24.5 C
Karnataka
Thursday, April 30, 2026

ರಾಕೇಶ್ ಅಡ್ಕ ಅವರಿಗೆ ಕಂಬಳ ಗುತ್ತು ಪ್ರಶಸ್ತಿ

ಮ೦ಗಳೂರು: ತೆಂಕು ತಿಟ್ಟು ಯಕ್ಷಗಾನ ದ ಬಹು ಮುಖ ಪ್ರತಿಭೆಯ ಪ್ರಸಿದ್ದ ಯುವ ವೇಷಧಾರಿ, ಯಕ್ಷ ಗುರು, ಸಂಘಟಕ , ಪ್ರಯೋಗ ಶೀಲ ನಿರ್ದೇಶಕ ರಾಕೇಶ್ ರೈ ಅಡ್ಕ ಅವರಿಗೆ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ ಪ್ರದಾನ 11ಜನವರಿ ಆದಿತ್ಯವಾರ ಕದ್ರಿ ಕಂಬಳ ಗುತ್ತಿನ ಪಾವಂಜೆ ಮೇಳದ ಸೇವೆ ಆಟ ದ ವೇದಿಕೆ ಯಲ್ಲಿ ಜರಗಲಿದೆ.

ರಾಕೇಶ್ ಅವರು ಪ್ರಖರ ರಾಷ್ಟ್ರೀಯ ವಾದಿ ಸಂಘಟಕ, ಶಿಕ್ಷಕ ದಿ. ಜಲoಧರ ರೈ ಅವರ ಶಿಷ್ಯ ರಾಗಿ ಹವ್ಯಾಸಿ ವಲಯ ದಲ್ಲಿ ಸಿದ್ದಿ ಪ್ರಸಿದ್ದಿ ಪಡೆದು ಪುಂಡು, ಸ್ತ್ರೀ, ರಾಜವೇಷ ನಿರ್ವಹಣೆ ಯಲ್ಲಿ ಅನುಪಮ ಸಾಧನೆ ಮಾಡಿ ಕಟೀಲು, ಬಪ್ಪನಾಡು ಮೇಳಗಳಲ್ಲಿ ಮೆರೆದು, ಪಟ್ಲ ಭಾಗವತರ ಪಾವಂಜೆ ಮೇಳದಲ್ಲಿ ಕಲಾ ವ್ಯವಸಾಯ ಮಾಡುತ್ತಾ ಬಪ್ಪನಾಡು ಮೇಳದಲ್ಲಿ ಅತಿಥಿ ಕಲಾವಿದರರಾಗಿ ದುಡಿಯುವ ಕಲಾವಿದರು.ಹಾಗೂ ಮೇಳಗಳ ತಿರುಗಾಟ ದ ಜೊತೆಯಲ್ಲೇ ಮೂರು ಜಿಲ್ಲೆ ಗಳಲ್ಲಿ ೧೯ ಕೇಂದ್ರ ಗಳಲ್ಲಿ ಯಕ್ಷಗಾನ ತರಬೇತಿ ನೀಡುವ ಯಕ್ಷ ಗುರು ಆಗಿದ್ದಾರೆ.

ಕದ್ರಿ ಕಂಬಳ ಗುತ್ತಿನ ಯಜಮಾನ ರಾಗಿ, ಹವ್ಯಾಸಿ ಯಕ್ಷಗಾನ ಅರ್ಥ ಧಾರಿಗಳಾಗಿದ್ದ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಅವರ ಸ್ಮರಣೆ ಯೊಂದಿಗೆ ಪ್ರಶಸ್ತಿ ನೀಡಲಾಗುವುದು.
ಖ್ಯಾತ ವೈದ್ಯ ಡಾ. ಜಯಶಂಕರ ಮಾರ್ಲ ಅವರು ಪ್ರಶಸ್ತಿ ವಿತರಿಸಲಿರುವರು ಎಂದು ಸೇವಾರ್ಥಿ ಉಷಾ ನವನೀತ ಶೆಟ್ಟಿ ತಿಳಿಸಿದ್ದಾರೆ.
ಕದ್ರಿ ಕಂಬಳ ಗದ್ದೆ ಯಲ್ಲಿ ಪಾವಂಜೆ ಮೇಳ ದ “ಶ್ರೀ ದೇವೀ ಮಹಾತ್ಮೆ ” ಯಕ್ಷಗಾನ ಸೇವೆ ಬಯಲಾಟ ಜರಗಲಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles