ಮಂಗಳೂರು: ಪ್ರತಿ ವರ್ಷವೂ ವಿಶ್ವ ಮೆದುಳು ದಿನ-ಇದನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ದಿನವು ನಮಗೆ ಮೆದುಳಿನ ಮಹತ್ತವನ್ನು ತಿಳಿಸುವ ದಿನವಾಗಿದೆ. ಮೆದುಳು ನಮ್ಮ ಶರೀರದಲ್ಲಿ ಅತ್ಯಂತ ಬೆಲೆ ಬಾಳುವ ಒಂದು ಅಂಗ. ನಮ್ಮ ಯೋಚನೆ, ಕಲಿಕೆ, ನೆನಪು, ಅರ್ಥಪೂರ್ಣ ಸಂವಹನ, ಸೂಕ್ತ ನಿರ್ಧಾರ ಹೀಗೆ ದಿನದ ಹೆಚ್ಚಿನ ಚಟುವಟಿಕೆಗಳಲ್ಲಿ ಇದು ಪ್ರಧಾನ ಪಾತ್ರ ವಹಿಸುತ್ತದೆ. ಈ ಮಹತ್ವದ ಹೊರತಾಗಿಯೂ ಹೃದಯ, ಮಧುಮೇಹದಂಥ ರೋಗಗಳಿಗೆ ಕೊಡುವಷ್ಟು ಪ್ರಾಮುಖ್ಯವನ್ನು ಮೆದುಳಿಗೆ ಸಂಬಂಧಿಸಿದ ರೋಗಗಳಿಗೆ ನಾವು ನೀಡದಿರುವುದು ವಿμÁದದ ಸಂಗತಿ. ಜನರಲ್ಲಿ ಜಾಗೃತಿಯನ್ನು ಮೂಡಿಸಲು, ಆರೋಗ್ಯ ಪೂರ್ಣ ಜೀವನವನ್ನು ಉತ್ತೇಜಿಸಲು ಮತ್ತು ನಮ್ಮ ಮೆದುಳಿನ ನರಗಳಲ್ಲಿ ಆಗಬಹುದಾದ ಏರುಪೇರುಗಳ ಬಗ್ಗೆ ಆರಂಭದಲ್ಲಿಯೇ ತಪಾಸಣೆ ನಡೆಸಲು ಈ ದಿನವು ನಮಗೆ ಅವಕಾಶ ನೀಡುತ್ತಿದೆ.
ನರರೋಗ ಶಾಸ್ತ್ರಕ್ಕೆ ಸಂಬಂಧಿಸಿದ ರೋಗಗಳು ವಯೋಮಿತಿಯನ್ನು ಲೆಕ್ಕಿಸದೆ ಹೆಚ್ಚಿನವರಲ್ಲಿ ನಿಶ್ಯಕ್ತಿ, ಅಂಗವಿಕಲತೆಗೆ ಪ್ರಮುಖ ಕಾರಣವಾಗಿ ವಿಶ್ವದಾದ್ಯಂತ ಕಾಣಿಸುತ್ತಿದೆ. ಪಾಶ್ರ್ವವಾಯು, (Sಣಡಿoಞe), ಮೂರ್ಛಾರೋಗ ಅಥವಾ ಅಪಸ್ಮಾರ, (ಇಠಿiಟeಠಿsಥಿ), ಚಿತ್ತ ವೈಕಲ್ಯ (ಆemeಟಿಣiಚಿ), ಪಾರ್ಕಿನ್ (Pಚಿಡಿಞisoಟಿ), ಮೈಗ್ರೇನ್ (migಡಿಚಿಟಿe), ನರದೌರ್ಬಲ್ಯ (ಟಿeuಡಿoಠಿಚಿಣhಥಿ)ಮತ್ತು ಇನ್ನಿತರ ಮೆದುಳಿಗೆ ಸಂಬಂಧಿಸಿದ ರೋಗಗಳು ಎಲ್ಲಾ ವಯೋಮಾನದವರ ಮೇಲೂ ಪರಿಣಾಮ ಬೀರಬಹುದು. ಕೆಲವು ನರ ಸಂಬಂಧಿ ರೋಗಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೂ ಸಾಮಾನ್ಯವಾದ ಅಪಾಯಕಾರಿ ಅಂಶಗಳನ್ನು ಪತ್ತೆ ಹಚ್ಚಿ, ಸೂಕ್ತ ಸಮಯದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆಯತ್ತ ಗಮನ ಹರಿಸುವುದರ ಮೂಲಕ ಅಂಥ ರೋಗಗಳನ್ನು ಹೆಚ್ಚಿನ ಮಟ್ಟದಲ್ಲಿ ನಿಯಂತ್ರಿಸಬಹುದು. ಅವುಗಳನ್ನು ತಡೆಯಬಹುದು ಮತ್ತು ಹೆಚ್ಚು ವಿಳಂಬಿಸಬಹುದು.
ಭಾರತದಲ್ಲಿ ಮೆದುಳು ಸಂಬಂಧಿ ರೋಗಗಳ ಭಾರವು ಸತತವಾಗಿ ಹೆಚ್ಚಾಗಲು ಕೆಲವು ಕಾರಣಗಳಿವೆ. ಜನಸಂಖ್ಯೆಯಲ್ಲಿ ವಯೋವೃದ್ಧರು ಹೆಚ್ಚಾ ಗುತ್ತಿರುವುದು, ವ್ಯಾಯಾಮದ ಕೊರತೆ, ಬಹುಕಾಲ ಕುಳಿತು ಮಾಡುವ ಕೆಲಸಗಳು, ಹೆಚ್ಚುತ್ತಿರುವ ಮಧುಮೇಹ ಮತ್ತು ಅಧಿಕ ಒತ್ತಡ, ತಂಬಾಕು ಬಳಕೆ, ಅನಾರೋಗ್ಯಕರ ಜೀವನಶೈಲಿ ಮತ್ತು ಅತಿಯಾದ ಒತ್ತಡ. ಇಂಥ ಅಂಶಗಳು ರೋಗಿಗಳ ಮೇಲμÉ್ಟೀ ಪರಿಣಾಮ ಬೀರದೆ ಕುಟುಂಬದ ಉಳಿದ ಸದಸ್ಯರ ಮೇಲೆಯೂ ದೈಹಿಕ, ಭಾವನಾತ್ಮಕ ಮತ್ತು ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತವೆ. ಹಾಗಾಗಿ ಮೆದುಳಿಗೆ ಸಂಬಂಧಿಸಿದ ರೋಗಗಳಿಂದ ರಕ್ಷಣೆಯ ಕಾಳಜಿಯು ಸಾರ್ವಜನಿಕವಾಗಿಯೂ ಆದ್ಯತಾ ಕ್ಷೇತ್ರವಾಗಲೇಬೇಕಾಗಿರುವುದು ಇಂದಿನ ಅಗತ್ಯಗಳಲ್ಲಿ ಒಂದು.
ಅದೃಷ್ಟವಶಾತ್ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ವಿಶೇಷವಾದ ಕ್ರಮಗಳ ಅಗತ್ಯವಿಲ್ಲ. ನಮ್ಮ ಜೀವನ ಶೈಲಿಯನ್ನು ಸರಳ ಜೀವನ ಶೈಲಿಯನ್ನಾಗಿ ಮಾರ್ಪಡಿಸಿಕೊಳ್ಳುವುದರಿಂದ ಗಮನಾರ್ಹವಾಗಿ ನರ ಸಂಬಂಧ ರೋಗಗಳ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡಲು ಸಾಧ್ಯ. ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ, ಯೋಗ, ನಡಿಗೆಯಂಥ ದೈಹಿಕ ಚಟುವಟಿಕೆ, ವಿಶೇಷವಾಗಿ ಹಣ್ಣು, ತರಕಾರಿ, ಧಾನ್ಯ, ಬೀಜ ಮೊದಲಾದ ಆರೋಗ್ಯಕಾರಿ ಆಹಾರಗಳ ಸಮತೋಲನ ಸೇವನೆ. ಇದರೊಂದಿಗೆ ಆರೋಗ್ಯಕರವಾದ ಬೊಜ್ಜು, ಆರೋಗ್ಯಕ್ಕೆ ಅಗತ್ಯವಾದ ತೂಕ, ತಂಬಾಕು ಸೇವನೆ ಹಾಗೂ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದು, ಪ್ರತಿರಾತ್ರಿ ಕನಿಷ್ಠ 7 ರಿಂದ 8 ಗಂಟೆ ನಿದ್ರೆ, ನಿರಾಳತೆಯ ತಂತ್ರದ ಮೂಲಕ ಒತ್ತಡಗಳ ನಿರ್ವಹಣೆ ಇತ್ಯಾದಿ ಆರೋಗ್ಯಕರ ಅಭ್ಯಾಸಗಳು ಮೆದುಳಿನ ಸಮರ್ಪಕ ಕಾರ್ಯನಿರ್ವಹಣೆಯನ್ನು ಕಾಪಾಡಿಕೊಳ್ಳುವಲ್ಲಿ ಸಹಕರಿಸುತ್ತವೆ.
ಮೆದುಳನ್ನು ಸದಾ ಮಾನಸಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಇರುವಂತೆ ಕಾಯ್ದುಕೊಳ್ಳುವುದೂ ಮೆದುಳಿನ ಆರೋಗ್ಯ ದೃಷ್ಟಿಯಿಂದ ಸಮಾನ ಪ್ರಾಶಸ್ತ್ಯ ಹೊಂದಿದೆ. ಉತ್ತಮ ಪುಸ್ತಕಗಳ ಓದು, ಹೊಸ ಹೊಸ ಕೌಶಲಗಳ ಕಲಿಕೆಯಲ್ಲಿ ಆಸಕ್ತರಾಗುವುದು, ಸಮಸ್ಯೆ ಅಥವಾ ಒಗಟುಗಳನ್ನು ಬಿಡಿಸುವ ಕಲೆ, ಅರ್ಥಪೂರ್ಣ ಹಾಗೂ ಆರೋಗ್ಯಪೂರ್ಣ ಮಾತುಕಥೆಗಳಲ್ಲಿ ತೊಡಗಿಸಿಕೊಳ್ಳುವುದು, ಸಮುದಾಯ ಸೇವೆ, ಸಾಮಾಜಿಕ ಬಾಂಧವ್ಯವನ್ನು ವೃದ್ಧಿಸಿಕೊಳ್ಳುವುದು ಮೊದಲಾದವುಗಳು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುವುದರೊಂದಿಗೆ ಜೀವನದ ಮುಂದಿನ ದಿನಗಳಲ್ಲಿ ನೆನಪಿನ ಶಕ್ತಿಯ ಕುಗ್ಗುವಿಕೆಯನ್ನೂ ಕಡಿಮೆಗೊಳಿಸುತ್ತದೆ.
ಮೆದುಳನ್ನು ರಕ್ಷಿಸುವಲ್ಲಿ ಬಹಳ ಪರಿಣಾಮಕಾರಿಯಾದ ಒಂದು ಮಾರ್ಗ ರಕ್ತನಾಳಗಳನ್ನು ಹಾಳು ಮಾಡುವ ವೈದ್ಯಕೀಯ ಸಮಸ್ಯೆಗಳ ನಿಯಂತ್ರಣ. ಅಧಿಕ ರಕ್ತದ ಒತ್ತಡವು ಪಾಶ್ರ್ವವಾಯುವಿನಂಥ ಅಪಾಯಕಾರಿ ಅಂಶಗಳಿಗೆ ಒಂದು ಪ್ರಬಲ ಕಾರಣವಾಗಿದ್ದು ಅದನ್ನು ಮಾರ್ಪಡಿಸಿ ಕೊಳ್ಳುವುದು ಅತ್ಯಂತ ಮುಖ್ಯವಾದ ಒಂದು ವಿಷಯ. ಮಧುಮೇಹ, ಅಧಿಕ ಕೊಬ್ಬು, ಬೊಜ್ಜು ಮತ್ತು ಅಸಮತೋಲನದಿಂದ ಕೂಡಿದ ಹೃದಯ ಬಡಿತಗಳು ಕೂಡ ಪಾಶ್ರ್ವವಾಯುವಿನಂಥ ಅಪಾಯಕಾರಿ ರೋಗಗಳಿಗೆ ಹೆಚ್ಚಿನ ಅವಕಾಶ ಮಾಡಿಕೊಡುತ್ತವೆ. ಇದರೊಂದಿಗೆ ಅರಿವು ಅಥವಾ ಜ್ಞಾನದ ಕುಗ್ಗುವಿಕೆಗೂ ಕಾರಣವಾಗುತ್ತದೆ. ಕ್ರಮಬದ್ಧವಾದ ತಪಾಸಣೆ, ವೈದ್ಯರು ಸೂಚಿಸಿದ ಔಷಧಿಗಳ ಸೇವನೆ, ಆರೋಗ್ಯಕರವಾದ ಜೀವನ ಶೈಲಿಯ ಆಯ್ಕೆ ಗಣನೀಯವಾಗಿ ಈ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುತ್ತವೆ.
ಈ ಸಂಬಂಧ ಎಚ್ಚರಿಕೆಯ ಸೂಚನೆಗಳನ್ನು ಮುಂಚಿತವಾಗಿ ಗುರುತಿಸುವುದರ ಮೂಲಕ ಜೀವವನ್ನು ಅಪಾಯದಿಂದ ಪಾರು ಮಾಡಬಹುದು. ಇದ್ದಕ್ಕಿದ್ದಂತೆ ಮುಖ ಕೈ ಕಾಲುಗಳಲ್ಲಿ ದುರ್ಬಲತೆ, ತೊದಳು ಹಾಗೂ ಅಸ್ಪಷ್ಟ ಮಾತು, ದೃಷ್ಟಿಯನ್ನು ಕಳೆದುಕೊಳ್ಳುವುದು, ಅತಿ ತೀವ್ರವಾದ ತಲೆ ಸುತ್ತು, ಇದ್ದಕ್ಕಿದ್ದಂತೆ ಗೊಂದಲಗಳು ಪಾಶ್ರ್ವವಾಯುವಿನ ಅಪಾಯದ ಮುನ್ಸೂಚನೆಗಳು. ಈ ಲಕ್ಷಣಗಳು ಕಂಡು ಬಂದ ತಕ್ಷಣ ವೈದ್ಯಕೀಯ ಚಿಕಿತ್ಸೆಯತ್ತ ಗಮನ ಹರಿಸಿದಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಇವುಗಳಲ್ಲದೆ ಮತ್ತೆ ಮತ್ತೆ ಕಾಣಿಸಿಕೊಳ್ಳುವ ತಲೆ ಬೇನೆ, ಮರುಕಳಿಸುತ್ತಿರುವ ಅಪಸ್ಮಾರ ಅಥವಾ ಮೂರ್ಛೆ, ನೆನಪಿನ ಶಕ್ತಿಯ ಕ್ಷೀಣತೆ, ಮರೆಗುಳಿತನ, ನಡುಕ, ಸಮತೋಲನದ ಸಮಸ್ಯೆ, ಜಡತ್ವಗಳನ್ನು ವಯೋಸಹಜವಾದ ಲಕ್ಷಣಗಳೆಂದು ಭಾವಿಸಿ ನಿರ್ಲಕ್ಷಿಸಲೇಬಾರದು. ಆದಷ್ಟು ಶೀಘ್ರವಾಗಿ ಆರಂಭದ ಹಂತದಲ್ಲಿಯೇ ರೋಗ ಪತ್ತೆ ಮಾಡಿ ಸೂಕ್ತ ಆರೈಕೆ ಒದಗಿಸಿದಲ್ಲಿ ಉತ್ತಮ ಫಲಿತಾಂಶದೊಂದಿಗೆ ಜೀವನದ ಗುಣಮಟ್ಟದಲ್ಲಿಯೂ ಪ್ರಗತಿಯನ್ನು ಕಾಣಬಹುದು.
ಮಂಗಳೂರಿನ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಕರ್ನಾಟಕ ಮೆದುಳು ಆರೋಗ್ಯದಲ್ಲಿ ಮೊದಲ ಹೆಜ್ಜೆಯ (ಏಚಿಡಿಟಿಚಿಣಚಿಞಚಿ ಃಡಿಚಿiಟಿ ಊeಚಿಟಣh Iಟಿiಣiಚಿಣive- ಏಚಿಃಊI) ಅಡಿಯಲ್ಲಿ ಮೆದುಳು ಚಿಕಿತ್ಸಾಲಯವು ಸ್ಥಾಪಿತವಾಗಿದೆ. ಈ ಚಿಕಿತ್ಸಾಲಯವು ಸಮಗ್ರ ರೋಗಿ ಕೇಂದ್ರಿತ ನರರೋಗ ಸೇವೆಗೆ ತನ್ನನ್ನು ಅರ್ಪಿಸಿಕೊಂಡಿದ್ದು, ಮಾನಸಿಕ ಆರೋಗ್ಯ ಕಾಪಾಡಲು ಬದ್ಧವಾಗಿರುತ್ತದೆ. ಈ ಚಿಕಿತ್ಸಾಲಯವು ತಪಾಸಣೆ, ಮೌಲ್ಯಮಾಪನ, ರೋಗನಿರ್ಣಯ, ಸೂಕ್ತ ಚಿಕಿತ್ಸೆ, ಆಪ್ತಸಲಹೆ, ಸಮಾಲೋಚನೆ, ಅಪಾಯಕಾರಿ ಅಂಶಗಳ ನಿರ್ವಹಣೆ, ಆರೈಕೆ ನೋಡಿಕೊಳ್ಳುವವರಿಗೆ ಬೆಂಬಲ, ಪುನರ್ವಸತಿ, ಮಾರ್ಗದರ್ಶನ ಮತ್ತು ಅವಶ್ಯಕ ಎಂದು ಕಂಡು ಬಂದಲ್ಲಿ ತಜ್ಞರ ಸೇವೆಗೆ ಶಿಫಾರಸು ಮೊದಲಾದ ಕ್ರಮಗಳನ್ನು ರೋಗಿಗಳ ಹಿತದೃಷ್ಟಿಯಿಂದ ಒದಗಿಸುತ್ತಿದೆ. ಕ್ಲಿನಿಕಲ್ ಸೇವೆಯೊಂದಿಗೆ ಈ ಚಿಕಿತ್ಸಾಲಯವು ಹೆಚ್ಚುತ್ತಿರುವ ನರರೋಗದ ಸಂಖ್ಯೆ, ಹೊರೆ ಅಥವಾ ಭಾರವನ್ನು ಕಡಿಮೆಗೊಳಿಸುವ ಗುರಿ ಹೊಂದಿದ್ದು ಅದಕ್ಕಾಗಿ ಸಮುದಾಯ ಜಾಗೃತಿ, ಶಿಕ್ಷಣ, ತಡೆಗಟ್ಟುವ ಕೌಶಲಗಳತ್ತ ಸಕ್ರಿಯವಾಗಿ ಉತ್ತೇಜನ ನೀಡುತ್ತಿದೆ. ಮೆದುಳಿನ ಆರೋಗ್ಯವು ಕೇವಲ ವೃತ್ತಿಪರ ಆರೋಗ್ಯ ನಿರತರ ಅಥವಾ ವೈದ್ಯರ ಹೊಣೆಗಾರಿಕೆಯμÉ್ಟೀ ಅಲ್ಲ. ಕುಟುಂಬ, ಶಿಕ್ಷಣ ಸಂಸ್ಥೆಗಳು, ಉದ್ಯೋಗಸ್ಥಳ, ಸಮುದಾಯ ಸಂಘಟನೆಗಳು ಮತ್ತು ನೀತಿ ನಿರ್ಮಾಪಕರು ಕೂಡ ಆರೋಗ್ಯಪೂರ್ಣ ಜೀವನ ಶೈಲಿಯನ್ನು ಉತ್ತೇಜಿಸುವ ಮತ್ತು ಮೆದುಳು ಸಂಬಂಧಿ ಕಾಯಿಲೆಗಳಿಂದ ನರಳುತ್ತಿರುವವರಿಗೆ ಬೆಂಬಲ ಹಾಗೂ ಆತ್ಮವಿಶ್ವಾಸ ತುಂಬುವ ವಾತಾವರಣ ನಿರ್ಮಾಣದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಬೇಕು.
ವಿಶ್ವ ಮೆದುಳು ದಿನದ ಸಂದರ್ಭದಲ್ಲಿ ನಾವು ಈ ಮಹತ್ತದ ಅಂಶಗಳನ್ನು ಮರೆಯದಿರೋಣ. ಸರಳವಾದ ದೈನಂದಿನ ಜೀವನ, ಧೈಹಿಕವಾದ ಚಟುವಟಿಕೆ, ಆರೋಗ್ಯಕರ ಆಹಾರ ಸೇವನೆ. ರಕ್ತದೊತ್ತಡ ಮತ್ತು ಮಧುಮೇಹಗಳ ನಿಯಂತ್ರಣ. ತಂಬಾಕು ಸೇವನೆಯನ್ನು ತ್ಯಜಿಸುವುದು. ಒತ್ತಡಗಳ ನಿರ್ವಹಣೆ. ಸೂಕ್ತ ಸಮಯದಲ್ಲಿ ವೈದ್ಯಕೀಯ ಸಲಹೆ. ನರ ಸಂಬಂಧ ರೋಗಗಳಿಂದ ಬಳಲುತ್ತಿರುವವರಿಗೆ ಬೆಂಬಲ ಹಾಗೂ ಆತ್ಮವಿಶ್ವಾಸ. ಈ ಮೂಲಕ ಆರೋಗ್ಯಪೂರ್ಣ ಸಮುದಾಯ ಮತ್ತು ಉಜ್ವಲ ಭವಿಷ್ಯ ನಿರ್ಮಾಣ ಮಾಡೋಣ. ಆರೋಗ್ಯ ಪೂರ್ಣ ಮೆದುಳಿನಿಂದ ಆರೋಗ್ಯ ಪೂರ್ಣ ಜೀವನ. ಆದುದರಿಂದ ವಿಶ್ವ ಮೆದುಳು ದಿನಕ್ಕμÉ್ಟ ಇದನ್ನು ಸೀಮಿತಗೊಳಿಸದೆ ಪ್ರತಿ ದಿನವೂ ಮೆದುಳಿನ ಸುರಕ್ಷತೆಯತ್ತ ಜಾಗೃತರಾಗಿರುವಂತೆ ಪ್ರತಿಜ್ಞೆ ಮಾಡೋಣ ಎಂದು ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಮೆದುಳು ಆರೋಗ್ಯ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ದ್ವಿತಿ ವಿನಯ್ ಸೊರಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


