22.9 C
Karnataka
Saturday, June 13, 2026

ದ.ಕ. ಜಿಲ್ಲೆ: ಸಿಆರ್‌ಐಎಫ್ ಯೋಜನೆಯಡಿ ಒಟ್ಟು 57ಕೋ. ರೂ. ಅನುದಾನ ಬಿಡುಗಡೆ: ಸಂಸದ ಕ್ಯಾ. ಚೌಟ

ಮಂಗಳೂರು: ಕೇಂದ್ರ ಸರ್ಕಾರವು, ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಂಪರ್ಕ ರಸ್ತೆಗಳ ಸುಧಾರಣೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು , ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಅಡಿಯಲ್ಲಿ ಒಟ್ಟು 57 ಕೋ. ರೂ. ವೆಚ್ಚದ ಅಭಿವೃದ್ಧಿ ಯೋಜನೆಗೆ ಮಂಜೂರು ಮಾಡಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಈ ಯೋಜನೆಯಡಿ ಜಿಲ್ಲೆಯಾದ್ಯಂತ ಒಟ್ಟು 14 ಪ್ರಮುಖ ಕಾಮಗಾರಿ ಮೂಲಕ ವಿವಿಧೆಡೆ ಒಟ್ಟು 82.94 ಕಿ. ಮೀ. ಉದ್ದದ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಜಿಲ್ಲೆಯ ಪ್ರಮುಖ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ರಸ್ತೆ ಈ ಅನುದಾನದ ಮೂಲಕ ಮೇಲ್ದರ್ಜೆಗೇರಿಸಲಾಗುವುದು. ಮಂಗಳೂರು, ಉಳ್ಳಾಲ, ಮೂಡುಬಿದ್ರೆ, ಪುತ್ತೂರು ಬಂಟ್ವಾಳ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿಯೂ ನಿಗದಿತ ರಸ್ತೆಗಳ ಅಭಿವೃದ್ದಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಂಸದರು ಮಾಹಿತಿ ನೀಡಿದ್ದಾರೆ.

ರಸ್ತೆಗಳ ಅಭಿವೃದ್ದಿ ಕಾಮಗಾರಿ
ಉಳ್ಳಾಲ ತಾಲೂಕಿನ ಕಟಪಾಡಿ-ಅಬ್ಬಕ್ಕ ಸರ್ಕಲ್ ರಸ್ತೆಯ ಚಂಬುಗುಡ್ಡೆಯಿಂದ ಮಚಲಿ ಹೋಟೆಲ್ ಹಾಗೂ ಇನ್ಫೋಸಿಸ್ ಸಮೀಪದ ರಸ್ತೆ ಅಭಿವೃದ್ಧಿ ಒಟ್ಟು ರೂ. 4 ಕೋಟಿ. (2.66 ಕಿ.ಮೀ ಮತ್ತು 1 ಕಿ.ಮೀ) ಹಾಗೂ ಸಜಿಪನಾಡು-ಬೋಳ್ಯಾರ್ ರಸ್ತೆಯ ಆಯ್ದ ಭಾಗಗಳ ಸುಧಾರಣೆ – ರೂ. 2.00 ಕೋಟಿ.(2.88 ಕಿ.ಮೀ)

ಮೂಡುಬಿದಿರೆಯ ಹೊಸಂಗಡಿ ಪುಚ್ಚಮೊಗರು ಸೇತುವೆಯಿಂದ ಬೆಳ್ತಂಗಡಿ-ಬಂಟ್ವಾಳ ಕ್ರಾಸ್ ವರೆಗಿನ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ದಿ (8.90 ಕಿ.ಮೀ) – ರೂ. 6 ಕೋಟಿ.ಸುರತ್ಕಲ್-ಕಬಕ ರಸ್ತೆಯ ಬಜಪೆಯಿಂದ ಕೈಕಂಬದವರೆಗೆ ಹಾಗೂ ಪೊಳಲಿ ದ್ವಾರದಿಂದ ಅಡ್ಡೂರು ಸೇತುವೆಯವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ದಿ (10.50 ಕಿ.ಮೀ) – ರೂ. 6 ಕೋಟಿ.ಪುಂಜಾಲಕಟ್ಟೆಯ ಮೂರ್ಜೆ ಕುದ್ಕೋಲಿ ರಸ್ತೆಯ ಪಾಂಗಲ್ಪಾಡಿಯಿಂದ ಕುದ್ಕೋಲಿ ವರೆಗಿನ ರಾಜ್ಯ ಹೆದ್ದಾರಿ ಅಬಿವೃದ್ದಿ (10.07 ಕಿ.ಮೀ) ರೂ. 6ಕೋಟಿ.ಉಪ್ಪಿನಂಗಡಿ-ಪೆರಿಯಡ್ಕ-ಕೊಯ್ಲಾ ಸೆಕ್ಷನ್ (ರೂ. 2 ಕೋಟಿ -3 ಕಿ.ಮೀ), ಹಂತ್ಯಾರು-ಬೆಟ್ಟಂಪಾಡಿ ರಸ್ತೆ (ರೂ. 3 ಕೋಟಿ -4.50 ಕಿ.ಮೀ), ಮತ್ತು ಕೆಪುಲು-ಪಾದಿಲ್ ರಸ್ತೆ (ರೂ. 1 ಕೋಟಿ – 0.65 ಕಿ.ಮೀ) ಅಭಿವೃದ್ಧಿ..ಸುಬ್ರಹ್ಮಣ್ಯ-ಮಂಜೇಶ್ವರ ರಸ್ತೆಯ (ರಾಜ್ಯ ಹೆದ್ದಾರಿ) ಆಯ್ದ ಭಾಗಗಳ ಅಭಿವೃದ್ದಿ (10.10 ಕಿ.ಮೀ) – ರೂ. 6.00 ಕೋಟಿ.ವೇಣೂರು-ಅಂಡಿಂಜೆ-ನಾರಾವಿ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ (10.00 ಕಿ.ಮೀ) – ರೂ. 6.00 ಕೋಟಿ.

ರಸ್ತೆ ನವೀಕರಣ ಮತ್ತು ಅಗಲೀಕರಣ ಕಾಮಗಾರಿ
ಎಕ್ಸಲೆಂಟ್ ಕಾಲೇಜಿನಿಂದ ಮೂಡಬಿದ್ರೆ ಪೊಲೀಸ್ ಸ್ಟೇಷನ್ ರಸ್ತೆಯವರೆಗಿನ ಬೆಳ್ತಂಗಡಿ-ಮೂಡಬಿದಿರೆ-ಮುಲ್ಕಿ ರಾಜ್ಯ ಹೆದ್ದಾರಿ ನವೀಕರಣ (5.00 ಕಿ.ಮೀ) ರೂ. 5.00 ಕೋಟಿ.
ಸೋಮಂತಡ್ಕದಿಂದ ಹೆಡ್ಯವರೆಗಿನ (NH-275 ರಿಂದ SH-276 ಸಂಪರ್ಕಿಸುವ) ಹೆದ್ದಾರಿ ಅಭಿವೃದ್ಧಿ (5.50 ಕಿ.ಮೀ) – ರೂ. 5.00 ಕೋಟಿ.
ಬಂಟ್ವಾಳದ ಅನಂತಾಡಿ-ಮಂಗಿಲಪದವು-ಕೊಡಪದವು ಜಿಲ್ಲಾ ಮುಖ್ಯ ರಸ್ತೆಯ ಅಗಲೀಕರಣ ಮತ್ತು ಅಭಿವೃದ್ಧಿ (3.00 ಕಿ.ಮೀ) – ರೂ. 5.00 ಕೋಟಿ.

ಒಟ್ಟಾರೆ ಈ ಯೋಜನೆಯಡಿ ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಗಳ ಬಲವರ್ಧನೆ, ಸುಗಮ ಸಂಚಾರ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ಬೃಹತ್ ಅನುದಾನವನ್ನು ಮಂಜೂರು ಮಾಡಿದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಈ ಯೋಜನೆಗೆ ಅನುದಾನ ಮಂಜೂರು ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. ಈ ಪ್ರಮುಖ ರಸ್ತೆಗಳ ಸುಧಾರಣೆ ಕಾಮಗಾರಿ ಪೂರ್ಣಗೊಂಡ ಬಳಿಕ ಜಿಲ್ಲೆಯ ಆರ್ಥಿಕ, ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಸಂಸದ ಕ್ಯಾ.ಚೌಟ ವಿವರಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles