ಸೆ. 19ರಂದು ಮೇಯರ್ ಉಪಮೇಯರ್ ಚುನಾವಣೆ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ 25ನೇ ಅವಧಿಯ ಮೇಯರ್ ,ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರುಗಳ ಚುನಾವಣೆಯು ಸೆಪ್ಟೆಂಬರ್ 19ರಂದು ಗುರುವಾರ ಮಧ್ಯಾಹ್ನ 12 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯ ಮಂಗಳ ಸಭಾಂಗಣದಲ್ಲಿ ನಡೆಯಲಿದೆ.
ಸಂಜೀವಿನಿ ಮಾಸಿಕ ಸಂತೆ : ಖಾಯಂ ಆಗಿಸಲು ಕ್ರಮ – ಜಿಲ್ಲಾ ಪಂಚಾಯತ್ ಸಿಇಓ
ಮಂಗಳೂರು,: ಸಂಜೀವಿನಿ ಮಾಸಿಕ ಸಂತೆಯು ಜನಸಾಮಾನ್ಯರನ್ನು ತಲುಪಲು ತಾಲೂಕುಗಳಲ್ಲಿ ಮುಂದಿನ ದಿನಗಳಲ್ಲಿ ಸೂಪರ್ ಮಾರ್ಕೆಟ್‍ನ ಪರಿಕಲ್ಪನೆಯತೆ ಅಂಗಡಿಗಳನ್ನು ನಿರ್ಮಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಹೇಳಿದರು.ಅವರು ಗುರುವಾರ ಜಿಲ್ಲಾ ಪಂಚಾಯತ್, ಮಂಗಳೂರು ತಾಲೂಕು ಪಂಚಾಯತ್, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ...
ಬೇಗನೆ ಗುರುತಿಸುವಿಕೆ, ಸೂಕ್ತ ಚಿಕಿತ್ಸೆಯಿಂದ ಕ್ಯಾನ್ಸರ್ ಹಿಮ್ಮೆಟ್ಟಿಸಲು ಸಾಧ್ಯ“:ಡಾ. ಶಾಂತಾರಾಮ್ ಶೆಟ್ಟಿ
ಮಂಗಳೂರು: ತಪಸ್ಯ ಫೌಂಡೇಶನ್, ಎಲ್ ಸಿಐಎಫ್, ಲಯನ್ಸ್ ಇಂಟರ್ ನ್ಯಾಷನಲ್ ಮತ್ತು ಕೆಎಂಸಿ ಆಸ್ಪತ್ರೆ ಸಹಯೋಗದೊಂದಿಗೆ ಬಾಲ್ಯದ ಕ್ಯಾನ್ಸರ್ ಆರೈಕೆ ಕಾರ್ಯಕ್ರಮ “ಶೌರ್ಯ” ಇದರ ಉದ್ಘಾಟನಾ ಸಮಾರಂಭ ಗುರುವಾರ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಜರುಗಿತು.
ದೀಪ ಬೆಳಗಿಸಿದ ನಿಟ್ಟೆ ಯೂನಿವರ್ಸಿಟಿ ಸಹಕುಲಾಧಿಪತಿ ಡಾ. ಶಾಂತಾರಾಮ್ ಶೆಟ್ಟಿ ಅವರು, ” ವೈಜ್ಞಾನಿಕವಾಗಿ ಕ್ಯಾನ್ಸರ್...
ಸೆ.10 ರಂದು “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ತುಳು ಸಿನಿಮಾದ ಹಾಡು ಬಿಡುಗಡೆ
ಮಂಗಳೂರು: ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಅರ್ಪಿಸುವ, ಎಚ್.ಪಿ.ಆರ್ ಫಿಲ್ಮ್ಸ್- ಹರಿಪ್ರಸಾದ್ ರೈ ಯವರ ಸಹಯೋಗದಲ್ಲಿ ಆನಂದ ಕುಂಪಲ ರವರ ನಿರ್ಮಾಣ ಹಾಗೂರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ 'ಮಿಡ್ಲ್ ಕ್ಲಾಸ್ ಫ್ಯಾಮಿಲಿ' ತುಳು ಸಿನಿಮಾದ ವೀಡಿಯೋ ಸಾಂಗ್ ಸೆಪ್ಟಂಬರ್ 10 ರಂದು ಸಂಜೆ 4 ಗಂಟೆಗೆ ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಬಿಡುಗಡೆ...
ಸೆ. 7 – 9 : ಬಂಟ್ಸ್ ಹಾಸ್ಟೇಲ್ ಓಂಕಾರ ನಗರದಲ್ಲಿ 18 ನೇ ವರ್ಷದ ಗಣೇಶೋತ್ಸವ
ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳು ಹಾಗೂ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ, ಅಷ್ಟೋತ್ತರ ನಾರೀಕೇಳ ಮಹಾಗಣಾಯಾಗವು ಸೆಪ್ಟೆಂಬರ್ 7ರಿಂದ 9ರವರೆಗೆ ಮಂಗಳೂರಿನ 'ಓಂಕಾರ ನಗರ', ಬಂಟ್ಸ್...
ಅಸಂಘಟಿತ ವಲಯದ ಕಾರ್ಮಿಕರ ನೋಂದಣಿಗೆ ಸೂಚನೆ
ಮಂಗಳೂರು: ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲು ಹಾಗೂ ಸೌಲಭ್ಯ ವಿತರಿಸಲು 23 ವಲಯದ ಅಸಂಘಟಿತ ಕಾರ್ಮಿಕರನ್ನು ಈಗಾಗಲೇ ಗುರುತಿಸಿ ಮಂಡಳಿಯಲ್ಲಿ ನೊಂದಾಯಿಸಲು ಹಾಗೂ ಸೌಲಭ್ಯ ವಿತರಿಸುವ ಸಲುವಾಗಿ ವರ್ಗವಾರು ದತ್ತಾಂಶದ ಅವಶ್ಯಕತೆ ಇರುವ ಕಾರಣ ಸದರಿ ದತ್ತಾಂಶವನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ.ಅಸಂಘಟಿತ ವಲಯದ ಕಾರ್ಮಿಕರು: ಹಮಾಲರು, ಚಿಂದಿ ಆಯುವವರು, ಮನೆಕೆಲಸದವರು, ಮೆಕಾನಿಕ್, ಟೈಲರ್‍ಗಳು, ಅಗಸರು, ಅಕ್ಕಸಾಲಿಗರು,...
ದ.ಕ ಜಿಲ್ಲಾ ಮಟ್ಟದ 21 ಉತ್ತಮ ಶಿಕ್ಷಕರಿಗೆ ಪ್ರಶಸ್ತಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಹಾಗೂ ಬಂಟ್ವಾಳ ತಾಲೂಕು ಮಟ್ಟದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಪ್ರಯುಕ್ತ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸೆ. 5 ರಂದು ಬೆಳಿಗ್ಗೆ 9 ಗಂಟೆಗೆ ಬಂಟ್ವಾಳ ಬಂಟರಭವನದಲ್ಲಿ ನಡೆಯಲಿದೆ. ಸಮಾರಂಭದಲ್ಲಿ 2024ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು 21 ಶಿಕ್ಷಕರಿಗೆ...
ಪಿಲಿಕುಳ ಕಂಬಳ – ಕರೆ ಮುಹೂರ್ತ
ಮಂಗಳೂರು: ಹಲವು ವರ್ಷಗಳ ಬಳಿಕ ಪಿಲಿಕುಳ ನಿಸರ್ಗಧಾಮದಲ್ಲಿ ಕಂಬಳ ನಡೆಯಲಿದ್ದು, ಈ ಪ್ರಯುಕ್ತ ಬುಧವಾರ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಮೇಯರ್ ಸುಧೀರ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಕಂಬಳ ಕರೆಗೆ ಮುಹೂರ್ತ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ. ಆನಂದ್, ಪಿಲಿಕುಳ ನಿಸರ್ಗಧಾಮದ ಕಾರ್ಯಕಾರಿ...
ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು: ಮಂಜುನಾಥ ಭಂಡಾರಿ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ನಿಂತ ನೀರಾಗಿದ್ದು ಜಿಲ್ಲೆಗೆ ಹೊರಗಿನಿಂದ ಬರುವ ಪ್ರವಾಸಿಗರ ಸಂಖ್ಯೆ ತೀರಾ ಇಳಿಮುಖವಾಗಿದೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಮತ್ತು ಪಿಲಿಕುಳದಲ್ಲಿ ಉತ್ಸವವನ್ನು ಆಯೋಜಿಸುವ ಮೂಲಕ ಪಿಲಿಕುಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ ಹೇಳಿದ್ದಾರೆ.ದ.ಕ....
ಮಂಗಳೂರು ಉತ್ತರ : ಸೆ.5ರಂದು ಶಿಕ್ಷಕರ ದಿನಾಚರಣೆ
ಮಂಗಳೂರು: ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಿಕ್ಷಕರ ದಿನಾಚರಣೆ ಸಮಿತಿ ಮತ್ತು ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇವರ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮ ಸೆಪ್ಟೆಂಬರ್ 5ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ಹಳೆಯಂಗಡಿ, ಪಾವಂಜೆಯ ನಾಗವೃಜ ಶ್ರೀ ವಾಣಿ ಶಾಲೆ...