ವೈದ್ಯಕೀಯ ಕಾಲೇಜಿನ ಲೇಡಿಸ್ ಟಾಯ್ಲೆಟ್ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಿಸಿದ್ದ ಅಪ್ರಾಪ್ತನ ಬ೦ಧನ
ಮಂಗಳೂರು : ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜೊ೦ದರ ಲೇಡಿಸ್ ಟಾಯ್ಲೆಟ್ನಲ್ಲಿ ಅಪ್ರಾಪ್ತನೋವ೯ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಿಸಿದ್ದ ಘಟನೆ ವರದಿಯಾಗಿದೆ.ಚಿತ್ರೀಕರಣಕ್ಕೆ ಯತ್ನಿಸಿದ್ದ 17 ವರ್ಷದ ಅಪ್ರಾಪ್ತನನ್ನು ಪೊಲೀಸರು ಬ೦ಧಿಸಿದ್ದಾರೆ.
ಮೇ 6 ರಂದು ವೈದ್ಯಕೀಯ ಕಾಲೇಜಿಗೆ ರೋಗಿಯಂತೆ ನಟಿಸಿ ಬಂದಿದ್ದ ಅಪ್ರಾಪ್ತನು ಬಳಿಕ ಲೇಡಿಸ್ ಟಾಯ್ಲೆಟ್ಗೆ ಹೋಗಿ ಅಲ್ಲಿ ತನ್ನ ಮೊಬೈಲ್ ಇಟ್ಟಿದ್ದನು. ಯಾವುದೋ...
ಸೈಡ್ ಕೊಡದಿರುವ ಬಗ್ಗೆ ತಕರಾರು ತೆಗೆದು ಸರಕಾರಿ ಬಸ್ ಚಾಲಕನ ಮೇಲೆ ಹಲ್ಲೆ
ಬಂಟ್ವಾಳ: ಕಾರಿನ ಸೈಡ್ ಕೊಟ್ಟಿಲ್ಲ ಎ೦ದು ತಕರಾರು ತೆಗೆದು ಸರಕಾರಿ ಬಸ್ ಚಾಲಕನ ಮೇಲೆ ತಂಡವೊಂದು ಹಲ್ಲೆ ನಡೆಸಿ, ಬಸ್ ಗೆ ಹಾನಿಗೊಳಿಸಿದ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ರವಿವಾರ ನಡೆದಿದೆ. ಪುಂಜಾಲಕಟ್ಟೆ ನಿವಾಸಿ ಕೃಷ್ಣಪ್ಪ ಅವರು ಹಲ್ಲೆಗೊಳಗಾದ ಚಾಲಕ. ರವಿವಾರ ಸಂಜೆ ವೇಳೆ ಮಂಗಳೂರಿನಿಂದ ಸೋಮವಾರಪೇಟೆಗೆ ಪ್ರಯಾಣಿಕರನ್ನು...
ಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬ೦ಧನ: ಒಟ್ಟು 16,13 ಲಕ್ಷ ರೂ ಮೌಲ್ಯದ ಸೊತ್ತು ವಶ
ಮಂಗಳೂರು:ಮಂಗಳೂರು ನಗರದ ಕೋಟೆಕಾರ್ ಬೀರಿ ಬಳಿಯ ಮನೆಯೊಂದರಲ್ಲಿ ಮಾದಕ ವಸ್ತುಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನುಮಂಗಳೂರು ಸಿಸಿಬಿ ಪೊಲೀಸರು ಬುಧವಾರ ಬ೦ಧಿಸಿದ್ದಾರೆ.ಉಳ್ಳಾಲ ಬಸ್ತಿಪಡ್ಪು ನಿವಾಸಿ ಮೊಹಮ್ಮದ್ ಇಶಾನ್( 35 ) ಹಾಗೂ ಉಳ್ಳಾಲ ಅಕ್ಕರೆಕೆರೆ ನಿವಾಸಿ ಜಾಫರ್ ಸಾಧಿಕ್( 35 ) ಬ೦ಧಿತ ಆರೋಪಿಗಳು.ಆರೋಪಿಗಳಿ೦ದ ಒಟ್ಟು 16,13,800 ರೂ ಮೌಲ್ಯದ ಸೊತ್ತು ವಶ ಪಡಿಸಿಕೊಳ್ಳಲಾಗಿದೆ.
ಮಂಗಳೂರು...
ಆಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದನ ವಶ;ಆರೋಪಿಗಳು ಪರಾರಿ
ಬಂಟ್ವಾಳ :ಆಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದನವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಪಡಿಸಿಕೊ೦ಡಿದ್ದು ಆರೋಪಿಗಳು ಪರಾರಿಯಾಗಿದ್ದಾರೆ.
ಎ.9ರಂದು ರಾತ್ರಿ, ಕಾರಿಂಜ ದರ್ಖಾಸು ಕಡೆಯಿಂದ, ಬರ್ಕಟ ಕ್ರಾಸ್ ಕಡೆಗೆ ಆಟೋರಿಕ್ಷಾದಲ್ಲಿ ದನವನ್ನು ಸಾಗಾಟ ಮಾಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಮೂರ್ತಿರವರು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ, ಆಟೋರಿಕ್ಷಾವನ್ನು ನಿಲ್ಲಿಸುವಂತೆ ಸೂಚಿಸಿದಾಗ...
ಲಂಚ ಸ್ವೀಕಾರ ಆರೋಪ: ಮುಡಾ ಕಮಿಷನರ್ ಮನ್ಸೂರ್ ಅಲಿಗೆ ಜಾಮೀನು ನಿರಾಕರಣೆ
ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಬಂಧನಕ್ಕೊಳಗಾಗಿದ್ದ ಮುಡಾ ಕಮಿಷನರ್ ಮನ್ಸೂರ್ ಅಲಿ ಮತ್ತು ಬ್ರೋಕರ್ ಮುಹಮ್ಮದ್ ಸಲೀಂ ಅವರಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.
ಮಾ. 23 ರಂದು ಮುಡಾ ಆಯುಕ್ತ ಮನ್ಸೂರ್ ಅಲಿ ನಿರ್ದೇಶನದಂತೆ ಬ್ರೋಕರ್ ಮಹಮ್ಮದ್ ಸಲಿಂ ದೂರುದಾರರಿಂದ 25,00,000ರೂ. (ಇಪ್ಪತ್ತೈದು ಲಕ್ಷ) ಲಂಚದ...
ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಕಳವು
ವಿಟ್ಲ : ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಕಳವು ಮಾಡಿಕೊಂಡು ಹೋಗಿರುವ ಘಟನೆ ಬಂಟ್ವಾಳ ತಾಲೂಕು ವಿಟ್ಪಪಡ್ನೂರು ಗ್ರಾಮದ ಕಾಪುಮಜಲು ಎಂಬಲ್ಲಿ ನಡೆದಿದೆ.ವಿಟ್ಲಪಡ್ನೂರು ಕಾಪುಮಜಲು ನಿವಾಸಿ ಪೂವಪ್ಪಗೌಡ ಅವರು ಮನೆಯ ಅಂಗಳದಲ್ಲಿ ಒಣಗಲು ಹಾಕಿದ ಸುಮಾರು 10 ಗೋಣಿ ಚೀಲದಷ್ಟು ಅಡಿಕೆಯನ್ನು ಕಳ್ಳರೂ ಕಳವು ಮಾಡಿಕೊಂಡು ಹೋಗಿದ್ದು ಅದರ ಮೌಲ್ಯ 75.000 ರೂ ಆಗಬಹುದು...
ಅಕ್ರಮವಾಗಿ ಜಾನುವಾರುಗಳ ಸಾಗಾಟ
ಬೆಳ್ತಂಗಡಿ: ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ 4 ಜಾನುವಾರುಗಳನ್ನು ವಾಹನ ಸಮೇತ ವೇಣೂರು ಪೊಲೀಸರು ವಶಪಡಿಸಿಕೊ೦ಡಿದ್ದಾರೆ.ಶನಿವಾರ ಸಂಜೆ ಬೆಳ್ತಂಗಡಿ ತಾಲೂಕು ಬಜಿರೆ ಗ್ರಾಮದ ಬಾಡಾರು ಎಂಬಲ್ಲಿ ವೇಣೂರು- ನೈನಾಡು ಸಾರ್ವಜನಿಕ ರಸ್ತೆಯಲ್ಲಿ ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶೈಲ ಡಿ. ಮುಗೋಡು ಹಾಗೂ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿದ್ದಾಗ, ಸದ್ರಿ...
ದೆಹಲಿ ಪೊಲೀಸ್ ಎ೦ದು ನ೦ಬಿಸಿ 16 ಲಕ್ಷ ರೂ. ದೋಚಿದರು !
ಪುತ್ತೂರು:ದೆಹಲಿ ಪೊಲೀಸ್ ಎ೦ದು ನ೦ಬಿಸಿ ಪುತ್ತೂರಿನ ವ್ಯಕ್ತಿಯೋವ೯ರಿ೦ದ ಅಪರಿಚಿತ ವ್ಯಕ್ತಿಗಳು ಆನ್ ಲೈನ್ ಮೂಲಕ 16,50,000 ರೂ.ದೋಚಿದ ಪ್ರಕರಣ ವರದಿಯಾಗಿದ್ದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ, ಪ್ರಕರಣ ದಾಖಲಾಗಿದೆ.ಪುತ್ತೂರು ಬೊಳ್ವಾರು ನಿವಾಸಿಯಾಗಿರುವ ವ್ಯಕ್ತಿ ಪೊಲೀಸರಿಗೆ ನೀಡಿರುವ ದೂರಿನಂತೆ, ಸದ್ರಿಯವರ ದೂರವಾಣಿಗೆ ಮಾ. 28ರಂದು ಬೆಳಿಗ್ಗೆ, ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಬಂದಿದ್ದು, ಕರೆ ಸ್ವೀಕರಿಸಿ...
17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬ೦ಧನ
ಬಂಟ್ವಾಳ : 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಬ೦ಧಿಸಿದ್ದಾರೆ. ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಕಂಚಿಲ ನಿವಾಸಿ ಅಬುಸಾಲಿ (41) ಬ೦ಧಿತ ಆರೋಪಿ.ಪ್ರಕರಣವೊ೦ದರಲ್ಲಿ ಆರೋಪಿಯಾಗಿದ್ದ ಅಬುಸಾಲಿ 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆತನನ್ನು ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆ ಎಂಬಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸ್ ಉಪ ನಿರೀಕ್ಷಕ...
ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದು ಹೇಳಿದ್ದಕ್ಕೆ ಕತ್ತಿಯಿಂದ ಹಲ್ಲೆ!
ಕಡಬ :ಸಣ್ಣ ಮಗು ಮಲಗಿದೆ; ಜೋರಾಗಿ ಮಾತನಾಡಬೇಡಿ ಎಂದು ಹೇಳಿದ್ದಕ್ಕೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಕಡಬದ ಬಳ್ಪದಲ್ಲಿ ನಡೆದಿದೆ. ಕಡಬ ನಿವಾಸಿ ರಮೇಶ್ ಕೆ. ಹಲ್ಲೆಗೊಳಗಾದವರು.ಸುಂದರ ಹೊಸ್ಮಠ ಹಲ್ಲೆ ನಡೆಸಿದ ಆರೋಪಿ.ರಮೇಶ್ ಹೆಂಡತಿ ಮತ್ತು ಸಣ್ಣ ಮಗನೊಂದಿಗೆ ಬಳ್ಪದಲ್ಲಿ ವಾಸವಾಗಿದ್ದು ಮ೦ಗಳವಾರ ಸಂಜೆ ಮನೆಯಲ್ಲಿರುವಾಗ, ಸಂಬಂಧಿಕ ಆರೋಪಿ ಸುಂದರ ಹೊಸ್ಮಠ ಮನೆಗೆ ಬಂದಿದ್ದ....
