ಮಂಗಳೂರು: ಕರ್ನಾಟಕ ಜಲಸಾರಿಗೆ ಮಂಡಳಿಯವರು ಹಳೆಯ ಮಂಗಳೂರು ಬಂದರಿನಲ್ಲಿ ಒಟ್ಟು 1.58 ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ 1.0 ಮಿಲಿಯನ್ ಮೆಟ್ರಿಕ್ ಟನ್ ಸಾರ್ಮಥ್ಯದ ಸರಕು ನಿರ್ವಹಣಾ ಸೌಲಭ್ಯ ಮತ್ತು 1.23 ಲಕ್ಷ ಘನ ಪ್ರಮಾಣದ ಡ್ರೆಡ್ಜಿಂಗ್ ಸೌಲಭ್ಯಗಳನ್ನೊಳಗೊಂಡ ಸರಕು ಕ್ರೂಸ್ ಟರ್ಮಿನಲ್‍ಗಾಗಿ ಸಂಬಂಧಿತ ಮೂಲಸೌಕರ್ಯ ಸೌಲಭ್ಯಗಳೊಂದಿಗೆ ಲಕ್ಷದ್ವೀಪಕ್ಕಾಗಿ ಮೀಸಲಾದ ಜೆಟ್ಟಿಯನ್ನು ಅಭಿವೃದ್ಧಿಪಡಿಸುವ ಯೋಜನೆಯ ಕುರಿತು ಸಾರ್ವಜನಿಕ ಪರಿಸರ ಆಲಿಕೆ ಸಭೆಯನ್ನು ಡಿಸೆಂಬರ್ 10 ರಂದು ಬೆಳಿಗ್ಗೆ 11 ಗ೦ಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಕ್ಷಿಣ ವಾರ್ಫ್ ಗೊಡೋನ್ ಎ ಷೇಡ್‍ನಲ್ಲಿ ನಿಗದಿಗೊಳಿಸಲಾಗಿದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿಯ ಪರಿಸರ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


