ಅಡಿಕೆ ಹೆಕ್ಕುವಾಗ ಹಳೆಯ ಅಡಿಕೆ ಮರ ಬಿದ್ದು ಮಹಿಳೆ ಸಾವು
ವಿಟ್ಲ: ತೋಟದಲ್ಲಿ ಅಡಿಕೆ ಹೆಕ್ಕುವಾಗ ಹಳೆಯ ಅಡಿಕೆ ಮರ ಮುರಿದು ತಲೆಗೆ ಬಿದ್ದು ಮಹಿಳೆ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕಟ್ಟತ್ತಿಲ್ ಕೋಡಿ ಎಂಬಲ್ಲಿ ಬುಧವಾರ ಸ೦ಭವಿಸಿದೆ.ಗುಲಾಬಿ (48) ಮೃತಪಟ್ಟ ಮಹಿಳೆ .ಬುಧವಾರ ಬೆಳಿಗ್ಗೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕಟ್ಟತ್ತಿಲ್ ಕೋಡಿ ಎಂಬಲ್ಲಿ ಪುತ್ತೂರು ಆರ್ಲಪದವು ಬೊಳ್ಳಿಂಬಳದ ಸೀತಾ ಅವರಿಗೆ...
ಸಿಸ್ಟರ್ ಹೆಲೆನ್ ಅವರಿಗೆ ಸನ್ಮಾನ
ಮ೦ಗಳೂರು: ಸ್ಪ೦ದನಾ ಟ್ರಸ್ಟಿನ ಆಡಳಿತಾಧಿಕಾರಿ ಸಿಸ್ಟರ್ ಹೆಲೆನ್ ರವರನ್ನು ಅವರ ಧಾರ್ಮಿಕ ಜೀವನದ ಸುವರ್ಣ ಮಹೋತ್ಸವದ ಪ್ರಯುಕ್ತ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರಸ್ತೆ ಅಗಲೀಕರಣ ಮತ್ತು ಚರಂಡಿ ಅಭಿವೃದ್ಧಿ: ಬಗೆಹರಿದ ಸಮಸ್ಯೆ
ಮ೦ಗಳೂರು: ನಗರದ ಶ್ರೀನಿವಾಸ್ ಹೋಟೆಲ್ ನಿಂದ ವಿಮಲೇಶ್ ಬಿಲ್ಡಿಂಗ್ ವರೆಗಿನ ರಸ್ತೆ ಅಗಲೀಕರಣ ಮತ್ತು ಚರಂಡಿ ಅಭಿವೃದ್ಧಿ ವಿಷಯದಲ್ಲಿ ಉಂಟಾಗಿದ್ದ ಅನೇಕ ವರ್ಷಗಳ ಸಮಸ್ಯೆ ಕೊನೆಗೂ ಬಗೆಹರಿದಿದ್ದು ಶಾಸಕ ವೇದವ್ಯಾಸ್ ಕಾಮತ್ ಅವರ ವಿಶೇಷ ಮುತುವರ್ಜಿ ಹಾಗೂ ನೇತೃತ್ವಕ್ಕೆ ಮನ್ನಣೆ ದೊರೆತಿದೆ.
ನಗರದ ಸೆಂಟ್ರಲ್ ವಾರ್ಡಿನ ಜಿ.ಎಚ್.ಎಸ್ ರಸ್ತೆಯ ಭಾಗದಲ್ಲಿರುವ ಆಶೀರ್ವಾದ್ ಬಿಲ್ಡಿಂಗ್ ಮಾಲೀಕರು ಈವರೆಗೆ...
ಸ್ವಂತ ಜಾಗ ಇರುವ ವಸತಿ ರಹಿತ ಬಡಕುಟುಂಬಗಳಿಗೆ ಮನೆ ನಿರ್ಮಿಸಲು ಸಹಾಯಧನ
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ಸ್ವಂತ ಜಾಗ ಹೊಂದಿರುವ ವಸತಿ ರಹಿತ ಅರ್ಹ ಮಹಿಳಾ ಫಲಾನುಭವಿಗಳಿಗೆ 700 ಚದರ ಅಡಿ ಮಿತಿಯೊಳಗಿರುವ ಮನೆ ನಿರ್ಮಿಸಿಕೊಳ್ಳಲು ಸಾಮಾನ್ಯವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಸತಿ ರಹಿತ ಬಡ ಕುಟುಂಬಗಳಿಗೆ 2021-22ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ ರೂ.1,20,000/- ಹಾಗೂ ಪರಿಶಿಷ್ಟ ಜಾತಿ...
ತಾಯಿ- ಶಿಶು ಮರಣ ಪ್ರಮಾಣ ತಗ್ಗಿಸಿ- ಜಿಲ್ಲಾಧಿಕಾರಿ ಸೂಚನೆ
ಮಂಗಳೂರು: ಜಿಲ್ಲೆಯಲ್ಲಿ ಪ್ರಸವ ಹಾಗೂ ನಂತರದಲ್ಲಿ ಆರೋಗ್ಯ ಏರುಪೇರಿನಿಂದ ತಾಯಿ ಮತ್ತು ಮಗು ಸಾವಿಗೀಡಾಗುವ ಪ್ರಮಾಣವನ್ನು ತಗ್ಗಿಸಲು ಆರೋಗ್ಯ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಬಳಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂಪಿ ಸೂಚಿಸಿದ್ದಾರೆ.ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ತಾಯಿ ಮತ್ತು ಶಿಶು ಮರಣ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು....
ಮುಲ್ಕಿ ಜಂಕ್ಷನ್ ಬಳಿ ಡಿವೈಡರ್ ಹಾರಿ ಸರ್ವಿಸ್ ರಸ್ತೆಗೆ ನುಗ್ಗಿದ ಲಾರಿ;ಆಟೋ ರಿಕ್ಷಾ, ಸ್ಕೂಟರ್ ಗೆ ಡಿಕ್ಕಿ
ಮುಲ್ಕಿ : ಮುಲ್ಕಿ ಜಂಕ್ಷನ್ ಬಳಿ ಲಾರಿಯೊ೦ದು ಡಿವೈಡರ್ ಹಾರಿ ಸರ್ವಿಸ್ ರಸ್ತೆಗೆ ನುಗ್ಗಿ ಆಟೋ ರಿಕ್ಷಾ, ಸ್ಕೂಟರ್ ಗೆ ಡಿಕ್ಕಿ ಹೊಡೆದ ಘಟನೆ ಗುರುವಾರ ಬೆಳಗ್ಗೆ ಸ೦ಭವಿಸಿದ್ದು ಸ್ಕೂಟರ್ ಸವಾರ ಸಂಗಪ್ಪ ಗ೦ಭೀರ ಗಾಯಗೊ೦ಡಿದ್ದಾರೆ.ಸಹಸವಾರೆ, ಅವರ ಮಗಳಾದ ಸವಿತಾ ಸೇರಿದ೦ತೆ ಮೂವರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿವೆ. ಅಪಘಾತದ ವೇಳೆ ಅ ಪ್ರದೇಶದಲ್ಲಿ ಹೆಚ್ಚಿನ...
ವಸತಿ ಶಾಲೆ ಹಾಗೂ ವಸತಿ ಕಾಲೇಜಿಗೆ ಜಿಲ್ಲಾಧಿಕಾರಿ ಭೇಟಿ
ಉಳ್ಳಾಲ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಬುಧವಾರ ಉಳ್ಳಾಲ ತಾ. ಅಸೈಗೋಳಿಯಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಹಾಗೂ ವಸತಿ ಕಾಲೇಜಿಗೆ ಭೇಟಿನೀಡಿ ಪರಿಶೀಲನೆ ನಡೆಸಿದರು.ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು ಕಲಿಕಾ ಗುಣಮಟ್ಟ ಪರಿಶೀಲಿಸಿದರು. ಹಾಸ್ಟೆಲ್, ಅಡುಗೆ ಕೋಣೆಯನ್ನು ಅವರು ತಪಾಸಣೆ ಮಾಡಿದರು.
ಸ್ಕೂಟರ್ ಗೆ ಬಸ್ ಡಿಕ್ಕಿ: ಸವಾರ ಸಾವು
ಬಂಟ್ವಾಳ: ಸ್ಕೂಟರ್ ಗೆ ಬಸ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪಲ್ಲಮಜಲು ಕ್ರಾಸ್ ಎಂಬಲ್ಲಿ, ಬುಧವಾರ ಸ೦ಜೆ ಸ೦ಭವಿಸಿದೆ.ನಾರಾಯಣ ಮೃತಪಟ್ಟವರು.ಬುಧವಾರ ಸಂಜೆ ಪಲ್ಲಮಜಲು ಕ್ರಾಸ್ ಎಂಬಲ್ಲಿ, ರಾಜ ಲಕ್ಷ್ಮಿ ಖಾಸಗಿ ಬಸ್ ನ ಚಾಲಕ ಮುನೀರ್ ರವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ತೀರಾ ಬಲ ಬದಿಗೆ...
ಮೇವು ಸಂಗ್ರಹಿಸಲು ಸೂಚನೆ
ಮಂಗಳೂರು: ಜಿಲ್ಲೆಯಲ್ಲಿ ಮತ್ತು ಮೂಡಬಿದ್ರೆ ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿರುತ್ತದೆ. ಜಿಲ್ಲೆಯಲ್ಲಿ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಮಳೆ ಆಗಿರುವುದರಿಂದ ಜಲಮೂಲಗಳ ಸಂಗ್ರಹಣೆ ಕುಸಿದಿದ್ದು, ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಅಭಾವವಾಗುವ ಹಾಗೂ ಒಣಮೇವಿನ ದರವು ಅಧಿಕಗೊಳ್ಳುವ ಸಾಧ್ಯತೆ ಇರುತ್ತದೆ.ಜಿಲ್ಲೆಯಲ್ಲಿ ಭತ್ತದ ಫಸಲು ಕಟಾವಣೆ ಆರಂಭವಾಗಿದ್ದು, ರೈತರು ತಮ್ಮ ಜಾನುವಾರುಗಳಿಗೆ ಮುಂದಿನ...
ಪತನದ ಅಂಚಿನಲ್ಲಿ ಖಾಸಗಿ ಬಸ್ಸು ಸೇವಾ ವ್ಯವಸ್ಥೆ:ದ.ಕ. ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ ಆತಂಕ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳು ಅತ್ಯುತ್ತಮ ಸೇವೆ ನೀಡುತ್ತಿದ್ದರೂ ಸರ್ಕಾರದ ಕೆಲವು ಧೋರಣೆಯಿಂದ ಬಸ್ ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಬಸ್ ಮಾಲೀಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸದಿದ್ದರೆ 110 ವರ್ಷಗಳ ಇತಿಹಾಸ ಹೊಂದಿರುವ ಖಾಸಗಿ ಬಸ್ಸು ಸೇವಾ ವ್ಯವಸ್ಥೆ ಪತನಗೊಳ್ಳಲಿದೆ ಎಂದು ದ.ಕ. ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ...




