ಮಂಗಳೂರು: 2026-27ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಿಗೆ ಅಗತ್ಯವಿರುವ ಪದವಿ ಮಟ್ಟದ (Uಉ) ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂದರ್ಶನವು ಕೊಣಾಜೆ ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಸಿಂಡಿಕೇಟು ಸಭಾಂಗಣದಲ್ಲಿ ಜುಲೈ 7, 8 ಮತ್ತು 9 ರಂದು ನಡೆಯಲಿದೆ.
ವಿಷಯವಾರು ಸಂದರ್ಶನದ ವಿವರ:
ಜುಲೈ 7 ರಂದು ಇಂಗ್ಲಿಷ್- ಬೆಳಿಗ್ಗೆ 10:30 ರಿಂದ 11:30, ಕನ್ನಡ -11:30 ರಿಂದ 12:30, ಹಿಂದಿ- 12:30 ರಿಂದ 1:30, ಸಂಸ್ಕøತ-2:30 ರಿಂದ 2:40, ಇತಿಹಾಸ- 2:40 ರಿಂದ 3:30, ಅರ್ಥಶಾಸ್ತ್ರ -3:30 ರಿಂದ 4:30, ರಾಜ್ಯಶಾಸ್ತ್ರ-4:30 ರಿಂದ 5:30
ಜುಲೈ 8 ರಂದು ಜಿಯೋಗ್ರಫಿ- ಬೆಳಿಗ್ಗೆ 10:30 ರಿಂದ 11, ಪತ್ರಿಕೋದ್ಯಮ-11 ರಿಂದ 11:30 ದೈಹಿಕ ಶಿಕ್ಷಣ – 11:30 ರಿಂದ 12:30, ಫಿಸಿಕ್ಸ್- 12:30 ರಿಂದ 1, ಗಣಿತ- 1 ರಿಂದ 1:30, ಕೆಮಿಸ್ಟ್ರಿ-2:30 ರಿಂದ 3, ಮೈಕ್ರೊಬಯೋಲಜಿ- 3 ರಿಂದ 3:30, ಕಂಪ್ಯೂಟರ್ ಸೈನ್ಸ್/ ಬಿ.ಸಿ.ಎ- 3:30 ರಿಂದ 5, ಬಾಟನಿ- 5 ರಿಂದ 5:15, ಪ್ರಾಣಿಶಾಸ್ತ್ರ- 5:15 ರಿಂದ 5:30.
ಜುಲೈ 8 ರಂದು ಕಾಮರ್ಸ್ ಆ್ಯಂಡ್ ಮ್ಯಾನೇಜ್‍ಮೆಂಟ್- ಬೆಳಿಗ್ಗೆ 10:30 ರಿಂದ 1:30, ಟ್ರಾವೆಲ್ ಆ್ಯಂಡ್ ಮ್ಯಾನೇಜ್‍ಮೆಂಟ್- 2:30 ರಿಂದ 3:30 ರವರೆಗೆ ನಡೆಯಲಿದೆ ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.


