ಮಂಗಳೂರು : ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜೊ೦ದರ ಲೇಡಿಸ್ ಟಾಯ್ಲೆಟ್ನಲ್ಲಿ ಅಪ್ರಾಪ್ತನೋವ೯ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಿಸಿದ್ದ ಘಟನೆ ವರದಿಯಾಗಿದೆ.ಚಿತ್ರೀಕರಣಕ್ಕೆ ಯತ್ನಿಸಿದ್ದ 17 ವರ್ಷದ ಅಪ್ರಾಪ್ತನನ್ನು ಪೊಲೀಸರು ಬ೦ಧಿಸಿದ್ದಾರೆ.
ಮೇ 6 ರಂದು ವೈದ್ಯಕೀಯ ಕಾಲೇಜಿಗೆ ರೋಗಿಯಂತೆ ನಟಿಸಿ ಬಂದಿದ್ದ ಅಪ್ರಾಪ್ತನು ಬಳಿಕ ಲೇಡಿಸ್ ಟಾಯ್ಲೆಟ್ಗೆ ಹೋಗಿ ಅಲ್ಲಿ ತನ್ನ ಮೊಬೈಲ್ ಇಟ್ಟಿದ್ದನು. ಯಾವುದೋ ಫೋನ್ ಕಾಲ್ ಬಂದಿದ್ದರಿಂದ ಆ ಮೊಬೈಲ್ ರಿಂಗ್ ಆಗಿದೆ. ಟಾಯ್ಲೆಟ್ನಲ್ಲಿ ಮೊಬೈಲ್ ರಿಂಗ್ ಶಬ್ದ ಕೇಳಿಕಾಲೇಜಿನ ವಾಚ್ಮೆನ್ ಪರಿಶೀಲನೆ ಮಾಡಿದಾಗ ಮೊಬೈಲ್ ಪತ್ತೆಯಾಗಿದೆ.ಕಾಲೇಜಿನವರು ಬಂದರು
ಪೊಲೀಸ್ ಠಾಣೆಗೆ ದೂರು ನೀಡಿದ್ದು ಕಾಲೇಜಿನ ಸಿಸಿಟಿವಿ ಪರಿಶೀಲನೆ ಮಾಡಿದಾಗ ಅಪ್ರಾಪ್ತನೋವ೯ ಲೇಡಿಸ್ ಟಾಯ್ಲೆಟ್ನಲ್ಲಿ ಮೊಬೈಲ್ ಇಟ್ಟಿರುವುದು ಪತ್ತೆಯಾಗಿದೆ. ಪೊಲೀಸರು ಕಾಯಾ೯ಚರಣೆ ನಡೆಸಿ ಅಪ್ರಾಪ್ತನನ್ನು ಬಂಧಿಸಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ