ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡಕ್ಕೆ ಭಾರತ್ ಆಗ್ರೋವೆಟ್‌ನಿಂದ 5 ಲಕ್ಷ ರೂ.ದೇಣಿಗೆ
ಮಂಗಳೂರು : ದ.ಕ.ಜಿಲ್ಲಾಧಿಕಾರಿ ಕಚೇರಿ ಸಮೀಪ ನಿರ್ಮಾಣವಾಗುತ್ತಿರುವ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಶತಮಾನೋತ್ಸವ ಕಟ್ಟಡಕ್ಕೆ ಭಾರತ್ ಆಗ್ರೋವೆಟ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತನ್ನ ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿ ನಿಧಿಯಿಂದ 5 ಲಕ್ಷ ರೂ.ದೇಣಿಗೆ ನೀಡಿದೆ. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ.ಜಿಲ್ಲಾ ಸಮಿತಿಯ ಚೇರ್ಮನ್ ಸಿಎ ಶಾಂತರಾಮ ಶೆಟ್ಟಿ ಅವರು ಭಾರತ್ ಆಗ್ರೋವೆಟ್ ಇಂಡಸ್ಟ್ರೀಸ್...
ಜ.20ರಿಂದ ಸವಣೂರಿನಲ್ಲಿ ಜಿಲ್ಲಾಮಟ್ಟದ ಯುವಜನಮೇಳ
ಮಂಗಳೂರು: ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ, ಕಡಬ ತಾಲೂಕು ಪಂಚಾಯತ್, ಸವಣೂರು ಗ್ರಾಮ ಪಂಚಾಯತ್ ಹಾಗೂ ಸವಣೂರು ಯುವಕ ಮಂಡಲ(ರಿ) ಇವರ ಸಹಯೋಗದೊಂದಿಗೆ 2023-24ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನಮೇಳ ಜ.20 ಹಾಗೂ 21ರಂದು ಸವಣೂರಿನ...
ಆಕಾಶಭವನ ಶರಣ್ ಬ೦ಧನ,ಕಾಲಿಗೆ ಗು೦ಡೇಟು
ಮ೦ಗಳೂರು: ಕುಖ್ಯಾತ ರೌಡಿ ಆಕಾಶಭವನ ಶರಣ್ ನನ್ನು ಮ೦ಗಳೂರು ಸಿಸಿಬಿ ಪೊಲೀಸರು ಬ೦ಧಿಸಿದ್ದಾರೆ. ಬ೦ಧನದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದಾಗ ಆತನ ಕಾಲಿಗೆ ಫೈರಿಂಗ್ ಮಾಡಿದ್ದು ಗು೦ಡೇಟುನಿ೦ದ ಗಾಯಗೊ೦ಡಿರುವ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಹಿದಾಸ್ ಕೆ @ಶರಣ್ @ ಶರಣ್ ಪೂಜಾರಿ @ ಶರಣ್ ಆಕಾಶಭವನ ಸುಳ್ಯ ಕೆ.ವಿ.ಜಿ ವಿದ್ಯಾಸಂಸ್ಥೆಯ...
ಸ್ಮಾರ್ಟ್ ಸಿಟಿ ಕಾಮಗಾರಿಗಳ ತ್ವರಿತ ಪೂರ್ಣ: ಡಿಸಿ ಸೂಚನೆ
ಮ೦ಗಳೂರು: ಸ್ಮಾರ್ಟ್ ಸಿಟಿ ಯೋಜನೆ, ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಂಗಳವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ನಡೆಯಿತು.ಕದ್ರಿ ಪಾರ್ಕ್ ಅಭಿವೃದ್ಧಿಯ ಕುರಿತು, ಇಲ್ಲಿ ನಿರ್ಮಿಸಲಾದ ವೈಯಕ್ತಿಕ ಅಂಗಡಿಗಳ ಹರಾಜು ಪ್ರಕ್ರಿಯೆ ನಡೆಯುತ್ದಿದ್ದು, ಫುಡ್ ಕೋರ್ಟ್ ಗಳಿಗೆ ಪ್ರತ್ಯೇಕ ಘಟಕ ವನ್ನು ರೂಪಿಸುವ ಬಗ್ಗೆ ಚರ್ಚೆ ನಡೆಯಿತು. ಕದ್ರಿ ಉದ್ಯಾನವನ, ಜಿಂಕೆವನ, ಪಾರ್ಕ್ ರಸ್ತೆ ಗಳನ್ನು...
ಅಮೃತರು ಸಾಹಿತ್ಯ ಲೋಕದ ಮೇರು ಪರ್ವತ:ಸಾಹಿತಿ ಡಾ.ಪ್ರಭಾಕರ ನೀರುಮಾರ್ಗ
ಮಂಗಳೂರು : ಕಾವ್ಯ,ಕಥೆ,ನಾಟಕ, ಯಕ್ಷಗಾನ ಸಹಿತ ಸಾರಸ್ವತ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿರುವ ಅಮೃತ ಸೋಮೇಶ್ವರ ಅವರು ಸಾಹಿತ್ಯ ಲೋಕದ ಮೇರು ಪರ್ವತ. ಸದಾ ಹೊಸತನವನ್ನು ನಿರೂಪಿಸಿದ ಅಮೃತರು ರಾಷ್ಟ್ರ ಕವಿಯಾಗುವ ಎಲ್ಲ ಅರ್ಹತೆ ಹೊಂದಿದ್ದರು ಎಂದು ಸಾಹಿತಿ ಡಾ.ಪ್ರಭಾಕರ ನೀರುಮಾರ್ಗ ಹೇಳಿದರು.ಅಗಲಿದ ಹಿರಿಯ ಜಾನಪದ ತಜ್ಞ ಅಮೃತ ಸೋಮೇಶ್ವರ ಅವರಿಗೆ ಅಖಿಲ ಭಾರತೀಯ...
“ಮಿಸ್ಟರ್ ಮದಿಮಯೆ” ಜ.12ರಂದು ಕರಾವಳಿಯಾದ್ಯಂತ ತೆರೆಗೆ
ಮಂಗಳೂರು: "ಎಮ್ ಎಮ್ ಎಮ್ ಗ್ರೂಫ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾದ "ಮಿಸ್ಟರ್ ಮದಿಮಯೆ'’ ತುಳು ಚಿತ್ರ ಜ. 12ರಂದು ತೆರೆ ಕಾಣಲಿದೆ" ಎಂದು ನಟ ಸಾಯಿಕೃಷ್ಣ ಕುಡ್ಲ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು."ಮಿಸ್ಟರ್ ಮದಿಮಯೆ ಸಿನಿಮಾ ಮಂಗಳೂರಿನಲ್ಲಿ ಬಿಗ್ ಸಿನಿಮಾಸ್, ಸಿನಿಪೊಲಿಸ್, ಪಿವಿಆರ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರಿಯಲ್ಲಿ ಬಿಗ್ ಸಿನಿಮಾಸ್, ಪುತ್ತೂರಿನಲ್ಲಿ ಭಾರತ್...
ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ
ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ವತಿಯಿಂದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೆಸೆಂಟ್ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ವಿದ್ಯಾಭಟ್, ಸ್ಪರ್ಧಾತ್ಮಕ ಜಗತ್ತಿಗೆ ಅಂಕಗಳ ಜೊತೆಗೆ ಉದ್ಯೋಗಕೌಶಲಗಳು ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ವಿಶೇಷ ಉಪನ್ಯಾಸದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಂಡರು....
ಜ.11ರಂದು “ಶಿವದೂತೆ ಗುಳಿಗೆ” 555ನೇ ಪ್ರದರ್ಶನದ ಸಂಭ್ರಮ!
ಮಂಗಳೂರು: "ಜನವರಿ 11ರಂದು ಸಂಜೆ 5 ಗಂಟೆಗೆ ಅಡ್ಯಾರ್ ಗಾರ್ಡನ್ ನಲ್ಲಿ ಜನಮೆಚ್ಚುಗೆ ಪಡೆದಿರುವ "ಶಿವದೂತೆ ಗುಳಿಗೆ" ನಾಟಕದ 555ನೇ ಪ್ರದರ್ಶನದ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಕೊಪ್ಪ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರು ದೀಪ ಪ್ರಜ್ವಲನೆಗೈಯಲಿದ್ದಾರೆ" ಎಂದು ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು."ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ...
ಯುವನಿಧಿ ನೋಂದಣಿ : ತ್ವರಿತಗತಿಯಲ್ಲಿ ನಡೆಸಲು ಸೂಚನೆ
ಮಂಗಳೂರು:ಪದವೀಧರರಿಗೆ ಮತ್ತು ಡಿಪ್ಲೋಮೋ ಹೊಂದಿರುವವರಿಗೆ ನಿರುದ್ಯೋಗ ಭತ್ಯೆ ನೀಡುವ “ಯುವನಿಧಿ” ಯೋಜನೆ ನೋಂದಾವಣಿಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.ಸೋಮವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಈ ಸಂಬಂಧ ಮಾತನಾಡಿ ಪ್ರಗತಿ ಪರಿಶೀಲನೆ ನಡೆಸಿ, ಜಿಲ್ಲೆಯಲ್ಲಿ ಈ ಯೋಜನೆಗಳ ಅರ್ಹರಾದರಾದ ಸುಮಾರು 4500 ಮಂದಿ ನಿರುದ್ಯೋಗಿಗಳಿದ್ದಾರೆ, ಈಗಾಗಲೇ 916 ನೋಂದಾಣಿ ಆಗಿದ್ದು ಉಳಿದವರು ನೋಂದಾಣಿಯನ್ನು ಉಳಿದೆರಡು...
ಲೋಕಸಭಾ ಚುನಾವಣೆ: ಸಿಬ್ಬಂದಿ ವಿವರ ಸಲ್ಲಿಸಲು ಸೂಚನೆ
ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಎಲ್ಲಾ ಹಂತದ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನಿಯೋಜಿಸಲು ಸಿಬ್ಬಂದಿ ವಿವರ ಕೂಡಲೇ ಸಲ್ಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.ಸೋಮವಾರ ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಚುನಾವಣಾ ಮಾನವ ಸಂಪನ್ಮೂಲ ನೋಡಲ್ ಅಧಿಕಾರಿ ಹೇಮಲತಾ ಅವರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1876 ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಗೂ ವಿವಿಧ...







