ಡಾ. ರಾಜಕುಮಾರ್ ಜನ್ಮದಿನೋತ್ಸವ
ಮಂಗಳೂರು: ಕನ್ನಡ ಚಿತ್ರ ನಟ ಡಾ. ರಾಜ್‍ಕುಮಾರ್ ಅವರು ತಾನು ನಟಿಸಿದ ಚಲನಚಿತ್ರಗಳಲ್ಲಿ ಅಥವಾ ವೈಯಕ್ತಿಕ ಬದುಕಿನಲ್ಲಿ ಸಮಾಜಕ್ಕೆ ಕೆಡುಕನ್ನುಂಟು ಮಾಡುವ ಯಾವುದೇ ಅಂಶಗಳನ್ನು ತೋರಿಸದೆ, ತನ್ನ ಬದುಕನ್ನೇ ಆದರ್ಶವನ್ನಾಗಿ ತೋರಿಸಿದ್ದಾರೆ ಎಂದು ಕರ್ನಾಟಕ ಗೇರು ಅಭಿವೃಧ್ದಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ...
ಬಸ್ ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ನಿವಾ೯ಹಕ ವಶಕ್ಕೆ
ಮ೦ಗಳೂರು: ಮಹಿಳಾ ಪ್ರಯಾಣಿಕರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿವಾ೯ಹಕನ ವಿರುದ್ದ ಪ್ರಕರಣ ದಾಖಲಿಸಿಕೊ೦ಡಿರುವ ಕೊಣಾಜೆ ಪೊಲೀಸರು ಅರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಮಹಿಳಾ ಪ್ರಯಾಣಿಕರೊಬ್ಬರಿಗೆ ನಿವಾ೯ಹಕ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಬಾಗಲಕೋಟೆಯ ಮೂಲದ ಪ್ರದೀಪ್ ಕಾಶಪ್ಪ ನಾಯ್ಕರ್ (35) ಆರೋಪಿಯಾಗಿದ್ದಾನೆ.
ಏಪ್ರಿಲ್ 22 ರಂದು ಮುಡಿಪುವಿನಿಂದ...
ನಿವೃತ್ತ ಸರಕಾರಿ ನೌಕರರ ವೇತನ ನಷ್ಟದ ಬೇಡಿಕೆ: ನಿಯೋಗ ಸಿಎಂ ಭೇಟಿ
ಮಂಗಳೂರು: ಕರ್ನಾಟಕ ನಿವೃತ್ತ ಸರಕಾರಿ ನೌಕರರ ವೇದಿಕೆ ಕಳೆದ ಕೆಲವು ತಿಂಗಳುಗಳಿಂದ ತಮ್ಮ ಬೇಡಿಕೆಯ ಈಡೇರಿಸಲು ಹೋರಾಟ ನಡೆಸುತ್ತಿದ್ದು, ಇತ್ತೀಚೆಗೆ ಎಂಎಲ್‌ಸಿ ಐವನ್ ಡಿಸೋಜ ಅವರ ಜತೆಗೆ ವೇದಿಕೆಯ ಪದಾಧಿಕಾರಿಗಳು ಬೆಂಗಳೂರಿನ ಮುಖ್ಯಮಂತ್ರಿ ಅವರ ಗೃಹಕಚೇರಿ ಕಾವೇರಿ ಭವನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.7 ನೇ ವೇತನ ಆಯೋಗದಲ್ಲಿ ಜು.1,2022ರಿಂದ ಜು.31,2024ರ...
ದೇರಳಕಟ್ಟೆಯಲ್ಲಿ ‘ಬ್ಯಾರೀಸ್ ಟರ್ನಿಂಗ್ ಪಾಯಿಂಟ್’ ಮಾಲ್ ಎ. 26 ರಂದು ಲೋಕಾರ್ಪಣೆ
ಮ೦ಗಳೂರು : ಪ್ರತಿಷ್ಠಿತ ಬ್ಯಾರೀಸ್ ಗ್ರೂಪ್ ನ ಬಹು ನಿರೀಕ್ಷಿತ ನಗರ ಜೀವನ ಶೈಲಿಯ ವಾಣಿಜ್ಯ ಹಾಗು ವಸತಿ ಯೋಜನೆ ದೇರಳಕಟ್ಟೆಯ 'ಬ್ಯಾರೀಸ್ ಟರ್ನಿಂಗ್ ಪಾಯಿಂಟ್' ಎ.26 ರಂದು ಸಂಜೆ 4.30 ಗಂಟೆಗೆ ಉದ್ಘಾಟನೆಯಾಗಲಿದೆ ಎಂದು ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ರಿಟೈಲ್ ಹೆಡ್ ಕೆ.ನಂದ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ದೇರಳಕಟ್ಟೆ ಬ್ಯಾರೀಸ್ ಟರ್ನಿಂಗ್ ಪಾಯಿಂಟ್...
ಕಾಶ್ಮೀರ ಭಯೋತ್ಪಾದನಾ ದಾಳಿ: ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲು ಸೂಚನೆ
ಮಂಗಳೂರು,: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಲಾಮ್ ಇಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಎಪ್ರಿಲ್ 22 ರಂದು ದಾಳಿ ನಡೆಸಿದ್ದು, ದಾಳಿಯಲ್ಲಿ ಕೆಲವು ಪ್ರವಾಸಿಗರು ಮೃತರಾಗಿರುವ ಹಾಗೂ ಗಾಯಗೊಂಡಿರುವುದು ತಿಳಿದು ಬಂದಿರುತ್ತದೆ.ದಕ್ಷಿಣ ಕನ್ನಡ ಜಿಲ್ಲೆಯಿಂದ ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿ ಮೇಲ್ಕಂಡ ಘಟನೆಯಲ್ಲಿ ಸಿಲುಕಿಕೊಂಡಿದಲ್ಲಿ ಅಂತವರÀ ಮಾಹಿತಿಯನ್ನು ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ...
ವಿವಿ ವಿದ್ಯಾರ್ಥಿಗಳಿಗೆ ಸಿಪಿಆರ್ ಮತ್ತು ಪ್ರಥಮ ಚಿಕಿತ್ಸೆ ತರಬೇತಿ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಎಪ್ರಿಲ್ 22ರಂದು ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ ಸಂಸ್ಥೆಯಿಂದ ಸಿಪಿಆರ್ (ಕಾರ್ಡಿಯೊ ಪಲ್ಮನರಿ ರಿಸಸಿಟೇಶನ್) ಮತ್ತು ಪ್ರಥಮಚಿಕಿತ್ಸೆಯ ತರಬೇತಿಯನ್ನು ನೀಡಲಾಯಿತು.ಕೌಶಲ್ಯ ಸಬಲೀಕರಣದ ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ|ಪಿ. ಎಲ್ ಧರ್ಮ, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಜಯರಾಜ್ ಅಮೀನ್ ಉಪಸ್ಥಿತರಿದ್ದರು. ಕಣಚೂರುಆಸ್ಪತ್ರೆಯ...
ಸುಮುಖ ಪ್ರೊಡಕ್ಷನ್ ಎರಡನೇ ಸಿನಿಮಾ “ಕಜ್ಜ” ಕ್ಕೆ ಮುಹೂರ್ತ
ಮಂಗಳೂರು: ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿಬರಲಿರುವ ಎರಡನೇ ಸಿನಿಮಾ "ಕಜ್ಜ" ಇದರ ಮುಹೂರ್ತ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಜರುಗಿತು. ಸಿನಿಮಾಕ್ಕೆ ನಿರ್ಮಾಪಕ ವಿಶಾಂತ್ ಮಿನೆಜಸ್ ಕ್ಲಾಪ್ ಮಾಡಿದರು. ಸಿನಿಮಾಕ್ಕೆ ವಿಜಯಕುಮಾರ್ ಕೊಡಿಯಲ್ ಬೈಲ್, ಅರವಿಂದ ಬೋಳಾರ್ ಚಾಲನೆ ನೀಡಿದರು.ಬಳಿಕ ಮಾತಾಡಿದ ಫಾದರ್ ಮೆಲ್ವಿನ್ ಪಿಂಟೊ ಎಸ್ ಜೆ ಸುಮುಖ ಪ್ರೊಡಕ್ಷನ್ ಮೊದಲ ಸಿನಿಮಾಕ್ಕೆ ತುಳುನಾಡಿನ...
ಸೈಬರ್ ಅಪರಾಧಗಳ ತಡೆಗೆ ಪೋಲಿಸ್ ಸಹಾಯವಾಣಿ-1930, ವೆಬ್ ಬಾಟ್ ಉನ್ನತೀಕರಣ
ಮಂಗಳೂರು: ಪ್ರಸ್ತುತ ದೇಶದಲ್ಲಿ ಹೆಚ್ಚುತ್ತಿರುವ ಆನ್‍ಲೈನ್ ಹಣಕಾಸು ವಂಚನೆಗಳನ್ನು ತಡೆಯಲು ರಾಜ್ಯದಲ್ಲಿ ಸೈಬರ್ ಅಪರಾಧ ಸಹಾಯವಾಣಿ-1930 ಜೊತೆಗೆ ವೆಬ್ ಬಾಟ್ ಉನ್ನತೀಕರಣ ಮಾಡಲಾಗಿದೆ ಎಂದು ರಾಜ್ಯ ಪೊಲೀಸ್ ನಿದೇ೯ಶನಕರು ಮತ್ತು ಪೊಲೀಸ್ ಮಹಾ ನೀರಿಕ್ಷಕರಾದ ಅಲೋಕ್ ಮೋಹನ್ ತಿಳಿಸಿದರು.ಎಡಿಜಿಪಿ ಸಿಎಲ್&ಎಮ್ ಕಾರ್ನರ್ ಹೌಸ್ ಕಚೇರಿಯಲ್ಲಿ ಉನ್ನತೀಕರಿಸಲಾದ ಸೈಬರ್ ಅಪರಾಧ ಸಹಾಯವಾಣಿ-1930 ವೆಬ್ ಬಾಟ್ ಕಾರ್ಯಕ್ರಮವನ್ನು...
ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾ ಮಟ್ಟದ ಸಂವಾದ ಸಭೆ
ಮಂಗಳೂರು: ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾ ಮಟ್ಟದ ಸಂವಾದ ಸಭೆ ಆರ್ಥಿಕ ತಜ್ಞ ಪೆÇ್ರ.ಎಂ ಗೋವಿಂದರಾವ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ನಡೆಯಿತು.ಆರ್ಥಿಕ ತಜ್ಞ ಪ್ರೋ.ಎಂ ಗೋವಿಂದರಾವ್ ಮಾತನಾಡಿ, ರಾಜ್ಯದಲ್ಲಿ ಉತ್ತರ ಕರ್ನಾಟಕದ 59 ತಾಲೂಕುಗಳು ಹಾಗೂ ದಕ್ಷಿಣ ಕರ್ನಾಟಕದ ಹಿಂದುಳಿದ 55 ತಾಲೂಕುಗಳೆಂದು ಗುರುತಿಸಲಾಗಿದೆ. ಅಭಿವೃದ್ಧಿಗೆ ಅನುದಾನದ...
ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ
ಮ೦ಗಳೂರು: ಬೆಳ್ತಂಗಡಿ ತಾಲ್ಲೂಕಿನ ಗುರುವಾಯನಕೆರೆಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಮುಖಂಡರಾದ ರಕ್ಷಿತ್ ಶಿವರಾಂ ಸೇರಿದಂತೆ ಇತರರು ಭಾಗವಹಿಸಿದ್ದರು.






