ಮಂಗಳೂರು: ದ.ಕ ಜಿಲ್ಲೆಯ ಪ್ರವರ್ಗ “ಸಿ” ವರ್ಗದ ಕೆಳಕಂಡ ಅಧಿಸೂಚಿತ ಸಂಸ್ಥೆಗಳಿಗೆ 9 ಜನ ಸದಸ್ಯರಿರುವ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಸಲುವಾಗಿ ಆಸಕ್ತ ಭಕ್ತಾಧಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರವರ್ಗ “ಸಿ”
ವ್ಯವಸ್ಥಾಪನಾ ಸಮಿತಿ ಅವಧಿ ಮುಕ್ತಾಯಗೊಂಡ ದೇವಸ್ಥಾನ/ದೈವಸ್ಥಾನಗಳು:
1.ಸುರತ್ಕಲ್ ಶ್ರೀ ಮೂರ್ನಾಡು ಮಾಗಣೆ ಮಹಾಮ್ಮಾಯಿ ದೇವಸ್ಥಾನ, 2. ಉಳ್ಳಾಲ ತಾಲೂಕು ಕೈರಂಗಳ ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನ, 3. ಉಳ್ಳಾಲ ತಾಲೂಕು ನರಿಂಗಾನ ಗ್ರಾಮದ ಶ್ರೀ ಮಲರಾಯ ದೈವಸ್ಥಾನ, 4. ಮುಲ್ಕಿ ತಾಲೂಕು
ಬಳ್ಕುಂಜೆ ಗ್ರಾಮದ ಶ್ರೀ ಮಿತ್ತಗುತ್ತು ರಾಜನ್ ದೈವ ಧೂಮಾವತಿ ದೇವಿ ದೈವಸ್ಥಾನ.
- ಮೂಡಬಿದ್ರೆ ತಾಲೂಕಿನ ಧರೆಗುಡ್ಡೆ ಗ್ರಾಮದ ಶ್ರೀ ವಿನಾಯಕ ದೇವಸ್ಥಾನ, 6. ಮೂಡಬಿದ್ರೆ ತಾಲೂಕು ಹೊಸಬೆಟ್ಟು ಶ್ರೀ ಕೊಡಮಂತ್ತಾಯ ದೈವಸ್ಥಾನ, 7. ಕಡಬ ತಾಲೂಕು ಪಿಜಕಳ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ,
ಖಾಲಿ ಉಳಿದಿರುವ ಪ್ರವರ್ಗ
1.ಮಂಗಳೂರು ತಾಲೂಕು ಕೆಂಜಾರು ಗ್ರಾಮದ ಶ್ರೀ ಪೊರ್ಕೋಡಿ ಸೋಮನಾಥೇಶ್ವರ ದೇವಸ್ಥಾನ, – ಪರಿಶಿಷ್ಟ ಜಾತಿ/ಪಂಗಡ -1, ಸಾಮಾನ್ಯ-2, 2. ಮೂಡಬಿದ್ರೆ ತಾಲೂಕು ಕಡಂದಲೆ ಗ್ರಾಮದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ- ಸಾಮಾನ್ಯ -2 , 3. ಕಡಬ ತಾಲೂಕು ಎಡಮಂಗಲ ಗ್ರಾಮದ ಶ್ರೀ ನೂಜಿಲ ಗೋಪಾಲಕೃಷ್ಣ ದೇವಸ್ಥಾನ – ಸಾಮಾನ್ಯ-1 .
ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಏಪ್ರಿಲ್ 16 ರೊಳಗಾಗಿ “ಪ್ರಜಾ ಸೌಧ” ಜಿಲ್ಲಾಧಿಕಾರಿ ಕಛೇರಿಯ ಮೊದಲನೇ ಮಹಡಿಯಲ್ಲಿರುವ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರ ಕಚೇರಿಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗೆ ಅಥವಾ ನಿಗಧಿತ ಅರ್ಜಿ ನಮೂನೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಲಭ್ಯವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.


