ಮಂಗಳೂರು: ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕಲಾಪ್ರತಿಭೋತ್ಸವ – 2025 ನವೆಂಬರ್ 18 ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಉರ್ವಸ್ಟೋರ್‍ನಲ್ಲಿರುವ ತುಳುಭವನದಲ್ಲಿ ಏರ್ಪಡಿಸಲಾಗಿದೆ.
ಬಾಲಪ್ರತಿಭೆ(8ರಿಂದ 14 ವರ್ಷ ವಯಸ್ಸು)/ ಕಿಶೋರ ಪ್ರತಿಭೆ (14ರಿಂದ 18 ವರ್ಷ ವಯಸ್ಸು) ವಿಭಾಗದ ಸ್ಪರ್ಧೆಯ ಕಲಾ ಪ್ರಕಾರಗಳು ಹಾಗೂ ನಿಗದಿಪಡಿಸಿದ ಸಮಯ:- ಶಾಸ್ತ್ರೀಯ ನೃತ್ಯ-10 ನಿಮಿಷ, ಸುಗಮ ಸಂಗೀತ – 7 ನಿಮಿಷ, ಚಿತ್ರಕಲೆ- 120 ನಿಮಿಷ, ಜನಪದ ಗೀತೆ -7 ನಿಮಿಷ, ಕರ್ನಾಟಕ/ ಹಿಂದೂಸ್ತಾನಿ ವಾದ್ಯ ಸಂಗೀತ-7 ನಿಮಿಷ, ಕರ್ನಾಟಕ/ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ-7 ನಿಮಿಷ.
ಯುವಪ್ರತಿಭೆ(18ರಿಂದ 30 ವರ್ಷ ವಯಸ್ಸು) ವಿಭಾಗದ ಸ್ಪರ್ಧೆಯ ಕಲಾ ಪ್ರಕಾರಗಳು ಹಾಗೂ ನಿಗದಿಪಡಿಸಿದ ಸಮಯ:- ನನ್ನ ಮೆಚ್ಚಿನ ಸಾಹಿತಿ (ಆಶುಭಾಷಣ) -7 ನಿಮಿಷ, ಶಾಸ್ತ್ರೀಯ ನೃತ್ಯ -10 ನಿಮಿಷ, ಸುಗಮ ಸಂಗೀತ- 7 ನಿಮಿಷ, ಕರ್ನಾಟಕ/ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ-7 ನಿಮಿಷ, ಚಿತ್ರಕಲೆ -120 ನಿಮಿಷ, ಕರ್ನಾಟಕ/ ಹಿಂದೂಸ್ತಾನಿ ವಾದ್ಯ ಸಂಗೀತ-7 ನಿಮಿಷ, ಯುವ ಪ್ರತಿಭೆ ವಿಭಾಗದ ಸಮೂಹ ಸ್ಪರ್ಧೆಗಳು:- ನಾಟಕ- 45 ನಿಮಿಷ.


