24.5 C
Karnataka
Thursday, April 30, 2026

ಎಂಸಿಸಿ ಬ್ಯಾಂಕ್, ಬೆಳ್ಮಣ್ ಶಾಖೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ರೂ. 10 ಕೋಟಿಯ ವ್ಯವಹಾರ ಗುರಿ ಸಾಧನೆಯ ಸಂಭ್ರಮಾಚರಣೆ

ಮ೦ಗಳೂರು: ಎo.ಸಿ.ಸಿ. ಬ್ಯಾಂಕಿನ ಬೆಳ್ಮಣ್ ಶಾಖೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಒಂದೇ ವರ್ಷದಲ್ಲಿ ರೂ.10 ಕೋಟಿ ವ್ಯವಹಾರ ಗುರಿಯನ್ನು ಯಶಸ್ವಿಯಾಗಿ ದಾಟಿದ ಮಹತ್ವದ ಸಾಧನೆಯನ್ನು ಫೆ. 28 ರಂದು ಬೆಳ್ಮಣ್‌ಶಾಖೆಯಲ್ಲಿ ಸಂಭ್ರಮದಿ೦ದ ಆಚರಿಸಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೋ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಪರಪ್ಪಾಡಿಯ ಅವರ್ ಲೇಡಿ ಆಫ್ ಪರ್ಪೆಚುಯಲ್ ಸುಕುರ್ ಚರ್ಚ್ನ ಧರ್ಮಗುರುಗಳಾದ ವಂದನೀಯ ಫಾ| ಡೇನಿಸ್ ಡಿಸೋಜ ಹಾಗೂ ಬೆಳ್ಮಣ್‌ನ ಸಂತ ಜೋಸೆಫರ ಪ್ರೌಢ ಶಾಲೆಯ ಶಿಕ್ಷಕಿ ಶ್ರೀಮತಿ ಲೈಲಾ ಬಬಿತಾ ನೊರೊನ್ಹಾಉಪಸ್ಥಿತರಿದ್ದರು. ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕಿ ಡಾ| ಫ್ರೀಡಾ ಡಿಸೋಜ, ಮಹಾಪ್ರಬಂಧಕ ಸುನಿಲ್ ಮಿನೇಜಸ್ ಮತ್ತು ಬೆಳ್ಮಣ್ ಶಾಖಾ ಪ್ರಬಂಧಕಿ ಶ್ರೀಮತಿ ಶೈನಿ ಲಸ್ರಾದೊ ಹಾಜರಿದ್ದರು.


ಒಂದು ವರ್ಷದ ಯಶಸ್ವಿಪೂರ್ಣತೆ ಹಾಗೂ ರೂ 10 ಕೋಟಿಯ ವ್ಯವಹಾರ ಮೈಲಿಗಲ್ಲು ಸಾಧನೆಯನ್ನು ಸಂಕೇತಿಸುವ೦ತೆ ಅಧ್ಯಕ್ಷರು, ಗಣ್ಯ ಅತಿಥಿಗಳು, ಬೆಳ್ಮಣ್ ಶಾಖೆಯ ಎಲ್ಲಾ ಗ್ರಾಹಕರ ಪರವಾಗಿ ಬೆಳ್ಮಣ್ ಶಾಖೆಯ ಸ್ಥಾಪಕ ಗ್ರಾಹಕರು, ಶಾಖಾ ವ್ಯವಸ್ಥಾಪಕರು ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮವನ್ನು ಹಂಚಿಕೊ೦ಡರು.

ಬೆಳ್ಮಣ್ ಶಾಖೆಯ ಆರಂಭದಿ೦ದಲೂ ಬ್ಯಾಂಕಿನ ಮೇಲೆ ಅವರು ತೋರಿದ ವಿಶ್ವಾಸ, ನಂಬಿಕೆ ಮತ್ತು ಮೂಲಭೂತ ಬೆಂಬಲವನ್ನು ಗುರುತಿಸಿ, ಬೆಳ್ಮಣ್ ಶಾಖೆಯ ಎಲ್ಲಾ ಗ್ರಾಹಕರ ಪರವಾಗಿ ಕ್ರತಜ್ಞತಾ ಪೂರ್ವಕವಾಗಿ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅವರು ಸ್ಥಾಪಕ ಗ್ರಾಹಕರನ್ನು ಸನ್ಮಾನಿಸಿದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಮೊದಲ ವರ್ಷದೊಳಗೆ ಸಾಧಿಸಲಾದ ರೂ.10 ಕೋಟಿ ಮೈಲಿಗಲ್ಲು ಸಾಮೂಹಿಕ ಪ್ರಯತ್ನ, ದೂರದೃಷ್ಟಿಯ ಯೋಜನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಹಕರ ಅಚಲ ನಂಬಿಕೆಯ ಫಲಿತಾಂಶವಾಗಿದೆ, ಬ್ಯಾಂಕಿನ ಪ್ರಾಥಮಿಕ ಉದ್ದೇಶ ತನ್ನ ಗ್ರಾಹಕರಿಗೆ ತ್ವರಿತ ಮತ್ತು ಪರಿಣಾಮಕಾರಿ ಸೇವೆಯನ್ನು ಒದಗಿಸುವುದು ಎಂದು ಹೇಳಿದರು.
ಗ್ರಾಹಕರು ಬ್ಯಾಂಕಿನತ್ತ ಸಂಪೂರ್ಣ ನಂಬಿಕೆಯಿoದ ಬರಬೇಕು ಮತ್ತು ಪ್ರತಿಯಾಗಿ, ಬ್ಯಾಂಕ್ ಅವರ ನಂಬಿಕೆಗೆ ತಕ್ಕ ಸೇವೆಯನ್ನು ನೀಡಬೇಕು, ಅವರ ಅಗತ್ಯಗಳನ್ನು ಅರ್ಥಮಾಡಿಕೊಂಡು, ಸಮಸ್ಯೆಗಳನ್ನು ಪರಿಹರಿಸಿ, ಸಂಪೂರ್ಣ ತೃಪ್ತಿಯನ್ನು ಖಚಿತಪಡಿಸಿಕೊಳ್ಳುವ ವಿಶ್ವಾಸಾರ್ಹ ಸೇವೆಯನ್ನು ಒದಗಿಸಬೇಕು ಎಂದು ಹೇಳಿದರು. ಗ್ರಾಹಕರ ಬಲವಾದ ಬೆಂಬಲ ಮತ್ತು ನಂಬಿಕೆಯಿ೦ದಾಗಿ ಶಾಖೆ ಈ ಮೈಲಿಗಲ್ಲು ಸಾಧಿಸಲು ಸಾಧ್ಯವಾಯಿತು, ಡಿಸೆಂಬರ್ ತಿಂಗಳಲ್ಲಿಯೇ ಶಾಖೆಯು ರೂ.10 ಕೋಟಿ ಗಡಿ ತಲುಪಿತ್ತು ಮತ್ತು ಈಗ ರೂ.12 ಕೋಟಿ ಮೈಲಿಗಲ್ಲನ್ನು ದಾಟಿದೆ. ಈ ಸಾಧನೆಗಾಗಿ ಅವರು ಬೆಳ್ಮಣ್ ಶಾಖೆಯ ಎಲ್ಲಾ ಗ್ರಾಹಕರನ್ನು ಅಭಿನಂದಿಸಿದರು ಮತ್ತು ಶಾಖೆಯ ಗ್ರಾಹಕರು ಬ್ಯಾಂಕಿನ ನಿಜವಾದ ಬ್ರಾಂಡ್ ರಾಯಭಾರಿಗಳು ಎಂದು ಬಣ್ಣಿಸಿದರು. ತೃಪ್ತ ಗ್ರಾಹಕರು ತಮ್ಮ ಸಕಾರಾತ್ಮಕ ಅನುಭವವನ್ನು ಇತರ ಹತ್ತು ಜನರೊಂದಿಗೆ ಹಂಚಿಕೊ೦ಡರೆ, ಜಾಹೀರಾತಿನ ಅಗತ್ಯವಿಲ್ಲದೆ ಬ್ಯಾಂಕ್ ಸ್ವಾಭಾವಿಕವಾಗಿ ಬೆಳೆಯುತ್ತದೆ ಎಂದು ಅಭಿಪ್ರಾಯ ಪಟ್ಟರು.

ಎಸ್‌ಎಸ್‌ಎಲ್‌ಸಿ ಸಾಧನೆ ಮಾಡಿದ ಜನೀಶ್ ಮೆನೆಜೆಸ್ – 94.40%, ಪಿಷ್ಮಾ ಡಿ’ಕ್ರೂಜ್ – 92.64%, ರಿಯಾ ರಾಚೆಲ್ ರೊಡ್ರಿಗಸ್ – 83% ಮತ್ತು ಪರ್ಲ್ ಮಾರಿಸಾ ಕಾರ್ಡೋಜಾ – 90%, ಪಿಯುಸಿಯಲ್ಲಿ ಸಾಧನೆ ಮಾಡಿ ಜೋಶ್ವಾ ಹೆರಾಲ್ಡ್ ಫೆರ್ನಾಂಡಿಸ್ – 97%, ರೋಲಿಶಾ ಪ್ರಿಯಾ ಡಿ’ಸಿಲ್ವಾ – 95.50% ಮತ್ತು ಜೋಸ್ವಿನ್ ಕ್ರಿಸ್ಟನ್ ಪೈಸ್ – 88% ಹಾಗೂ 25ನೇ, 50ನೇ, 60ನೇ, 75 ಹಾಗೂ 80ನೇ ಜನ್ಮ ದಿನವನ್ನು ಆಚರಿಸಿದ ಶಾಖೆಯ ಗ್ರಾಹಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಗ್ರಾಹಕರು ಸಲಹೆ ಸೂಚನೆಗಳು ಹಾಗೂ ಪ್ರಶಂಶೆಗಳನ್ನು ನೀಡಿದರು. ಆಧ್ಯಕ್ಷರು ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದರು.

ತಮ್ಮ ಗುರುದೀಕ್ಷೆಯ 25 ವರ್ಷಗಳನ್ನು ಪೂರೈಸುತ್ತಿರುವ ಪರಪ್ಪಾಡಿ ಚರ್ಚಿನ ಧರ್ಮಗುಗುರುಗಳು ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ವಂದನೀಯ ಫಾ| ಡೆನಿಸ್ ಡಿಸೋಜ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಶುಭ ಹಾರೈಸಲಾಯಿತು. ನಿರ್ದೇಶಕಿ ಡಾ| ಫ್ರೀಡಾ ಡಿಸೋಜಾ ಸ್ವಾಗತಿಸಿ ಶ್ರೀ ಜೇಸನ್ ಪಿರೇರಾ, ಶಿರ್ತಾಡಿ ನಿರೂಪಿಸಿ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles