಂದು ಬೆಳಿಗ್ಗೆ 10.00 ಗಂಟೆಯಿಂದ 11.00 ಗಂಟೆಯವರೆಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಫೋನ್-ಇನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸದರಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಫೋನ್ ಮೂಲಕ ನೇರವಾಗಿ ಪೊಲೀಸ್ ಆಯುಕ್ತರೊಂದಿಗೆ ಸಂಭಾಷಣೆ ಮಾಡಿ...