ಸೂರಿಂಜೆಯಲ್ಲಿ ಸ್ನೇಹ ಸಮ್ಮಿಲನ ಕೂಟ
ಸುರತ್ಕಲ್: ಸುರತ್ಕಲ್ ಸ್ಪೋಟ್ಸ್೯ ಮತ್ತು ಕಲ್ಚರಲ್ ಕ್ಲಬ್ (ರಿ) ಇದರ ಆಶ್ರಯದಲ್ಲಿ ಸುರತ್ಕಲ್ ನಲ್ಲಿ ನಡೆದ ಲೆಜಂಡ್ಸ್ ಕ್ರಿಕೆಟ್ ಲೀಗ್ ಸೀಸನ್ 4 ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟದ ಯಶಸ್ಸಿನ ಹಿನ್ನಲೆಯಲ್ಲಿ ಸೂರಿಂಜೆಯಲ್ಲಿ ಮನೋಹರ್ ಶೆಟ್ಟಿಯವರ ಮನೆಯಲ್ಲಿ ಸ್ನೇಹ ಸಮ್ಮಿಲನ ಕೂಟ ಆಯೋಜಿಸಲಾಗಿತ್ತು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸ್ಥೆಯ ಮಹಾಪೋಷಕ ವಿರಾಜಪೇಟೆ ಡಿವೈಎಸ್ ಪಿ ಮಹೇಶ್...
ಬೆಂಗ್ರೆ ಫೆರ್ರಿ ಜೆಟ್ಟಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 11ನೇ ಪಣಂಬೂರು ವಾರ್ಡಿನ ತಣ್ಣೀರುಬಾವಿ ತೋಟ ಬೆಂಗ್ರೆ ಮುಖ್ಯ ರಸ್ತೆಯಿಂದ ಬೆಂಗ್ರೆ ಫೆರ್ರಿ ಜೆಟ್ಟಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು, ಇಲ್ಲಿನ ರಸ್ತೆ ಅಭಿವೃದ್ಧಿಯ ಅಗತ್ಯತೆ ಬಗ್ಗೆ ಸ್ಥಳೀಯರ ಬೇಡಿಕೆಯ ಅನುಸಾರವಾಗಿ ನಿಕಟ ಪೂರ್ವ ಪಾಲಿಕೆ ಸದಸ್ಯೆ...
ಜಾತಿಗಣತಿ ವಿಚಾರದಲ್ಲಿ ಎಲ್ಲರಿಗೂ ನ್ಯಾಯ ಒದಗಿಸಲಾಗುವುದು: ಡಿಸಿಎಂ ಡಿ ಕೆ ಶಿವಕುಮಾರ್
ಮಂಗಳೂರು: "ತುಳಿತಕ್ಕೆ ಒಳಗಾದವರಿಗೆ ಶಕ್ತಿ ತುಂಬಿ, ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು, ಈ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರ ಇರುವುದಿಲ್ಲ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನ ಪಡೆದ ನಂತರ ಶಿವಕುಮಾರ್ ಅವರು ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಜಾತಿಗಣತಿ ಗೆ ಕೆಲವು ಸಮುದಾಯಗಳ ವಿರೋಧ ವ್ಯಕ್ತವಾಗುತ್ತಿದ್ದು, ರಾಹುಲ್ ಗಾಂಧಿ ಅವರ ಪತ್ರದಲ್ಲಿ...
‘ರೋಹನ್ ಇಥೋಸ್’ ಭೂಮಿ ಪೂಜೆ
ಮಂಗಳೂರು: ಕರಾವಳಿಯ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ರೋಹನ್ ಕಾರ್ಪೊರೇಶನ್ ಸಂಸ್ಥೆಯ ನೂತನ ಯೋಜನೆ ‘ರೋಹನ್ ಇಥೋಸ್’ ಇದರ ಭೂಮಿ ಪೂಜೆಯು ಶನಿವಾರ ನಗರದ ಫಾ.ಮುಲ್ಲರ್ ಆಸ್ಪತ್ರೆ ಬಳಿ ನೆರವೇರಿತು.ಫಾ.ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ನಿರ್ದೇಶಕ ವಂ|ಫಾ|ರಿಚಾರ್ಡ್ ಕುವೆಲ್ಲೊ ಅವರು ಆಶೀರ್ವದಿಸಿ, ಯೋಜನೆಯು ಯಶಸ್ವಿಯಾಗಿ ಪೂರ್ಣಗೊಂಡು ಜನರ ಬಳಕೆಗೆ ಶೀಘ್ರ ಸಿಗುವಂತಾಗಲಿ ಎಂದರು.ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ...
ಸ್ವ-ಸಹಾಯ ಗುಂಪು ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ
ಮಂಗಳೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸ್ವ-ಸಹಾಯ ಗುಂಪುಗಳು ಉತ್ಪಾದಿಸುವ ಉತ್ಪನ್ನಗಳ ಜಿಲ್ಲಾ ಮಟ್ಟದ ಪ್ರದರ್ಶನ ಹಾಗೂ ಮಾರಾಟ ಮೇಳ ಮಂಗಳೂರು ತಾಲೂಕು ಪಂಚಾಯತ್ ಆವರಣದಲ್ಲಿ ಶನಿವಾರ ನಡೆಯಿತು.ದ.ಕ.ಜಿ.ಪಂ.ನ ಯೋಜನಾ ನಿರ್ದೇಶಕ ಕೆ.ಇ.ಜಯರಾಂ ಕಾರ್ಯಕ್ರಮವನ್ನು ಉದ್ಘಾಟಿಸಿದರು....
ಉಪಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ
ಮಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಏಪ್ರಿಲ್ 19 ಮತ್ತು 20 ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಏಪ್ರಿಲ್ 19 - ಧರ್ಮಸ್ಥಳದಲ್ಲಿ ವಾಸ್ತವ್ಯ, ಏಪ್ರಿಲ್ 20 ರಂದು ಬೆಳಿಗ್ಗೆ 11 - ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯ ನೂತನ ಸಭಾಭವನ ಉದ್ಘಾಟನಾ ಕಾರ್ಯಕ್ರಮ, ಮಧ್ಯಾಹ್ನ 12 - ಗುರುವಾಯನಕೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ...
ಅರಂತಬೆಟ್ಟು ಗುತ್ತು: ಗಡಿಪ್ರಧಾನ ಕಾರ್ಯಕ್ರಮ, ಆಮಂತ್ರಣ ಪತ್ರಿಕೆ ಬಿಡುಗಡೆ
ಮ೦ಗಳೂರು: ಅರಂತಬೆಟ್ಟು ಗುತ್ತು ಶ್ರೀ ನಾಗದೇವರು ಶ್ರೀ ಉಳ್ಳಾಯ ಹಾಗೂ ಪರಿವಾರ ದೈವಗಳ ದೈವಸ್ಥಾನ ಇಲ್ಲಿ ಅರಂತಬೆಟ್ಟು ಗುತ್ತು ಮಾರ್ಲ ಮನೆತನದ ಗಡಿ ಸ್ವೀಕಾರ ಸಮಾರಂಭ ಮೇ 4 ರಂದು ಭಾನುವಾರ ಬೆಳಿಗ್ಗೆ 8.20 ಕ್ಕೆ ಅರಂತಬೆಟ್ಟುಗುತ್ತುವಿನಲ್ಲಿ ನಡೆಯಲಿದೆ.
ಸುರತ್ಕಲ್ ಮಧುಸೂದನ ಮಯ್ಯರವರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸುರತ್ಕಲ್ ಕೊಡಿಪಾಡಿ ಬಾಳಿಕೆ ಹಾಗೂ ಪಡ್ರೆ ಚಾವಡಿಯ...
ಗಣೇಶಪುರ ಬ್ರಹ್ಮಕಲಶ : ಹೊರೆಕಾಣಿಕೆ ಶೋಭಾಯಾತ್ರೆ, ಉಗ್ರಾಣ ಮುಹೂರ್ತ
ಮ೦ಗಳೂರು: ‘ಭಾರತದ ಭವ್ಯತೆ, ದಿವ್ಯತೆ ಇರುವುದು ಆಧ್ಯಾತ್ಮಿಕತೆಯಲ್ಲಿ. ಎಲ್ಲ ನಾಯಕರಿಗೆ ಆದರ್ಶಪ್ರಾಯ ಶ್ರೀ ಮಹಾಗಣಪತಿ. ಒಗ್ಗಟ್ಟು ಎಂದರೆ ಅದು ಗಣಪತಿಯ ಸೇವೆ. ಎಲ್ಲರೂ ಒಗ್ಗಟ್ಟಾಗಿ ಸೇರಿ ಸೇವೆಯನ್ನು ಮಾಡುತ್ತಿದ್ದೀರಿ. ಶ್ರೀ ಕ್ಷೇತ್ರ ಗಣೇಶಪುರದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಮಹಾಗಣಪತಿಯ ದಯದಿಂದ ಯಶಸ್ವಿಯಾಗಲಿ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಆಶೀರ್ವಚನ...
ಸ್ಪಂದನಾ ಫ್ರೆಂಡ್ಸ್ ಸರ್ಕಲ್ ಕುಳಾಯಿ ವಾರ್ಷಿಕೋತ್ಸವ
ಮಂಗಳೂರು : ಸ್ಪಂದನಾ ಫ್ರೆಂಡ್ಸ್ ಸರ್ಕಲ್ ಕುಳಾಯಿ ಇದರ 31ನೇ ವಾರ್ಷಿಕೋತ್ಸವ ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಎಂಆರ್‌ಪಿಎಲ್ ನ ಚೀಫ್ ಜನರಲ್ ಮೆನೇಜರ್ ಮನೋಜ್ ಕುಮಾರ್ ಮಾತನಾಡಿ ‘ ಸಮಾಜಮುಖಿ ಕಾರ್ಯಗಳ ಮೂಲಕ ಜನಸೇವೆ ಮಾಡುತ್ತಿರುವ ಸ್ಪಂದನಾ ಫ್ರೆಂಡ್ಸ್ ಸರ್ಕಲ್ ಮಾದರಿ ಸಂಸ್ಥೆಯಾಗಿದೆ. ಇಂತಹ ಸಂಘಟನೆಗಳಿಗೆ ಪ್ರೋತ್ಸಾಹ ನೀಡುವುದು...
ಬೆಂಗಳೂರು-ಮುರುಡೇಶ್ವರ ಮತ್ತು ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್‌ಗೆ ಆಧುನಿಕ ಎಲ್‌ಎಚ್‌ಬಿ ಬೋಗಿಗಳು
ಮ೦ಗಳೂರು: ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರು-ಮುರುಡೇಶ್ವರ ಮತ್ತು ಬೆಂಗಳೂರು- ಕಣ್ಣೂರು ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲುಗಳ ಸಾಂಪ್ರದಾಯಿಕ ಬೋಗಿಗಳನ್ನು ಅತ್ಯಾಧುನಿಕ ಎಲ್‌ಎಚ್‌ಬಿ (ಲಿಂಕ್ಹಾಫ್‌ಮನ್ ಬುಶ್) ಬೋಗಿಗಳೊಂದಿಗೆ ಬದಲಾಯಿಸಲು ನೈಋತ್ಯ ರೈಲ್ವೆ ಸಜ್ಜಾಗಿದೆ.
ಪರಿಷ್ಕೃತ ಎಲ್‌ಎಚ್‌ಬಿ ಬೋಗಿಗಳೊಂದಿಗೆಕಾರ್ಯನಿರ್ವಹಿಸಲಿರುವ ರೈಲು ಸಂಖ್ಯೆ 16585 ಎಸ್ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು ಮೇ 5 ರಿಂದ ಎಲ್‌ಎಚ್‌ಬಿ...








