24.9 C
Karnataka
Thursday, April 30, 2026

ಜುಗಾರಿ ಆಟವಾಡುತ್ತಿದ್ದ 17 ಮ೦ದಿ ವಿರುದ್ದ ಪ್ರಕರಣ ದಾಖಲು

ಮ೦ಗಳೂರು: ಮಂಗಳೂರು ತಾಲೂಕು ಬೊಲ್ಪುಗುಡ್ಡೆ ಗ್ರಾಮದ ಮನೆಯೊ೦ದರಲ್ಲಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ (ಉಲಾಯಿ ಪಿದಾಯಿ) ಎಂಬ ಜುಗಾರಿ ಆಟವಾಡುತ್ತಿದ್ದ17 ಮ೦ದಿ ವಿರುದ್ದ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊ೦ಡಿದ್ದಾರೆ. 1,92,000 ರೂ ನಗದು ಹಣ ಹಾಗೂ 8 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಿನಾಂಕ: 30-08-2025 ರಂದು ರಾತ್ರಿ 11-30 ಗಂಟೆಯ ಸಮಯ ಬೊಲ್ಪುಗುಡ್ಡೆಯಲ್ಲಿ ಮನೆಯೊ೦ದರಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ (ಉಲಾಯಿ ಪಿದಾಯಿ) ಜುಗಾರಿ ಆಟವಾಡುತ್ತಿದ್ದ ಸ್ಥಳಕ್ಕೆ ಕಾವೂರು ಪೊ
ಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ ಅವರು ಸಿಬ್ಬಂದಿಗಳೊಂದಿಗೆ ವಿಶೇಷ ಕಾರ‍್ಯಾಚರಣೆ ನಡೆಸಿ ಜುಗಾರಿ ಆಟವಾಡುತ್ತಿದ್ದ ದೇರೆಬೈಲ್ ಕೊಂಚಾಡಿಯ ದಿಕ್ಷೀತ್ (31), ದಯಾನಂದ (40) ,ರಾಘವೇಂದ್ರ (41) , ಉಮೇಶ್ (41), ಗೌತಮ್ (32, ವೈಶಾಕ್ ಶೆಟ್ಟಿ ಯಯ್ಯಾಡಿ (25), ಪ್ರವೀಣ್ ಕುಮಾರ್ ಫರಂಗಿ ಪೇಟೆ(40), ಶಾಹುಲ್ ಹಮೀದ್ (50) ತಿಲಕ್ ರಾಜ್ ನಡುಗೋಡು (31) ಜಯಾನಂದ್ ಎಸ್ ವಾಮಂಜೂರು (44) ) ಲಾರೆನ್ಸ್ ರಾಜಾ ಡಿ ಸೋಜಾ ಕೂಳೂರು (48) ಇನಸ್ ಡಿಸೋಜಾ ಹೊಯ್ಗೆ ಗದ್ದೆ ಉಲ್ಲಾಳ , ಮುಹಮ್ಮದ್ ಅಶ್ರಫ್ ಉಲ್ಲಾಳ ಬೈಲ್ , ಮೊಹಮ್ಮದ್ ಫಯಾಜ್ (42) ಪೆರ್ಮನೂರ್ ‌,ಮುಸ್ತಾಫಾ (61) ಉಲ್ಲಾಳ ,ಸುನೀಲ್ ಡಿಸೋಜಾ ಅಡಮ್ ಕುದ್ರು ಪಡಪು(41). ) ಕಣ್ಣನ್ ತಮಿಳುನಾಡು (42,) ಎಂಬವರನ್ನು ವಶಕ್ಕೆ ಪಡೆದು ನಗದು ಹಣವನ್ನು ಹಾಗೂ ಮೊಬೈಲ್ ಫೋನ್ ಗಳನ್ನು ಸ್ವಾಧೀನಾಪಡಿಸಿಕೊಂಡಿದ್ದಾರೆ.
ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಕಾಂತ ಕೆ . ಅವರ ಮಾಹಿತಿಯಂತೆ ಮತ್ತು ಕಾವೂರು ಠಾಣಾ ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ್ ನೇತೃತ್ವದಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯ ಸಿಬ್ಬಂದಿಯವರಾದ ಚಂದ್ರು, ರೇಜಿ, ದಾಮೋದರ, ಹಾಲೇಶ್ ಹಾಗೂ ಠಾಣಾ ಸಿಬ್ಬಂದಿಯವರಾದ ಎ.ಎಸ್.ಐ ಜಯರಾಮ್, ಮಂಜುನಾಥ, ನಾಗರಾಜ್ ಮತ್ತು ಇತರ ಸಿಬ್ಬಂದಿಗಳು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles