ಫೆ.4 ರಂದು ಬೊಂದೆಲ್ ಶಾಲಾ ವಠಾರದಲ್ಲಿ 16 ನೇ ಸ್ಟ್ಯಾನ್ ನೈಟ್ ಸಂಗೀತ ರಸಮಂಜರಿ
ಮಂಗಳೂರು : ಸಂತ ಲಾರೆನ್ಸರ ದೇವಾಲಯ ಮತ್ತು ಪುಣ್ಯಕ್ಷೇತ್ರ ಮಂಗಳೂರು ಮತ್ತು ಅಲ್ಫ್ರೆಡ್ ಬೆನ್ನಿಸ್ ಕ್ರಿಯೇಶನ್ಸ್ ಮಂಗಳೂರು ಅವರ ಸಹಯೋಗದೊಂದಿಗೆ 16 ನೇ ಸ್ಟ್ಯಾನ್ ನೈಟ್ ಸಂಗೀತ ರಸಮಂಜರಿ ಫೆ. 4 ರಂದು ಆದಿತ್ಯವಾರ ಸಂಜೆ 4 ಗಂಟೆಗೆ ಬೋಂದೆಲ್ ಆಂಗ್ಲ ಮಧ್ಯಮ ಶಾಲಾ ವಠಾರದಲ್ಲಿ ಆಯೋಜಿಸಲಾಗಿದೆ. ಈ ಕಾರ‍್ಯಕ್ರಮದಲ್ಲಿ ಹೆಸರಾಂತ ಸಂಗೀತಗಾರರು, ನೃತ್ಯಗಾರರು,...
ಖ್ಯಾತ ಸಾಹಿತಿ ಡಾ .ಜೆರಾಲ್ಡ್ ಪಿಂಟೊಗೆ ಕೊಂಕಣಿ ಲೇಖಕ್ ಸಂಘದ ಸಾಹಿತ್ಯ ಪ್ರಶಸ್ತಿ
ಮ೦ಗಳೂರು: 2024ನೇ ಸಾಲಿನ ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಸಾಹಿತಿ ಡಾ. ಜೆರಾಲ್ಡ್ ಪಿಂಟೊ (ಜೆರಿ ನಿಡ್ಡೋಡಿ) ಅವರನ್ನು ಆಯ್ಕೆಮಾಡಲಾಗಿದೆ. ಪ್ರಶಸ್ತಿಯು ರುಪಾಯಿ 25000/- ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.ಕೊಂಕಣಿ ಲೇಖಕ್ ಸಂಘ್ ಕರ್ನಾಟಕ, ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ 2018ರಲ್ಲಿಆರಂಭಗೊಂಡಿತು. 2022ರಲ್ಲಿ...
ಹೇರ್ ಕಟಿಂಗ್ ಶಾಪಿಗೆ ನುಗ್ಗಿ ಟಿವಿ ಕದ್ದಾತನ ಸೆರೆ
ಮೂಡುಬಿದಿರೆ:ಮೂಡುಬಿದಿರೆಯ ಹೇರ್ ಕಟಿಂಗ್ ಶಾಪ್ ವೊ೦ದಕ್ಕೆ ನುಗ್ಗಿ ಟಿವಿ ಕದ್ದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬ೦ಧಿಸಿದ್ದಾರೆ.ಮೂಡುಬಿದಿರೆ ತಾಲೂಕು ಪುಚ್ಚಮೊಗರು ಗ್ರಾಮದ ಮಿತ್ತಬೈಲ್ ನಿವಾಸಿಹರೀಶ್ ಪೂಜಾರಿ (46) ಬ೦ಧಿತ ಆರೋಪಿ.ಜ.8 ರ೦ದು ರಾತ್ರಿ ಮೂಡುಬಿದಿರೆ ಸ್ವರಾಜ್ ಮೈದಾನದಲ್ಲಿರುವ ಹೇರ್ ಕಟಿಂಗ್ ಶಾಪ್ ವೊ೦ದಕ್ಕೆ ಯಾರೋ ಕಳ್ಳರು ಅಂಗಡಿಯ ಹಿಂದಿನ ಗೋಡೆಯಲ್ಲಿ ಕನ್ನ ಕೊರೆದು ಒಳಗೆ ಪ್ರವೇಶಿಸಿ...
ಜ.26ರಂದು ಜಿಲ್ಲಾಮಟ್ಟದ ಗಣರಾಜ್ಯೋತ್ಸವ
ಮಂಗಳೂರು:ಜಿಲ್ಲಾಡಳಿತದ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಜ.26ರ ಗುರುವಾರ ಬೆಳಿಗ್ಗೆ 9 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಘನ ಉಪಸ್ಥಿತಿಯಲ್ಲಿ ಆರೋಗ್ಯ ಮತ್ತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸಂದೇಶ ನೀಡುವರು.ಕಾರ್ಯಕ್ರಮದ...
ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಸಹಾಯಧನ ವಿತರಣೆ
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಸಮಾಜ ಕಲ್ಯಾಣ ಸಹಾಯಧನ ಚೆಕ್ ವಿತರಣಾ ಕಾರ್ಯಕ್ರಮ ಬುಧವಾರ ಬಂಟ್ಸ್ ಹಾಸ್ಟೆಲ್ ನಲ್ಲಿರುವ ಬಂಟರ ಮಾತೃ ಸಂಘದ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರುಗಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.ಇದೇ ಸಂದರ್ಭದಲ್ಲಿ ಮಂಗಳೂರು...
ಜ.29 ರಂದು ಮೇಯರ್ ಫೋನ್ ಇನ್ ಕಾರ್ಯಕ್ರಮ
ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಸಾರ್ವಜನಿಕರೊಂದಿಗೆ ಜನವರಿ 29ರಂದು ಬೆಳಿಗ್ಗೆ 11 ಗಂಟೆಯಿಂದ 12 ಗಂಟೆಯವರೆಗೆ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಲಿರುವರು.ಸಾರ್ವಜನಿಕರು ತಮ್ಮ ಅಹವಾಲುಗಳನ್ನು ದೂರವಾಣಿ ಸಂಖ್ಯೆ: 0824-2220301 ಅಥವಾ 0824-2220318 ಕರೆ ಮಾಡಿ ತಿಳಿಸಬಹುದು ಎಂದು ಮಹಾನಗರಪಾಲಿಕೆ ಪರಿಷತ್ತು ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರ್. ಎಫ್. ಸಿ. ಮಸ್ಕರೇನ್ಹಸ್ ಅವರ 150ನೇ ಜನ್ಮ ದಿನಾಚರಣೆ
ಮ೦ಗಳೂರು: ದೇವರ ಸೇವಕ ಆರ್. ಎಫ್. ಸಿ. ಮಸ್ಕರೇನ್ಹಸ್ ಅವರ 150ನೇ ಜನ್ಮ ದಿನಾಚರಣೆ ಮತ್ತು ಗುರುದೀಕ್ಷೆಯ ಶತಮಾನೋತ್ತರ ಬೆಳ್ಳಿಹಬ್ಬದ ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ಬೆಂದೂರಿನ ಸೈoಟ್ ಸೆಬಾಸ್ಟಿಯನ್ ಚರ್ಚ್ ನಲ್ಲಿ ಸಂಭ್ರಮದ ಪವಿತ್ರ ಬಲಿಪೂಜೆ ನಡೆಯಿತು.
ಗೌರವಾನ್ವಿತ ಅತಿ ವಂದನೀಯ ಅಲೋಶಿಯಸ್ ಪಾವ್ಲ್ ಡಿಸೋಜಾ ಅವರು ಪಾಟ್ನಾದ ನಿವೃತ್ತ ಆರ್ಚ್ ಬಿಷಪ್ ವಂದನೀಯ...
ಸಂವಿಧಾನ ಜಾಥಾ ಯಶಸ್ಸಿಗೆ ಜಿಲ್ಲಾಧಿಕಾರಿ ಸೂಚನೆ
ಮಂಗಳೂರು: ಜ. 26 ರಿಂದ ಜಿಲ್ಲೆಯಲ್ಲಿ ನಡೆಯಲಿರುವ ಸಂವಿಧಾನ ಜಾಥಾ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.ಅವರು ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂವಿಧಾನ ಜಾಥಾ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಸಂವಿಧಾನದ ವಿವಿಧ ಅಂಶಗಳ ಮಹತ್ವ ಸಾರುವ ಆಕರ್ಷಕ ಸ್ಥಬ್ಧಚಿತ್ರ ಹಾಗೂ ಕಲಾ...
ಮಂಗಳೂರು ವಿಮಾನ ನಿಲ್ದಾಣ :ಕಾರ್ಗೋ ಟರ್ಮಿನಲ್ ನಲ್ಲಿ ಅಡಿಕೆ ಪಾರ್ಸೆಲ್ ನಿರ್ವಹಣೆ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಎಂಐಎ) 2024 ರ ಜನವರಿ ಆರಂಭದಲ್ಲಿ ತನ್ನ ಇಂಟಿಗ್ರೇಟೆಡ್ ಕಾರ್ಗೋಟರ್ಮಿನಲ್ (ಐಸಿಟಿ) ನಲ್ಲಿ ಅಡಿಕೆಯನ್ನು ಒಳಬರುವ ನಿರ್ವಹಣೆಗೆ ಅನುಕೂಲ ಮಾಡಿಕೊಟ್ಟಿತ್ತು. 1519 ಕೆಜಿ ತೂಕದಕೆಂಪು ತಳಿಯ ಅಡಿಕೆಯನ್ನು 60 ಮೂಟೆಗಳಲ್ಲಿ ಅಗರ್ತಲಾದಿಂದ ಈ ಕರಾವಳಿ ಪಟ್ಟಣಕ್ಕೆ ಬೈಲಿ ಏರ್ ಕಾರ್ಗೋ ಎಂದು ತರಲಾಗಿತ್ತು. ಮೇ 1,2023 ರಂದು...
ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳು — ಭಜನೋತ್ಸವದೊಂದಿಗೆ ಸಂಪನ್ನಗೊಂಡ ಶ್ರೀರಾಮ ವೈಭವ
ಮಂಗಳೂರು: ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ನಡೆದ ಶ್ರೀರಾಮ ವೈಭವ ಭಜನೋತ್ಸವ ಕಾರ್ಯಕ್ರಮ ಕೆನರಾ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಕೃಷ್ಣಮಂದಿರದ ಶ್ರೀರಾಮ ದರ್ಬಾರ್ ನಲ್ಲಿ ನಡೆಯಿತು. ಸೀತಾ ಸಹಿತ ಶ್ರೀ ರಾಮನ ದಿವ್ಯಮೂರ್ತಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.
ಮುಂಜಾನೆಯಿಂದಲೇ ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕ...





