ಪಯಣ್ʼ ಕೊಂಕಣಿ ಚಲನಚಿತ್ರದ ಮುಹೂರ್ತ ಮತ್ತು ಟೈಟಲ್ ಅನಾವರಣ
ಮ೦ಗಳೂರು: ಕಳೆದ 55 ವರ್ಷಗಳಿಂದ ದೇಶ-ವಿದೇಶಗಳಲ್ಲಿ 110ಕ್ಕೂ ಮಿಕ್ಕಿ ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನು ನೀಡಿ, ಕೊಂಕಣಿ ಜನರ ಮನೆ ಮಾತಾಗಿರುವ ಹೆಸರಾಂತ ಗಾಯಕ, ಗೀತೆ ರಚನೆಗಾರ ಮೆಲ್ವಿನ್ ಪೆರಿಸ್‌ರವರ ಚೊಚ್ಚಲ ಕೊಂಕಣಿಚಲನಚಿತ್ರ ʻಪಯಣ್ʼ (ಪ್ರಯಾಣ) ಇದರ ಮುಹೂರ್ತವು ಫೆಬ್ರವರಿ 11ರಂದು ಕುಲಶೇಖರಚರ್ಚಿನ ಮಿನಿ ಸಭಾಂಗಣದಲ್ಲಿ ನೆರವೇರಿತು.ʻಸಂಗೀತ್ ಘರ್ ಪ್ರೊಡಕ್ಶನ್ಸ್ʼ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುವ ಈ ಚಲನಚಿತ್ರದ...
ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆ
ಮ೦ಗಳೂರು: ಫೆ.17 ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆ ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ರವಿವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್ ಭಾಗವಹಿಸಿ ನಾಯಕರನ್ನುದ್ದೇಶಿಸಿಮಾತನಾಡಿ, ಫೆ.17 ರಂದು ಮಂಗಳೂರಿನಲ್ಲಿ ಐತಿಹಾಸಿಕ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ...
ಪಣಂಬೂರು ಪೋಲಿಸ್ ಜನಸಂಪರ್ಕ ಸಭೆ
ಪಣಂಬೂರು : ಪಣಂಬೂರು ಪೋಲೀಸ್ ಠಾಣೆ ವತಿಯಿಂದ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಮತ್ತು ವಾಹನ ಸವಾರರು ಪಾಲಿಸಬೇಕಾದ ನಿಯಮಗಳ ಕುರಿತು ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಬೆಂಗರೆ ಕಸಬಾ ಮದ್ರಸ ಸಭಾಂಗಣದಲ್ಲಿ ನಡೆಯಿತು.ಪಣಂಬೂರು ಪೋಲಿಸ್ ನಿರೀಕ್ಷಕರಾದ ಮುಹಮ್ಮದ್ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ಪಣಂಬೂರು ಪೊಲೀಸರು ಕಸಬಾ ಬೆಂಗ್ರೆಯಲ್ಲಿ ಜನ ಸಂಪರ್ಕ ಸಭೆ ನಡೆಸಿದರು....
ಕೊಲ್ಲಮೊಗ್ರು: ಪತ್ರಕರ್ತರ ಗ್ರಾಮ ವಾಸ್ತವ್ಯ:ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆ ಗ್ರಾಮಸ್ಥರಿಂದ ಸಂವಾದ
ಸುಳ್ಯ:ಕೊಲ್ಲಮೊಗ್ರು ಮತ್ತು ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ಭಾಗಷಃ ಅರಣ್ಯ ಸಮಸ್ಯೆ ಸೇರಿ ಅರಣ್ಯ - ಕಂದಾಯ ನಡುವಿನ ಸಮಸ್ಯೆ ಇದೆ. ಇದರ ಪರಿಹಾರಕ್ಕೆ ಇಲ್ಲಿ ಪೈಲಟ್ ಯೋಜನೆಯಡಿಯಲ್ಲಿ ಸರ್ವೆ ಮಾಡಿಸಿ ಇಲ್ಲಿನ ಅರಣ್ಯ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ. 3-4 ತಿಂಗಳ ಯೋಜನೆ ಅಡಿಯಲ್ಲಿ ಸರ್ವೆ ಪೂರ್ತಿ ಮಾಡಲಾಗುವುದು. ಎಂದು ದಕ್ಷಿಣ ಕನ್ನಡ...
ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ:ಸಮಿತಿ ಸಭೆ
ಮ೦ಗಳೂರು: ಫೆ.17ರಂದು ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಮಾವೇಶದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ನಿರ್ವಹಣಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಐವನ್ ಡಿಸೋಜ ಅಧ್ಯಕ್ಷತೆಯಲ್ಲಿ ಶನಿವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಸಮಿತಿಯ ಸಭೆ ನಡೆಯಿತು.ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ...
ಶಿಕ್ಷಣ ಪಡೆದ ಶಾಲೆಗೆ ಪ್ರಶಸ್ತಿ ಮೊತ್ತ 1 ಲಕ್ಷ ರೂ.ದಾನ ನೀಡಿದ ಪ್ರೊ. ಬಿ.ಎ.ವಿವೇಕ ರೈ
ಮ೦ಗಳೂರು: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ನೀಡಲಾಗುವ ಟಿ.ವಿಮಲಾ ಪೈ ಪ್ರಾಯೋಜಿತ 2022ನೇ ಸಾಲಿನ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಯ 1 ಲಕ್ಷ ರೂ. ಮೊತ್ತ ಪಡೆದ ಹಂಪಿ ವಿವಿಯ ವಿಶ್ರಾಂತ ಕುಲಪತಿ ಪ್ರೊಬಿ.ಎ.ವಿವೇಕ ರೈ ಅವರು ತಾನು ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ವಿಟ್ಲ ಸಮೀಪದ ಪುಣಚಾ ಪರಿಯಾಲ್ತಡ್ಕ ಅನುದಾನಿತ...
ಅಯೋಧ್ಯೆಯ ಬಾಲರಾಮನಿಗೆ ಕಾಶಿಮಠ ಸಂಸ್ಥಾನದ ವತಿಯಿಂದ ಸ್ವರ್ಣ ಪೀಠ ಪ್ರಭಾವಳಿ ಸಮಪ೯ಣೆ
ಮ೦ಗಳೂರು: ಕಾಶಿಮಠ ಸಂಸ್ಥಾನದ ವತಿಯಿಂದ ಅಯೋಧ್ಯೆಯ ಬಾಲರಾಮನಿಗೆ 70 ಲಕ್ಷ ರೂಪಾಯಿ ಮೌಲ್ಯದ ಸ್ವರ್ಣ ಪೀಠ ಪ್ರಭಾವಳಿಯನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿ ಬಾಲರಾಮನ ಉತ್ಸವ ಮೂರ್ತಿಗೆ ಸಮರ್ಪಿಸಲಾಯಿತು.ಈ ಸ್ವರ್ಣ ಪೀಠ ಪ್ರಭಾವಳಿಗೆ ಕೋಟದ ಕಾಶಿಮಠದಲ್ಲಿ ಅದ್ದೂರಿ ಮೆರವಣಿಗೆ ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಕಾಶೀಮಠಾಧೀಶರಾದ...
ಜಯಲಕ್ಷ್ಮೀ ಸಿಲ್ಕ್ಸ್ ಸಂಸ್ಥೆಯಲ್ಲಿ ರವಿಕೆ ಪ್ರಸಂಗ ಚಿತ್ರ ತಂಡ
ಮಂಗಳೂರು: ಫೆಬ್ರವರಿ 16ರಂದು ರಾಜ್ಯಾದ್ಯಂತ ತೆರೆ ಕಾಣಲಿರುವ ಸಂತೋಷ್ ಕೊಡಂಕೇರಿ ನಿರ್ದೇಶನದ ರವಿಕೆ ಪ್ರಸಂಗ ಸಿನಿಮಾದ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದ್ದು, ಮಂಗಳೂರಿನಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿಯಲ್ಲಿ ಕರಾವಳಿ ಲೇಖಕಿಯರ ಸಂಘ ಮತ್ತು ಉಡುಪಿಯಲ್ಲಿ ಜಯಲಕ್ಷ್ಮೀ ಸಿಲ್ಕ್ಸ್ ಸಂಸ್ಥೆಯಲ್ಲಿ ಮಹಿಳಾ ನೌಕರರೊಂದಿಗೆ ಸಂವಾದ ನಡೆಸಿದರು. ರವಿಕೆ ಪ್ರಸಂಗ ಚಿತ್ರತಂಡ ಜಯಲಕ್ಷ್ಮೀ ಸಿಲ್ಕ್ ಸಂಸ್ಥೆಯಲ್ಲಿ...
ಹರಿಹರ ಕೊಲ್ಲಮೊಗರು: ಪತ್ರಕರ್ತರ ಗ್ರಾಮ ವಾಸ್ತವ್ಯ
ಸುಳ್ಯ: ಗ್ರಾಮದ ಜನರಿಗೆ ಸರಕಾರಿ ಕಚೇರಿಗಳಿಗೆ ಹೋಗಿ ತಮ್ಮ ಕೆಲಸ ಕಾರ್ಯವನ್ನು ಮಾಡಲು ಕಷ್ಟವಾಗುವ ಇಂತ ದಿನದಲ್ಲಿ ಗ್ರಾಮದ ಒಂದೇ ವೇದಿಕೆಯಲ್ಲಿ ಎಲ್ಲಾ ಅಧಿಕಾರಿಗಳು ಕುಳಿತು ಸಮಸ್ಯೆ ಪರಿಹರಿಸುವಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಮುನ್ನುಡಿ ಬರೆದಿರುವುದು ಶ್ಲಾಘನೀಯ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸುಳ್ಯ ತಾಲೂಕು ಕಾರ್ಯನಿರತ...
ಮಾದಕ ದ್ರವ್ಯ ಮಾರಾಟ: ಇಬ್ಬರ ಬ೦ಧನ
ಮಂಗಳೂರು : ಕಾವೂ ರು ಗ್ರಾಮದ ಬೊಂದೇಲ್ ಮೈದಾನದ ಸಾರ್ವಜನಿಕ ಸ್ಥಳದಲ್ಲಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಉತ್ತರ ವಿಭಾಗದ ಡ್ರಗ್ಸ್ ಸ್ಕ್ವಾಡ್ ನವರು ಬಂಧಿಸಿದ್ದಾರೆ.
ಮ೦ಗಳೂರು ನಿವಾಸಿಗಳಾದ ಹಿಮನೀಶ್ (26 ) ಹಾಗೂ ಪವನ್ ರಾಜ್ ಪಿ( 28) ಬ೦ಧಿತ ಆರೋಪಿಗಳು.
ಯುವಕರಿಬ್ಬರು ಪ್ಲಾಸ್ಟಿಕ್ ಕವರ್ ಗಳಲ್ಲಿ ಮಾದಕ ದ್ರವ್ಯ ಮಾರಲು ಪ್ರಯತ್ನಿಸುತ್ತಿದ್ದ...









