ಎನ್‌ಐಟಿಕೆ ಸುರತ್ಕಲ್:ಮೂರು ಮೆಗಾ ಹಾಸ್ಟೆಲ್ ಗಳ ಉದ್ಘಾಟನೆ

0
ಸುರತ್ಕಲ್: ಎನ್‌ಐಟಿಕೆ ಸುರತ್ಕಲ್ ಇದರ ಮೂರು ಮೆಗಾ ಹಾಸ್ಟೆಲ್ ಗಳು ಮ೦ಗಳವಾರ ಉದ್ಘಾಟನೆಗೊ೦ಡಿತು.ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಬಾಲಕರ ಹಾಸ್ಟೆಲ್ ಗಳಾದ ಬ್ರಹ್ಮಗಿರಿ , ಶಿವಾಲಿಕ್ ಮತ್ತು ಬಾಲಕಿಯರ ಹಾಸ್ಟೆಲ್ -ಗೋದಾವರಿಯನ್ನು ದೇಶಕ್ಕೆ ಸಮರ್ಪಿಸಿದರು. ಈ ಯೋಜನೆಯನ್ನು 130 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕಾರ್ಯಕ್ರಮವು...

ಶಾಸಕ ವೇದವ್ಯಾಸ ಕಾಮತ್‌,ಡಾ.ಭರತ್‌ ಶೆಟ್ಟಿ ಅವರಿಗೆ ನಿರೀಕ್ಷಣ ಜಾಮೀನು

0
ಮಂಗಳೂರು: ಮಂಗಳೂರಿನ ಜೆರೋಸಾ ಶಾಲೆ ಮುಂಭಾಗ ನಡೆದ ಪ್ರತಿಭಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ವೇದವ್ಯಾಸ ಕಾಮತ್‌ ಹಾಗೂ ಡಾ. ಭರತ್‌ ಶೆಟ್ಟಿ ಅವರಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯದಿ೦ದ ನಿರೀಕ್ಷಣ ಜಾಮೀನು ಮಂಜೂರಾಗಿದೆ. ಜೆರಾಲ್ಡ್‌ ಲೋಬೋ ಎಂಬವರು ನೀಡಿದ್ದ ದೂರಿನಂತೆ ಶಾಸಕರ ವಿರುದ್ದ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ವಿಶ್ವ...

ಬಂಟರ ಅಭಿವೃದ್ದಿ ನಿಗಮ ಸ್ಥಾಪಿಸಿ : ಐಕಳ ಹರೀಶ್ ಶೆಟ್ಟಿ

0
ಮಂಗಳೂರು: ರಾಜ್ಯದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದವರು ಎನ್ನುತ್ತಾರೆ, ಅದು ನಿಜ ಎಂದಾದಲ್ಲಿ ನೀವು ಬಂಟರ ಸಮ್ಮೇಳನದಲ್ಲಿ ನೀಡಿದ ಭರವಸೆಯಂತೆ ಬಂಟರ ನಿಗಮ ಸ್ಥಾಪಿಸಿ ನುಡಿದಂತೆ ನಡೆಯಿರಿ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಆಗ್ರಹಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟರ ಸಂಘಕ್ಕೆ ಇದುವರೆಗೆ ಯಾವ ಸರಕಾರದಿಂದಲೂ...

ಶ್ರೀಪತಂಜಲಿ ಯೋಗ ಪ್ರತಿಷ್ಠಾನದ ವತಿಯಿಂದ ಸಾಮೂಹಿಕ ಸೂರ್ಯ ನಮಸ್ಕಾರ

0
ಮಂಗಳೂರು: ಶ್ರೀ ಪತಂಜಲಿ ಯೋಗ ಪ್ರತಿಷ್ಠಾನದ ವತಿಯಿಂದ ಪಾಂಡೇಶ್ವರದ ದ. ಕ. ಜಿ. ಪ. ಪ್ರೌಡ ಶಾಲೆಯ ಮಕ್ಕಳಿಗೆ ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮವನ್ನು ನಡೆಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಲತಿಫ್ ವಹಿಸಿದ್ದರು. ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.ಎಸ್ ಡಿಎಂಸಿ...

ಅಗ್ನಿವೀರ ನೇಮಕಾತಿ: ಆನ್‍ಲೈನ್ ನೋಂದಣಿ

0
ಮಂಗಳೂರು:ಮಂಗಳೂರು ಸೇನಾ ನೇಮಕಾತಿ ಕೇಂದ್ರದ ವತಿಯಿಂದ ಅಗ್ನಿವೀರ ನೇಮಕಾತಿಗೆ ಆನ್‍ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ಎಪ್ರಿಲ್ 22 ರಿಂದ ಪ್ರಾರಂಭವಾಗಲಿದೆ.ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ, ಧಾರವಾಡ, ದಾವಣಗೆರೆ, ಗದಗ, ಹಾವೇರಿ ಜಿಲ್ಲೆಯ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಸೇನೆಯಲ್ಲಿ ಜನರಲ್ ಡ್ಯೂಟಿ, ಟೆಕ್ನಿಷಿಯನ್, ಟ್ರೇಡ್ಸ್ ಮೆನ್, ಕಚೇರಿ ಸಹಾಯಕ,...

ಫೆ.22- ಮಾ.1: ವೇಣೂರುನಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವ

0
ವೇಣೂರು: ವೇಣೂರು ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ಮಹೋತ್ಸವ ಫೆ.22ರಿ೦ದ ಆರಂಭಗೊಂಡು ಮಾ.1ರ ವರೆಗೆ ಜರಗಲಿದೆ . ಮಹಾಮಸ್ತಕಾಭಿಷೇಕದ ಈ 9 ದಿನಗಳಲ್ಲೂ ಸಂಜೆ ಧಾರ್ಮಿಕ ಸಭೆಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡು ಸಭಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿಯುತ್ತವೆ. ಸಂಜೆ 5.30 ಕ್ಕೆ ಮಹಾಮಸ್ತಕಾಭಿಷೇಕ ಆರಂಭಗೊಳ್ಳುತ್ತದೆ. ಅಗೋದಕ ಮೆರವಣಿಗೆ, ಜಲ,ಕಷಾಯ,ಕಲ್ಕಚೂರ್ಣ, ಅರಶಿನ, ಶ್ರೀಗಂಧ, ಚಂದನ,ಅಷ್ಟಗಂಧ, ಹಾಲು,ಎಳನೀರು,...

ಹಿರಿಯ ಕಾದಂಬರಿಕಾರ, ಭಾಷಾತಜ್ಞ ಕೆ.ಟಿ.ಗಟ್ಟಿ ವಿಧಿವಶ

0
ಮ೦ಗಳೂರು:ಕರ್ನಾಟಕ ಸಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಖ್ಯಾತ ಕಾದಂಬರಿಕಾರ,ಪ್ರಾಧ್ಯಾಪಕ ಕೆ.ಟಿ.ಗಟ್ಟಿ ಅಸೌಖ್ಯದಿಂದ ಸೋಮವಾರ ನಿಧನ ಹೊಂದಿದರು. ಮೂಲತ ಕಾಸರಗೋಡಿನ ಕೂಡ್ಲುವಿನವರಾದ ಕೂಡ್ಲು ತಿಮ್ಮಪ್ಪ ಗಟ್ಟಿ ಪ್ರಾಧ್ಯಾಪಕರಾಗಿ ದುಡಿದವರು. ಪತ್ರಿಕಾ ಕಾದಂಬರಿಗಳ ಮೂಲಕ ಹೆಸರುವಾಸಿಯಾಗಿದ್ದರು.ಕೆ ಟಿ ಗಟ್ಟಿಯವರು ಕಾಸರಗೋಡಿನ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಕ್ರಮಬದ್ಧವಾಗಿ ಕಲಿತದ್ದು ಎಂಟನೆಯ ತರಗತಿಯವರೆಗೆ ಮಾತ್ರ. ಎಸ್‌.ಎಸ್‌.ಎಲ್‌.ಸಿ.ಯಲ್ಲಿ...

ಫೆ.21ರಂದು ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ನೂತನ ಧ್ವಜಮರ ಸ್ಥಾಪನೆ

0
ಸುರತ್ಕಲ್ : ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು ದೇಲಂತಬೆಟ್ಟು ಇಲ್ಲಿ ನೂತನ ಧ್ವಜಮರ ಸ್ಥಾಪನೆ ಫೆ. 21 ರಂದು ಬುಧವಾರ ಮಧ್ಯಾಹ್ನ 12.21 ಕ್ಕೆ ನಡೆಯಲಿದೆ. ಶಿಬರೂರು ವೇದವ್ಯಾಸ ತಂತ್ರಿಗಳ ಪೌರೋಹಿತ್ಯದಲ್ಲಿ ಕಟೀಲಿನ ಅಸ್ರಣ್ಣ ಬಂಧುಗಳ ಸಮಕ್ಷಮದಲ್ಲಿ ನೂತನ ಧ್ವಜಮರ ಸ್ಥಾಪನೆಯಾಗಲಿದೆ.ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕ ಶ್ರೀ ಲಕ್ಷ್ಮೀ ನಾರಾಯಣ ಅಸ್ರಣ್ಣರು...

ಡಾ. ಜೆರಿ ನಿಡ್ಡೊಡಿಯವರಿಗೆ ಕೊಂಕಣಿ ಲೇಖಕ್ ಸಂಘ್‌ನ ಪ್ರಶಸ್ತಿ ಪ್ರದಾನ

ಮಂಗಳೂರು: ಪ್ರತಿಯೊಂದು ಸಮುದಾಯಕ್ಕೆ ಅವರದ್ದೆ ಆದ ಸಂಸ್ಕೃತಿ ಇರುವಂತೆ ನಮಗೆ ಕೊಂಕಣಿ ಭಾಷಿಕರಿಗೂ ಒಂದು ಸಂಸ್ಕೃತಿ ಇದೆ. ಇದು ತಲೆತಲಾಂತರದಿಂದ ಹರಿದು ಬಂದಿದ್ದು ಪರಿವರ್ತನಾಶೀಲಾ ವಾಗಿದೆ. ಬದಲಾವಣೆ ಪ್ರಕೃತಿ ನಿಯಮ. ಹಾಗಿರುವಾಗ ಸಮಾಜದೊಡಗಿನ ಮಧುರ ಬಾಂಧವ್ಯಕ್ಕಾಗಿ ಸಮಾನತೆಯನ್ನು ಗುರುತಿಸಿಕೊಳ್ಳುವುದು ಅಗತ್ಯ. ಬದಲಾವಣೆಯ ಬಿರುಗಾಳಿಯಲ್ಲಿ ನಮ್ಮ ಸಂಸ್ಕೃತಿ-ಸಂಪ್ರದಾಯದ ಉತ್ತಮ ಅಂಶಗಳನ್ನು ಉಳಿಸಿಕೊಂಡು, ಭಾಷೆ-ನಾಡು-ನುಡಿಯ ಸಂಸ್ಕೃತಿಯ ಬೇರುಗಳೊಂದಿಗೆ...

ತೋಟದ ಬೆಳೆಗಳಿಗೆ ಸಹಾಯಧನ: ಅರ್ಜಿ ಆಹ್ವಾನ

0
ಮಂಗಳೂರು: 2024-25 ನೇ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕಂದುಬಾಳೆ, ಅಂಗಾಂಶ ಬಾಳೆ, ಅನಾನಸು, ರಾಂಬುಟಾನ್, ಮ್ಯಾಂಗೋಸ್ಟೀನ್, ಬೆಣ್ಣೆ ಹಣ್ಣು, ಮಲ್ಲಿಗೆ, ಕಾಳುಮೆಣಸು, ಜಾಯಿಕಾಯಿ, ಗೇರು, ಕೊಕೊ ಇತ್ಯಾದಿ ತೋಟಗಾರಿಕೆ ಬೆಳೆಗಳ ಹೊಸ ತೋಟ ಸ್ಥಾಪನೆಗೆ, ಹಳೆ ಕಾಳುಮೆಣಸು ತೋಟಗಳ ಪುನಶ್ಚೇತನ ಕೈಗೊಳ್ಳಲು, ನೀರು ಸಂಗ್ರಹಣಾ ಘಟಕ, ಪ್ಯಾಕ್ಹೌಸ್, ಪಾಲಿಮನೆ, ಅಣಬೆ ಉತ್ಪಾದನಾ...