ಸಿ.ಆರ್.ಝಡ್. ಉಲ್ಲಂಘನೆ ವಿರುದ್ಧ ಕ್ರಮ: ಈಶ್ವರ ಖಂಡ್ರೆ
ಮಂಗಳೂರು: ಕರಾವಳಿ ನಿಯಂತ್ರಣ ವಲಯ ಉಲ್ಲಂಘನೆ ಕುರಿತಂತೆ ವರದಿ ಸಿದ್ಧಪಡಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಅವರು ಮಂಗಳವಾರ ಮಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಯಲ್ಲಿ ಪರಿಸರ ಮತ್ತು ಅರಣ್ಯ ಇಲಾಖೆಯ ಪರಾಮರ್ಶೆ ಸಭೆ ನಡೆಸಿ ಮಾಥನಾಡಿದರು. ಕರ್ನಾಟಕದ ಕರಾವಳಿ ತೀರದಲ್ಲಿ ನಿರ್ಮಾಣ ಮಾಡಲಾಗಿರುವ...
ಬೃಹತ್ ಪ್ರಮಾಣದಲ್ಲಿ ಸಾಗಾಟ ಮಾಡುತ್ತಿದ್ದ 28 ಲಕ್ಷ ಮೌಲ್ಯದ ಗಾಂಜಾ ವಶ; ಇಬ್ಬರು ಆರೋಪಿಗಳ ಸೆರೆ
ಮಂಗಳೂರು : ಒರಿಸ್ಸಾ ರಾಜ್ಯದಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ ಮಹೇಂದ್ರ ಬೊಲೆರೋ ವಾಹನದಲ್ಲಿ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿದ್ದವರನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ 120 ಕೆ ಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಜ.6 ರಂದು ಮಂಗಳೂರು ನಗರಕ್ಕೆ ಒರಿಸ್ಸಾ ರಾಜ್ಯದಿಂದ ಮಹೇಂದ್ರ ಬೊಲೆರೋ ವಾಹನದಲ್ಲಿ ಗಾಂಜಾವನ್ನು...
ಬಸ್ಸಿನ ಚಕ್ರ ಒಡೆದು ನಿಯಂತ್ರಣ ತಪ್ಪಿ ಅಟೋ ರಿಕ್ಷಾಕ್ಕೆ ಡಿಕ್ಕಿ,ಪ್ರಯಾಣಿಕರಿಗೆ ಗಾಯ
ಪುಂಜಾಲಕಟ್ಟೆ: ಕೆಎಸ್ ಆರ್ ಟಿ ಸಿ ಬಸ್ಸಿನ ಚಕ್ರ ಒಡೆದು, ಬಸ್ಸು ಚಾಲಕನ ನಿಯಂತ್ರಣ ತಪ್ಪಿ, ಅಂಗಡಿ ಬದಿ ನಿಲ್ಲಿಸಿದ್ದ ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಘಟನೆ ಬಂಟ್ವಾಳ ತಾಲೂಕು ಕಾವಳಮುಡೂರು ಗ್ರಾಮದ ಎನ್ .ಸಿ ರೋಡ್ ಎಂಬಲ್ಲಿಸ೦ಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದೆ. , ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ಕೆಲವರಿಗೆ ಗಾಯಗಳಾಗಿದ್ದು ಅವರನ್ನು...
5 ವರ್ಷಗಳಿಂದ ತಲೆಮರೆಸಿಕೊಂಡಿದ್ದ18 ಆರೋಪಿಗಳ ಬ೦ಧನ
ಬಂಟ್ವಾಳ :ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊ೦ದರಲ್ಲಿ ಆರೋಪಿಗಳಾಗಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಸುಮಾರು 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ 18 ಆರೋಪಿಗಳನ್ನು ಗ್ರಾಮಾಂತರ ಠಾಣಾ ಪೊಲೀಸರುಬ೦ಧಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯದ ಪೀಯುಶ್ ಕುಮಾರ್ , ವಿನಯ್ ಕುಮಾರ್ , ಬ್ರಿಜಿ ನಾರಾಯಣ , ರವೀಂದ್ರ, ಕೃಪ ಶಂಕರ್ , ವಿವೇಕ್ ರಾಮ್...
ಬಲ್ಮಠ : ಮಾದಕ ದ್ರವ್ಯ ಮಾರಾಟಗಾರರ ಬಂಧನ
ಮಂಗಳೂರು: ಮಂಗಳೂರು ನಗರದ ಬಲ್ಮಠ ನ್ಯೂ ರೋಡ್ ನಲ್ಲಿ ವಾಹನ ಪಾರ್ಕಿಂಗ್ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಮಾದಕವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಕೇಂದ್ರ ಉಪ –ವಿಭಾಗ ಆ್ಯಂಟಿ ಡ್ರಗ್ ತಂಡ ಕಾರ್ಯಾಚರಣೆ ನಡೆಸಿ ಬ೦ಧಿಸಿದೆ.
ಅತ್ತಾವರ ನಿವಾಸಿ ಆದಿತ್ಯ ಕೆ.(29) ಹಾಗೂ ಅಡ್ಯಾರ್ ಪದವು ಲೋಬೊ ನಗರ ನಿವಾಸಿ ರೋಹನ್...
ಕುಮಾರಪರ್ವತ ಚಾರಣ ಪಥಕ್ಕೆ ಸಚಿವ ಈಶ್ವರ ಖಂಡ್ರೆ ಭೇಟಿ
ಸುಬ್ರಹ್ಮಣ್ಯ, : ಇತ್ತೀಚೆಗೆ ಒಂದೇ ದಿನ ಸಾವಿರಾರು ಚಾರಣಿಗರು ಆಗಮಿಸಿ ಸುದ್ದಿಯಾಗಿದ್ದ, ಕುಮಾರಪರ್ವತ ಚಾರಣ ಪಥಕ್ಕಿಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು.ಪ್ರಸಕ್ತ ಚಾರಣಕ್ಕೆ ತಾತ್ಕಾಲಿಕ ನಿರ್ಬಂಧ ಹೇರಿರುವ ಪ್ರವೇಶದ್ವಾರದಲ್ಲಿ ಚಾರಣ ಪಥದ ವಿವರ ಪಡೆದ ಸಚಿವರು, ಕೂಡಲೇ ಈ ಚಾರಣ ಪಥದಲ್ಲಿ...
ಭಾರತವನ್ನು ಸಮೃದ್ಧ ‘ಭಾರತ’ವನ್ನಾಗಿ ಮಾಡಿರುವುದು ಕಾಂಗ್ರೆಸ್ : ಸಚಿವ ಕೆ.ಜೆ.ಜಾರ್ಜ್
ಮಂಗಳೂರು: 70 ವರ್ಷದಲ್ಲಿ ಭಾರತವನ್ನು ಸಮೃದ್ಧ ‘ಭಾರತ’ವನ್ನಾಗಿ ಮಾಡಿರುವುದು ಕಾಂಗ್ರೆಸ್. ಪಂಡಿತ್ ಜವಾಹರಲಾಲ್ ನೆಹರು ಅವರು ಭಾರತವನ್ನು ಕಟ್ಟಿದರು. ಇಂದಿರಾ ಗಾಂಧಿ ಅವರು ಭಾರತವನ್ನು ಉಳಿಸಿ ಬೆಳೆಸಿದರು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.ಸೋಮವಾರ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ಅವರು...
ದಕ್ಷಿಣ ಕನ್ನಡ ಜಿಲ್ಲೆಯ ಆನೆ ಹಾವಳಿ ತಡೆಗೆ ಕ್ರಮ : ಸಚಿವ ಈಶ್ವರ ಖಂಡ್ರೆ ಭರವಸೆ
ಕುಕ್ಕೆ ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆನೆ ಮತ್ತು ಕಾಡೆಮ್ಮೆಗಳ ಹಾವಳಿಯಿಂದ ಆಗುತ್ತಿರುವ ಬೆಳೆ ಹಾನಿ ಮತ್ತು ಜೀವಹಾನಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ನೀಡಿದ್ದಾರೆ.ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೊಲ್ಲಮೊಗ್ರು ಮತ್ತು ಸುತ್ತಲಿನ ನಾಲ್ಕು ಗ್ರಾಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ...
ಏಕಬಳಕೆ ಪ್ಲಾಸ್ಟಿಕ್ ತ್ಯಜಿಸಲು ಸಂಕಲ್ಪ ಮಾಡಿ: ಸಚಿವ ಈಶ್ವರ ಖಂಡ್ರೆ
ಧರ್ಮಸ್ಥಳ : ನೀರಲ್ಲಿ ಕರಗದ, ಮಣ್ಣಲ್ಲಿ ಮಣ್ಣಾಗದ, ಸುಟ್ಟರೆ ವಿಷಕಾರಿ ಅಂಶವನ್ನು ಗಾಳಿಗೆ ಸೇರಿಸುವ ಪ್ಲಾಸ್ಟಿಕ್ ಸಮುದಾಯ ಆರೋಗ್ಯಕ್ಕೆ ಮಾರಕವಾಗಿದ್ದು, ಭೂಗ್ರಹ ರಕ್ಷಣೆಗೆ ಎಲ್ಲ ಪ್ರಜ್ಞಾವಂತ ನಾಗರಿಕರು ಏಕ ಬಳಕೆ ಪ್ಲಾಸ್ಟಿಕ್ ಬಳಕೆ ತ್ಯಜಿಸಲು ಸಂಕಲ್ಪ ಮಾಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮನವಿ ಮಾಡಿದ್ದಾರೆ.ಅವರು ಸೋಮವಾರ...
ಚಾರ್ಮಾಡಿ ಘಾಟ್ ರಸ್ತೆಉನ್ನತಿಕರಣಕ್ಕೆ ಅನುಮೋದನೆ: ಸಂಸದ ನಳಿನ್ ಕುಮಾರ್ ಕಟೀಲ್ ಕೃತಜ್ಞತೆ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ-73 ರ ಮಂಗಳೂರು- ಮೂಡಿಗೆರೆ-ತುಮಕೂರು ವಿಭಾಗದ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ 10.8 ಕಿ.ಮೀ.ಉದ್ದದ ಪೇವ್ದ್ ಶೋಲ್ಡರ್ ನೊಂದಿಗೆ ದ್ವಿಪಥ ರಸ್ತೆಯಾಗಿ ಅಗಲೀಕರಣ ಕಾಮಗಾರಿಗೆ ಇಪಿಸಿ ಆಧಾರದಲ್ಲಿ ಅನುಮೋದನೆ ನೀಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್...








