ಮ೦ಗಳೂರು: ಬಸ್ ನಲ್ಲಿ ಬ್ಯಾಗ್ ಒಳಗಡೆ ಇರಿಸಿದ್ದ ಸುಮಾರು 170 ರಿಂದ 180 ಗ್ರಾಂ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೋಪಿಯನ್ನು ಪೊಲೀಸರು ಬ೦ಧಿಸಿದ್ದಾರೆ. ಮಧ್ಯಪ್ರದೇಶ ರಾಜ್ಯದ ಧಾರಾ ಜಿಲ್ಲೆಯ ಸಮದ್ ಖಾನ್ (37) ಬ೦ಧಿತ ಆರೋಪಿಯಾಗಿದ್ದು , ಕಳ್ಳತನ ಮಾಡಿದ 174 ಗ್ರಾಂ ಗಳಷ್ಟು ಅಂದಾಜು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಲಾಗಿದೆ.ಆರೋಪಿಯು 2025 ರ ನವೆ೦ಬರ್ 19 ರಂದು ಬಸ್ ನಲ್ಲಿ ಬ್ಯಾಗ್ ಒಳಗಡೆ ಇರಿಸಿದ್ದ ಸುಮಾರು 170 ರಿಂದ 180 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿತ್ತು.
ಆರೋಪಿ ಪತ್ತೆ ಕಾರ್ಯದಲ್ಲಿ ಬಂಟ್ವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಯಶ್ ಕುಮಾರ್ ಶರ್ಮಾ ಅವರ ನಿರ್ದೇಶನದಂತೆ, ಪ್ರಕರಣದ ತನಿಖಾಧಿಕಾರಿಯಾದ ಅನಂತ ಪದ್ಮನಾಭ ಕೆ.ವಿ,ಪೊಲೀಸ್ ನಿರೀಕ್ಷಕರು, ಬಂಟ್ವಾಳ ನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ,ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸಿಬ್ಬಂದಿಗಳಾದ ವಿಜಯ್ ಕುಮಾರ್, ರಾಜೇಶ್, ಇರ್ಷಾದ್, ಬಸವರಾಜ , ಸುರೇಶ್ ಕುಮಾರ್, ವಿಜಯ್ ಕುಮಾರ್, ರೇವತಿ ಹಾಗೂ ಜಿಲ್ಲಾ ಪೊಲೀಸ್ ಘಟಕದ ಗಣಕ ಯಂತ್ರ ವಿಭಾಗದ ಸಿಬ್ಬಂದಿಗಳಾದ ಸಂಪತ್ ಕುಮಾರ್ ಹಾಗೂ ದಿವಾಕರ ಅವರುಗಳು ಪಾಲ್ಗೊಂಡಿರುತ್ತಾರೆ.


