23.3 C
Karnataka
Friday, June 12, 2026

ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ವಿವಿಧ ಭಾಗಗಳಿಗೆ ಬಸ್ ಸೇವೆ

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ, ಮಂಗಳೂರು-3ನೇ ಘಟಕದಿಂದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್) ನಿಂದ ಕಟೀಲು/ಬೊಕ್ಕಪಟ್ಣ/ ಸ್ಟೇಟ್‍ಬ್ಯಾಂಕ್/ಕೋಡಿಕಲ್ ಮಾರ್ಗವಾಗಿ ನಗರ ಸಾರಿಗೆಯನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.
ವೇಳಾ ವಿವರ:
ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್) ನಿಂದ ಕಟೀಲಿಗೆ ಬೆಳಿಗ್ಗೆ 6:55, 10:45, ವಯಾ :ಕೂಳೂರು-ಸುರತ್ಕಲ್-ಚೊಕ್ಕಬೆಟ್ಟು-ಕಾಟಿಪಳ್ಳ-ಶಿಬರೂರು-ಬಲವಿನಗುಡ್ಡೆ.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್) ನಿಂದ ಬೊಕ್ಕಪಟ್ಣ: ಬೆಳಿಗ್ಗೆ 8:45, 10:15, 11:45, ಮಧ್ಯಾಹ್ನ 1:30, 3:20, 5:00, 6:30, ವಯಾ : ಕಂಕನಾಡಿ-ಜ್ಯೋತಿ-ಪಿವಿಎಸ್-ಲಾಲ್‍ಬಾಗ್-ಸುಲ್ತಾನ್‍ಬತ್ತೇರಿ-ಅಮೃತವಿದ್ಯಾಲಯ-ಬೋಳಾರ್.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್)ದಿಂದ ಸ್ಟೇಟ್‍ಬ್ಯಾಂಕ್‍ಗೆ 3, ಸಂಜೆ 5, ಮಧ್ಯಾಹ್ನ 1, 1:25, 2.40, ವಯಾ :ಪಡೀಲ್-ಮರೋಳಿ-ನಂತೂರು-ಕದ್ರಿ-ಜ್ಯೋತಿ
ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್) ನಿಂದ ಕೋಡಿಕಲ್ ಬೆಳಿಗ್ಗೆ 8, 9, 9:50, 11, 12:15, 2:30, 3:30, ವಯಾ: ಪಡೀಲ್-ಮರೋಳಿ-ಕಂಕನಾಡಿ ಮಾರ್ಕೆಟ್-ಮಲ್ಲಿಕಟ್ಟೆ-ಕೆಪಿಟಿ-ಲಾಲ್‍ಬಾಗ್-ಉರ್ವಾಸ್ಟೋರ್-ಕೊಟ್ಟಾರ.
ಸಾರ್ವಜನಿಕ ಪ್ರಯಾಣಿಕರು ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕೆ.ಎಸ್.ಆರ್.ಟಿ.ಸಿ ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles