ಮ೦ಗಳೂರು: ಐವರು ಸಾಧಕರಿಗೆ 2025ನೇ ಸಾಲಿನ ಪ್ರತಿಷ್ಠಿತ ರಚನಾ ಪ್ರಶಸ್ತಿ ಪ್ರಶಸ್ತಿ ಘೋಷಿಸಲಾಗಿದೆ. ರಚನಾ ವೃತ್ತಿಪರ ಪ್ರಶಸ್ತಿ –

ಮಾಜಿ ಶಾಸಕ ಜಾನ್ ರಿಚರ್ಡ್ ಲೋಬೊ ಮಂಗಳೂರು, ರಚನಾ ಕೃಷಿಕ ಪ್ರಶಸ್ತಿ – ಡಾ. ಗಾಡ್ವಿನ್ ರೊಡ್ರಿಗಸ್ ಪಿಎಚ್‌ಡಿ, ಬೆಳ್ವಾಯಿ

ಮಂಗಳೂರು , ರಚನಾ ಅನಿವಾಸಿ ಉದ್ಯಮಿ ಪ್ರಶಸ್ತಿ – ಪ್ರತಾಪ್ ಮೆಂಡೋನ್ಸಾ, ದುಬಾಯ್, ರಚನಾ ಮಹಿಳಾ ಸಾಧಕಿ ಪ್ರಶಸ್ತಿ – ಶೋಭಾ ಮೆಂಡೋನ್ಸಾ, ದುಬಾಯ್ ಅವರಿಗೆ ಘೋಷಿಸಲಾಗಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ರಚನಾ ಅಧ್ಯಕ್ಷ ಶ ಜೊನ್ ಬಿ. ಮೊಂತೇರೊ ಪ್ರಶಸ್ತಿ ವಿಜೇತರ ವಿವರ ನೀಡಿದರು. ಕಳೆದ ಬಾರಿಯಂತೆ ಈ ಬಾರಿಯೂ ಸುಮಾರು 25 ಜ್ಯೂರಿ ಸದಸ್ಯರನ್ನೊಳಗೊಂಡ ಸಮಿತಿಯು ಪರಿಶೀಲನೆ ನಡೆಸಿ ಐವರು ಸಾಧಕ ವ್ಯಕ್ತಿಗಳನ್ನು 2025ನೇ

ಸಾಲಿನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.ಪ್ರಶಸ್ತಿ ಪ್ರದಾನ ಕಾರ‍್ಯಕ್ರಮವು ಅಕ್ತೋಬರ್ 5 ಭಾನುವಾರ ಸಂಜೆ 6 ಗಂಟೆಗೆ ಮಂಗಳೂರಿನ ಮಿಲಾಗ್ರಿಸ್ ಸಭಾಭವನದಲ್ಲಿ, ಮಂಗಳೂರಿನ ಬಿಷಪ್ ಅತೀ ಡಾ| ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.ಇಂಧನ ಇಲಾಖೆ ಸಚಿವ ಕೆ. ಜೆ. ಜಾರ್ಜ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿರುವರು.

, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಯುಎಇಯ ಬುರ್ಜೀಲ್ ಹೋಲ್ಡಿಂಗ್ಸ್‌ನ ಸಮೂಹ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾನ್ ಸುನಿಲ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಹಾಗೂ ಡೀನ್ ಮತ್ತು ನಿರ್ದೇಶಕಿ ಡಾ. ಸಿಂಥಿಯಾ ಮಿನೇಜಸ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎ೦ದವರು ವಿವರಿಸಿದರು.
1998ರಲ್ಲಿ ಕಥೊಲಿಕ್ ಉದ್ಯಮಿಗಳು, ವೃತ್ತಿಪರರು ಹಾಗೂ ಕೃಷಿಕರು ಒಟ್ಟಾಗಿ ಸೇರಿ ಆರಂಭಿಸಿದ ರಚನಾ ಸಂಸ್ಥೆಯು ತನ್ನ ಮೂಲ ಆಶಯವಾದ ಕಥೊಲಿಕ್ ಯುವಜನರಿಗೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ತರಬೇತಿ, ಬಂಡವಾಳ ಜೋಡಿಸುವಿಕೆ, ತಾಂತ್ರಿಕ ಸಹಕಾರ ನೀಡುವುದರ ಜೊತೆಗೆ ಸಂಸ್ಥೆಯ ಸದಸ್ಯರಲ್ಲಿ ಸಹಕಾರ ಹಾಗೂ ಸಂಬಂಧವನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಾ ಬಂದಿದೆ. ಇದಕ್ಕೆ ಪೂರಕವಾಗಿ ರಚನಾ ಉದ್ಯಮ ತರಬೇತಿ ವಿಭಾಗವನ್ನು ಆರಂಭಿಸಿ ಕಳೆದ ಕೆಲವು ವರ್ಷಗಳಿಂದ ಹಲವು ಯುವ ಜನರಿಗೆ ತರಬೇತಿಯನ್ನು ನೀಡಲಾಗಿದೆ. ಕ್ರೈಸ್ತ ಕಥೊಲಿಕ್ ಸಮಾಜದ ಯಶಸ್ವಿ ಉದ್ಯಮಿಗಳು, ವೃತ್ತಿಪರರು, ಕೃಷಿಕರು, ಅನಿವಾಸಿ ಭಾರತೀಯರು ಹಾಗೂ ಸಾಧಕ ಮಹಿಳೆಯರನ್ನು ಗುರುತಿಸಿ ಪ್ರತಿಷ್ಠಿತ ರಚನಾ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ ಎ೦ದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ: ವಿಜಯ್ ವಿ. ಲೋಬೊ – ಕಾರ್ಯದರ್ಶಿ, ನೆಲ್ಸನ್ ಮೊಂತೇರೊ – ಖಜಾಂಚಿ,ನವೀನ್ ಲೋಬೊ – ಉಪಾಧ್ಯಕ್ಷರು ಯುಲಾಲಿಯಾ ಡಿಸೋಜಾ – ಸಂಘಟಕರು ಹಾಜರಿದ್ದರು.


