21.7 C
Karnataka
Monday, June 15, 2026

ಮೀನುಗಾರಿಕೆ ದೋಣಿಗಳಲ್ಲಿ ಟ್ರಾನ್ಸ್‍ಪಾಂಡರ್ ಅಗತ್ಯ : ಮಹೇಶ್ ಕುಮಾರ್

ಮಂಗಳೂರು: ಮೀನುಗಾರಿಕಾ ಕಾಲೇಜು ಮತ್ತು ಮೀನುಗಾರಿಕಾ ಇಲಾಖೆಯ ಸಹಯೋಗದಲ್ಲಿ ನಗರದ ಹೊಯಿಗೆ ಬಜಾರ್‍ನಲ್ಲಿರುವ ಮೀನುಗಾರಿಕಾ ಕಾಲೇಜಿನಲ್ಲಿ “ನೆಟ್ ಮೆಂಡಿಂಗ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು” ಕುರಿತು ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಕೆಎಫ್‍ಡಿಸಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಕುಮಾರ್ ಉದ್ಘಾಟಿಸಿ ಮಾತನಾಡಿ, ಮೀನುಗಾರರು ಡಿಕ್ಕಿಯನ್ನು ತಪ್ಪಿಸಲು ಇಂಧನವನ್ನು ಉಳಿಸಲು ಮತ್ತು ದುರ್ಗಮ ಅವಧಿಯಲ್ಲಿ ಮೀನುಗಾರಿಕಾ ದೋಣಿಯನ್ನು ಪತ್ತೆಹಚ್ಚಲು ಮೀನುಗಾರರಿಗೆ ಮೀನುಗಾರಿಕಾ ಹಡಗಿನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಅನ್ವಯಿಕೆಗಳು (ಟ್ರಾನ್ಸ್‍ಪಾಂಡರ್) ಬಹಳ ಅವಶ್ಯಕವಾಗಿದೆ ಎಂದು ಅವರು ಹೇಳಿದರು.
ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಡೀನ್ (ಮೀನುಗಾರಿಕೆ) ಡಾ. ಎಚ್.ಎನ್. ಆಂಜನೇಯಪ್ಪ, ಅವರು ಭವಿಷ್ಯದ ಪೀಳಿಗೆಗೆ ಬಲೆ ದುರಸ್ತಿ ಮತ್ತು ಮೀನುಗಾರಿಕೆ ಸಂಪನ್ಮೂಲಗಳ ಸಂರಕ್ಷಣೆಯ ಪಾತ್ರದ ಬಗ್ಗೆ ಹೇಳಿದರು.
ತರಬೇತಿ ಕಾರ್ಯಕ್ರಮದ ಸಂಯೋಜಕ ಡಾ. ಜಯ ನಾಯಕ್ ಅವರು ತರಬೇತಿ ಕಾರ್ಯಕ್ರಮದ ಸಾಧಕ-ಬಾಧಕಗಳನ್ನು ಹೇಳಿದರು. ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಎಸ್. ವರದರಾಜು ಸ್ವಾಗತಿಸಿ, ಡಾ. ವಿಜಯ್ ಎಸ್. ಅತ್ನೂರು ವಂದಿಸಿದರು.
ರಾಜೇಂದ್ರ ಜೆ, ಕಿರಣ್ ನಾಯಕ್ ಮತ್ತು ವಿ.ದಿಲೀಪ್ ಕುಮಾರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles