“ಮನಸಲಿ ಜೋರು ಕಲರವ” ಮೆಲೋಡಿ ಹಾಡು ಬಿಡುಗಡೆ
ಮ೦ಗಳೂರು: ಮೆಲೋಡಿ ಹಾಡುಗಳು ಎಂದಿಗೂ ಜನರ ಜೀವನದ ಅವಿಭಾಜ್ಯ ಅಂಗವಾಗಿರುತ್ತವೆ. ಎಲ್ಲಾ ಕಾಲದಲ್ಲೂ ಎಲ್ಲರನ್ನೂ ಆಕರ್ಷಿಸುವ ಹಲವಾರು ಮೆಲೋಡಿ ಹಾಡುಗಳ ಗುಂಪಿಗೆ "ರವಿಕೆ ಪ್ರಸಂಗ" ಚಿತ್ರದ"ಮನಸಲಿ ಜೋರು ಕಲರವ" ಎಂಬ ಅದ್ಭುತವಾದ ಮೆಲೋಡಿ ಹಾಡನ್ನು ನೂರಾರು ಎವರ್ ಗ್ರೀನ್ ಸೂಪರ್ ಹಿಟ್ ಮೆಲೋಡಿ ಹಾಡುಗಳನ್ನು ನೀಡಿರುವ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಬಿಡುಗಡೆ...
ಸ್ವಾದಿಷ್ಠ ಸಿರಿಧಾನ್ಯ ತಿಂಡಿಗಳಿಂದ ಆಕರ್ಷಣೆಗೊಂಡಜಿಲ್ಲಾ ಮಟ್ಟದ ಪಾಕ ಸ್ಪರ್ಧೆ
ಮಂಗಳೂರು: ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ – 2024ರ ಅಂಗವಾಗಿ ಜಿಲ್ಲಾ ಮಟ್ಟದ ಪಾಕ ಸ್ಪರ್ಧೆ ಕಾರ್ಯಕ್ರಮ ಸೋಮವಾರ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆಯಿತು.ಜಿಲ್ಲಾ ಮಟ್ಟದ ಪಾಕ ಸ್ಪರ್ಧೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸುಮಾರು 46 ಸ್ಪರ್ಧಿಗಳು ಭಾಗವಹಿಸಿದ್ದರು. ವಿವಿಧ ಸಿರಿ ಧಾನ್ಯಗಳಿಂದ ತಯಾರಿಸಲ್ಪಟ್ಟ ಬಗೆ ಬಗೆಯ ತಿಂಡಿ ತಿನಿಸು...
ಸ್ಕೌಟ್ಸ್-ಗೈಡ್ಸ್‍ನಿಂದ ಮಕ್ಕಳಲ್ಲಿ ಸೃಜನಶೀಲತೆ: ಪಿ.ಜಿ. ಆರ್.ಸಿಂಧ್ಯಾ
ಮಂಗಳೂರು: ಮಕ್ಕಳ ಸಾಧನೆ ಮತ್ತು ಅವರ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ಕರ್ನಾಟಕ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.ಅವರು ಸೋಮವಾರ ಪದವಿ ಪೂರ್ವ ರೋವರ್ಸ್ ಮತ್ತು ರೇಂಜರ್ಸ್ ವಿಭಾಗದ ನಾಯಕತ್ವ ತರಬೇತಿ ಹಾಗೂ ಜಿಲ್ಲಾ ಪ್ರಾಂಶುಪಾಲರ ಸಂಘದ ಡೈರಿ ಬಿಡುಗಡೆ...
ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಯೋಜನೆ ರೂಪಿಸಿ: ಸಚಿವ ರಹೀಂ ಖಾನ್ ಸೂಚನೆ
ಮಂಗಳೂರು: ನಗರ, ಪಟ್ಟಣ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಗತ್ಯ ಯೋಜನೆ ರೂಪಿಸಿ, ಕಾರ್ಯಗತಗೊಳಿಸುವಂತೆ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಸೂಚಿಸಿದ್ದಾರೆ.ಅವರು ಸೋಮವಾರ ಕೋಟೆಕಾರು ಪಟ್ಟಣ ಪಂಚಾಯತ್‍ಗೆ ಭೇಟಿ ನೀಡಿ, ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡುತ್ತಿದ್ದರು. ನೀರಿನ ಮೂಲದಿಂದ ಮನೆಗೆ ತಲುಪುವ ತನಕ ನೀರಿನ ಸಂಗ್ರಹ ಮತ್ತು ವಿತರಣೆಯಲ್ಲಿ...
ಪತ್ರಕರ್ತರ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ: ಆಮಂತ್ರಣ ಪತ್ರಿಕೆ ಬಿಡುಗಡೆ
ಧರ್ಮಸ್ಥಳ: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ವತಿಯಿಂದ ಅಡ್ಯಾರ್ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಜ.5 ರಿಂದ ನಡೆಯಲಿರುವ ಕ್ಯಾ.ಪ್ರಾಂಜಲ್ ಗೌರವಾರ್ಥ 'ಕೆಯುಡಬ್ಲ್ಯುಜೆ ಬ್ರ್ಯಾಂಡ್ ಮಂಗಳೂರು ರೋಹನ್ ಕಪ್ ಕ್ರಿಕೆಟ್' ಪಂದ್ಯಾವಳಿಯ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ,' ರಾಜ್ಯ ಸಭಾ ಸದಸ್ಯ,...
ನದಿಮುಖಜ ಭೂಮಿ ಕೃಷಿ ಬಳಕೆಗೆ ರಾಜೇಶ್ ನಾಯಕ್ ಸಲಹೆ
ಮಂಗಳೂರು:ದ.ಕ. ಜಿಲ್ಲೆಯಾದ್ಯಂತ ನದಿಗಳ ಸುತ್ತಮುತ್ತಲಿನ ಭೂಮಿಯಲ್ಲಿ ಮಳೆಗಾಲವನ್ನು ಹೊರತುಪಡಿಸಿ ಇತರ ಅವಧಿಯಲ್ಲಿ ಕೃಷಿಗೆ ಬಳಸಿಕೊಳ್ಳುವ ಮೂಲಕ ಅಂತರ್ಜಲವನ್ನು ಕಾಯ್ದುಕೊಳ್ಳುವ ಜತೆಗೆ ವಿವಿಧ ಕೃಷಿ ಉತ್ಪನ್ನಗಳನ್ನೂ ಬೆಳೆಸಲು ಸಾಧ್ಯ ಎಂದು ಬಂಟ್ವಾಳ ಶಾಸಕ ಹಾಗೂ ಪ್ರಗತಿಪರ ಕೃಷಿಕರಾದ ರಾಜೇಶ್ ನಾಯಕ್ ಸಲಹೆ ನೀಡಿದ್ದಾರೆ.
ಸೋಮವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿ ಪತ್ರಕರ್ತರ ಜತೆಗಿನ ಸಂವಾದದ ವೇಳೆ...
ಖೋಟಾ ನೋಟು ಚಲಾವಣೆ : ಆರೋಪಿಯ ಬ೦ಧನ
ಮಂಗಳೂರು: ನಗರದ ಕಂಕನಾಡಿ ಬಳಿಯಲ್ಲಿ ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಪ್ರಯತ್ನಿಸುತ್ತಿದ್ದ ಒವ೯ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬ೦ಧಿಸಿದ್ದಾರೆ. ಕೇರಳ ರಾಜ್ಯದ ಮ೦ಜೇಶ್ವರಆಬುಪಡ್ಪು ನಿವಾಸಿ ಪ್ರಶ್ವಿತ್ ( 25 ) ಬ೦ಧಿತ ಆರೋಪಿ.ರವಿವಾರ ಮಂಗಳೂರು ನಗರದ ಕಂಕನಾಡಿ ಬಳಿಯಲ್ಲಿ ಒಬ್ಬನು ಖೋಟಾ ನೋಟುಗಳನ್ನು ವಶದಲ್ಲಿರಿಸಿಕೊಂಡು ಚಲಾವಣೆ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬುದಾಗಿ ಬಂದ ಖಚಿತ...
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓಪನ್ ಆಕ್ಸೆಸ್ ಫ್ಯೂಯಲ್ ಫಾರ್ಮ್ ಕಾರ್ಯಾರಂಭ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓಪನ್ ಆಕ್ಸೆಸ್ ಫ್ಯೂಯಲ್ ಫಾರ್ಮ್ಮತ್ತು ವಿಮಾನ ಇಂಧನ ತುಂಬುವ ಸೌಲಭ್ಯವನ್ನು ಡಿಸೆಂಬರ್ 16ರಂದು ಆರಂಭಿಸಲಾಯಿತು. ಈ ಸೌಲಭ್ಯವು ವಿಮಾನ ನಿಲ್ದಾಣವುರಚಿಸಿದ ಹೊಸ ಗ್ರೀನ್ಫೀಲ್ಡ್ ಇಂಧನ ಸಂಗ್ರಹಣೆಯನ್ನು ಒಳಗೊಂಡಿದೆ, ಜೊತೆಗೆ ವಿಮಾನ ನಿಲ್ದಾಣದಲ್ಲಿ ತೈಲ ಮಾರುಕಟ್ಟೆ ಕಂಪನಿಯ(ಒಎಂಸಿ) ಅಸ್ತಿತ್ವದಲ್ಲಿರುವ ಬ್ರೌನ್ಫೀಲ್ಡ್ ಆಸ್ತಿಯನ್ನು ಒಳಗೊಂಡಿದೆ. ಬಜ್ಪೆಯ ಹಳೆಯ ಟರ್ಮಿನಲ್ ಕಟ್ಟಡದ...
ಲ್ಯಾಂಡ್ ಟ್ರೇಡ್ಸ್ ಪ್ರಾಪರ್ಟಿ ಎಕ್ಸ್‌ಪೋ ಆರಂಭ ಗ್ರಾಹಕರಿಗೆ ಮಾಹಿತಿ ; ಗೃಹ ಖರೀದಿ ಸೌಲಭ್ಯ
ಮಂಗಳೂರು: ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆಂಡ್ ಡೆವೆಲಪರ್ಸ್ ಸಂಸ್ಥೆಯ ಸರ್ವಯೋಜನೆಗಳ ಮಾಹಿತಿಗಳು ಮತ್ತು ಗೃಹ ಸಾಲ ಕುರಿತಾದ ವಿವರಗಳನ್ನು ಹೊಂದಿರುವ ಲ್ಯಾಂಡ್ ಟ್ರೇಡ್ಸ್ ಪ್ರಾಪರ್ಟಿಎಕ್ಸ್‌ಪೋ ಪ್ರದರ್ಶನವು ಬಲ್ಮಠದ ಮೈಲ್‌ಸ್ಟೋನ್-25 ಬಿಲ್ಡಿಂಗ್‌ನ5 ಮಹಡಿಯಲ್ಲಿ ಡಿಸೆಂಬರ್ 17ರಿಂದ 20ರವರೆಗೆ ನಡೆಯಲಿದೆ.ಮಂಗಳೂರು ಮಹಾನಗರದ ಜನತೆಯ ಅತ್ಯಾಧುನಿಕಸೌಲಭ್ಯಗಳು ಹೊಂದಿರುವ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆಂಡ್ಡೆವೆಲಪರ್ಸ್ ಯೋಜನೆಗಳ ಪೂರ್ಣ ವಿವರ ಇಲ್ಲಿಪಡೆಯಬಹುದಾಗಿದೆ....
“ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ”ಚಾಲನೆ
ಮ೦ಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಲವು ಮಹತ್ವಕಾಂಕ್ಷೆ ಯೋಜನೆಗಳು ಎಲ್ಲೆಡೆ ತಲುಪಬೇಕು ಎಂಬ ಸದುದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸಲಿರುವ "ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ" ನಗರದ ಪುರಭವನದ ಬಳಿ ಭಾನುವಾರ ಮುಂಜಾನೆ ಶಾಸಕ ವೇದವ್ಯಾಸ್ ಕಾಮತ್ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ವಿಕಸಿತ ಭಾರತ ಸಂಕಲ್ಪ ಯಾತ್ರೆಯು...










