ಮ೦ಗಳೂರು: ಪಿ.ಎ. ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವವನ್ನು ಪಿ.ಎ.ಇ.ಟಿ. (PAET) ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಅಬ್ದುಲ್ಲಾ
ಇಬ್ರಾಹಿಂ ಅವರ ಆಶ್ರಯದಲ್ಲಿ ಏಪ್ರಿಲ್ 16 ರಂದು PACE ಸಭಾಂಗಣದಲ್ಲಿ ಜರಗಿತು.
ಮುಖ್ಯ ಅತಿಥಿಯಾದ ದೈಜಿವರ್ಲ್ಡ್ ಮೀಡಿಯಾ, ಮಂಗಳೂರುಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಾಲ್ಟರ್ ನಂದಳಿಕೆ ಅವರು ವಿದ್ಯಾರ್ಥಿಗಳಿಗೆ ಸಂವಹನ ಹಾಗೂ ಭಾವನಾತ್ಮಕಬುದ್ಧಿಮತ್ತೆಯಂತಹ ಸಾಫ್ಟ್ ಸ್ಕಿಲ್ಸ್‌ಗಳ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ದೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಮಾರ್ಕೆಟಿಂಗ್ ಮ್ಯಾನೇಜರ್ ಪ್ರವೀಣ್ ತೌರೋ, PACE
ಪ್ರಾಂಶುಪಾಲರಾದ ಡಾ. ರಮೀಸ್ ಎಂ.ಕೆ., PACP ಪ್ರಾಂಶುಪಾಲರಾದ ಡಾ. ಸಲೀಮುಲ್ಲಾ ಖಾನ್, PAPT ಪ್ರಾಂಶುಪಾಲರಾದ
ಪ್ರೊ. ಇಸ್ಮಾಯಿಲ್ ಖಾನ್, PAIP ಪ್ರಾಂಶುಪಾಲರಾದ ಡಾ. ಅಫೀಫಾ ಸಲೀಂ, ಕ್ಯಾಂಪಸ್ AGM ಶರ್ಫುದ್ದೀನ್ ಪಿ.ಕೆ.
ವಿದ್ಯಾರ್ಥಿ ವ್ಯವಹಾರಗಳ ಮುಖ್ಯಸ್ಥ ಹಾಗೂ CMSR ನಿರ್ದೇಶಕರಾದ ಡಾ. ಸಯ್ಯಾದ್ ಅಮೀನ್ ಅಹಮ್ಮದ್, ಖರೀದಿ
ವ್ಯವಸ್ಥಾಪಕ ಹ್ಯಾರಿಸ್ ಟಿ.ಡಿ., ಪೇಸ್ ಮಾಜಿ ಪ್ರಾಂಶುಪಾಲರಾದ ಡಾ. ಅಬ್ದುಲ್ ಶರೀಫ್, ಉಪಪ್ರಾಂಶುಪಾಲೆ ಹಾಗೂ
ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಶರ್ಮಿಳಾ ಕುಮಾರಿ, ಅಬ್ಬಾಸ್ ಉಚ್ಚಿಲ್ ಉಪಸ್ಥಿತರಿದ್ದರು.
ನಿರ್ವಹಣಾ ವಿಭಾಗದ ಮುಖ್ಯಸ್ಥೆ ದೀಪ್ತಿ ಉದ್ಯಾವರ್ ಸ್ವಾಗತ ಭಾಷಣ ಮಾಡಿದರು. ಪಿ.ಎ. ಪ್ರಥಮ ದರ್ಜೆ ಕಾಲೇಜಿನ .
ಪ್ರಾಂಶುಪಾಲರಾದ ಡಾ.ಸರ್ಫ್ರಾಜ್ ಜೆ ಹಾಸಿಂ ಅವರು 2025–2026 ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಬಿ.ಎಸ್‌ಸಿ ಆಹಾರ ಪೌಷ್ಠಿಕತೆ ಮತ್ತು ಡಯಟೆಟಿಕ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ
ಆಯಿಶತ್ ಲುಥ್ಫಾ ನಜಾ ಕೆ ಅವರನ್ನು ಗೌರವಿಸಲಾಯಿತು. ಸಿಲ್ವಿಯೋರಾ ಸ್ಪರ್ಧೆಗಳ ವಿಜೇತರು, ಸ್ಟೂಡೆಂಟ್ ಆಫ್ ದಿ
ಮಂಥ್, ಸ್ಪೀಕರ್ ಆಫ್ ದಿ ಮಂಥ್, ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳು, ಸಾಂಸ್ಕೃತಿಕ,
ಕ್ರೀಡಾ ಹಾಗೂ ಇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 2025–26 ಸಾಲಿನ
ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿಗಳಾಗಿ ಅಫ್ತಾಬ್ ಅಹಮದ್ ಅಬ್ಬಾಸ್ (3ನೇ ಬಿಬಿಎ), ಫಾತಿಮತ್
ಜೋಹಾರಾ (3ನೇ ಬಿ.ಕಾಂ), ಸಫ್ವಾ ನಿಸಾರ್ (3ನೇ ಬಿಸಿಎ) ಮತ್ತು ಹಿಯಾ ಆಶಿಕ್ (3ನೇ ಬಿ.ಎಸ್‌ಸಿ FND)
ಅವರನ್ನು ಆಯ್ಕೆ ಮಾಡಲಾಯಿತು.


