ವಿವಾಹವಾಗಲು ನಿರಾಕರಿಸಿದ್ದಕ್ಕೆ ಕೊಲೆ ಬೆದರಿಕೆ
ಮ೦ಗಳೂರು:ವಿವಾಹವಾಗಲು ನಿರಾಕರಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿ ಮಹಿಳೆಯ ಫೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಬಗ್ಗೆ ಬಗ್ಗೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂತ್ರಸ್ತ ಮಹಿಳೆಯ ದೂರಿನಂತೆ ಆಕೆಗೆ 7 ವರ್ಷದ ಹಿಂದೆ ಮದುವೆಯಾಗಿ ವಿಚ್ಛೇದನವಾಗಿರುತ್ತದೆ. ಆಕೆ ತನ್ನ ಮಗನೊಂದಿಗೆ ತಾಯಿ ಮನೆಯಲ್ಲಿ ವಾಸ್ತವ್ಯವಿದ್ದು, 2022 ನೇ ವರ್ಷದಲ್ಲಿ ಮೇಟ್ರಿಮೋನಿಯೊಂದರ ಮೂಲಕ...
ಮಾದಕ ವಸ್ತು ಕೋಕೆನ್ ಪತ್ತೆ ;ಇಬ್ಬರು ಆರೋಪಿಗಳ ಸೆರೆ
ಮಂಗಳೂರು: ಗೋವಾ ರಾಜ್ಯದಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ನಿಷೇದಿತ ಮಾದಕ ವಸ್ತು ಕೋಕೇನ್ ನ್ನು ಸಾಗಾಟ/ಮಾರಾಟ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿ 35 ಗ್ರಾಂ ಕೋಕೆನ್ ನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಮಂಗಳೂರು ಅಂಬ್ಲ ಮೊಗರು ಸಣ್ಣಮದಕದ ಸದಕತ್.ಯು @ ಶಾನ್ ನವಾಜ್(31) ಹಾಗೂ ಅಂಬ್ಲ ಮೊಗರು ಮದಕದ ಮಹಮ್ಮದ್...
ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್ ನೀಡಿ 1 ಲಕ್ಷ ರೂ. ಕಳೆದುಕೊ೦ಡರು !
ಬೆಳ್ತ೦ಗಡಿ :ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್ ನೀಡಿ ಹಣ ತೆಗೆದುಕೊಡುವಂತೆ ಕೇಳಿ 1ಲಕ್ಷ ರೂ. ಕಳೆದುಕೊ೦ಡ ಪ್ರಕರಣ ಬೆಳ್ತ೦ಗಡಿ ನಡೆದಿದೆ.ಬೆಳ್ತಂಗಡಿ ಮೆಲಂತಬೆಟ್ಟು ನಿವಾಸಿ ವ್ಯಕ್ತಿಯೋವ೯ರು ಬುಧವಾರ ಸಂಜೆ ಸಮಯ, ಬೆಳ್ತಂಗಡಿ ಕಸಬಾ ಗ್ರಾಮದ ಎಸ್ ಬಿಐ ಎಟಿಎಂ ನಿಂದ ಹಣ ತೆಗೆಯಲು ತೆರಳಿದ್ದರು. ಅವರಿಗೆ ಎಟಿಎಂ ಕಾರ್ಡ್ ಬಳಕೆಯ ಬಗ್ಗೆ ತಿಳಿಯದೇ ಇದ್ದುದರಿಂದ, ಅಲ್ಲೇ...
ಅಡ್ಯನಡ್ಕದ ಬ್ಯಾಂಕ್ ನಲ್ಲಿ ಕಳವು ಪ್ರಕರಣ : ಆರೋಪಿಗಳ ಬ೦ಧನ
ಬಂಟ್ವಾಳ: ಬಂಟ್ವಾಳ ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ಕರ್ನಾಟಕ ಬ್ಯಾಂಕಿನಲ್ಲಿ ಇತ್ತೀಚೆಗೆ ನಡೆದಿದ್ದ ನಗದು ಹಾಗೂ ಚಿನ್ನಭರಣಗಳ
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಿಶೇಷ ತನಿಖಾ ತಂಡ ಬ೦ಧಿಸಿದೆ. ಬಂಟ್ವಾಳ ಗೂಡಿನ ಬಳಿ ನಿವಾಸಿ
ಮಹಮ್ಮದ್ ರಫೀಕ್ @ ಗೂಡಿನ ಬಳಿ ರಫೀಕ್ ( 35 ), ಮಂಜೇಶ್ವರ ತಾಲೂಕು ಉಪ್ಪಳ ನಿವಾಸಿ ಇಬ್ರಾಹಿಂ...
ಬಂಟ್ವಾಳ : ಮನೆಯ ಅಟ್ಟದಲ್ಲಿಟ್ಟಿದ್ದ ಅಡಕೆ ಕಳವು
ಬಂಟ್ವಾಳ: ಮನೆಯ ಅಟ್ಟದಲ್ಲಿ ಸುಲಿಯದೇ ಇಟ್ಟಿದ್ದ 11 ಗೋಣಿ ಚೀಲ ಅಡಕೆ ಕಳವು ಆಗಿರುವ ಘಟನೆ ಬಂಟ್ವಾಳ ಬೈಪಾಸ್ ರಸ್ತೆ ಬಳಿ ಸ೦ಭವಿಸಿದೆ.ಬಂಟ್ವಾಳ ಬೈಪಾಸ್ ರಸ್ತೆ ಬಳಿಯ ಕೃಷಿಕರೋವ೯ರು 11 ಗೋಣಿ ಚೀಲದಲ್ಲಿ ಸುಮಾರು 3 ಕ್ವಿಂಟಾಲ್ ಅಡಿಕೆಯನ್ನು ಒಣಗಿಸಿ, ಒಂದು ವಾರಗಳ ಹಿಂದೆ ಮನೆಯ ಅಟ್ಟದಲ್ಲಿ ಇಟ್ಟಿದ್ದರು. ಮಾ. 1 ರಂದು ಸಂಜೆ ಮನೆಗೆ...
ಉಜಿರೆ: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ : ಮೂವರ ಬ೦ಧನ
ಉಜಿರೆ: ಉಜಿರೆ ಹಳೆ ಪೇಟೆಯಲ್ಲಿ ಎರಡು ಲಾಡ್ಜ್ ಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಮೂವರನ್ನು ಬೆಳ್ತಂಗಡಿ ಪೊಲೀಸರು ಬ೦ಧಿಸಿದ್ದಾರೆ. ತುಮಕೂರು ಅರಳೇ ಪೇಟೆಯ ರೇಣುಕಾ ಪ್ರಸಾದ್ (29), ಕಾರ್ಕಳ ನಿಟ್ಟೆ ರಾಜೇಶ್ ಮೋಹನ್ ನಾಯರ್ (34), ಕಾರ್ಕಳ ನೂರಾಲ್ ಬೆಟ್ಟುನ ನಿತಿನ್ ಕುಮಾರ್(28) ಬ೦ಧಿತರು.ಉಜಿರೆ ಹಳೆ ಪೇಟೆಯ ಎರಡು ಲಾಡ್ಜ್ ಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ...
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮಂಗಳೂರು:ನ್ಯಾಯಲಯಕ್ಕೆ ಹಾಜರಾಗದೆ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸರು ಬ೦ಧಿಸಿದ್ದಾರೆ.ಬೆಳ್ತಂಗಡಿ ತಾಲೂಕು ತೋಟತ್ತಡಿ ನಿವಾಸಿ ಟಿ.ಇ. ಜೋಸೆಫ್ (58 ) ಬ೦ಧಿತ ಆರೋಪಿ.ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ದಾಖಲಾದ ಗಾಂಜಾ ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ಆರೋಪಿಯಾಗಿರುವ ಟಿ.ಇ. ಜೋಸೆಫ್ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ...
ಸರ ಸುಲಿಗೆ ಮಾಡಿದ ಅಂತರ್ ರಾಜ್ಯ ಸುಲಿಗೆಕೋರರ ಬಂಧನ
ಮಂಗಳೂರು: ಸರ ಸುಲಿಗೆ ಮಾಡಿದ ಅಂತರ್ ರಾಜ್ಯ ಸುಲಿಗೆಕೋರರನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬ೦ಧಿಸಿದ್ದಾರೆ. ಬಂಟ್ವಾಳ ಶಾಂತಿ ಅಂಗಡಿಯ ಮೊಹಮ್ಮದ್ ಅಲಿ @ ಅಶ್ರು ( 32 ) ಹಾಗೂ ಜುಬೇರ್ (32 ) ಬ೦ಧಿತ ಆರೋಪಿಗಳು.ಆರೋಪಿಗಳು ಮಂಗಳೂರು ನಗರದ ಬಜಾಲ್ ನ ಜೆ.ಎಮ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯಿಂದ 16...
29 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿ ಕೊಂಡಿದ್ದ ಆರೋಪಿಯ ಬ೦ಧನ
ಮ೦ಗಳೂರು: 29 ವರ್ಷ ದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿ ಕೊಂಡಿದ್ದಆರೋಪಿಯನ್ನು ಪೊಲೀಸರು
ಬ೦ಧಿಸಿದ್ದಾರೆ.ಕೊಡಗು ಸೋಮವಾರಪೇಟೆಯ ಮಾದಾಪುರ ನಿವಾಸಿ ಈರಪ್ಪ ಬ೦ಧಿತ ಆರೋಪಿ.ಕದ್ರಿ ಪೊಲೀಸ್ ಠಾಣೆಯ PSI ಉಮೇಶ್ ಕುಮಾರ್ ಮತ್ತು ತಂಡ ಕಾಯಾ೯ಚರಣೆ ನಡೆಸಿ ಆರೋಪಿಯನ್ನು ಬ೦ಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದೆ.
ಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಆರೋಪಿಯ ಸೆರೆ
ಮಂಗಳೂರು: ಮಂಗಳೂರು ತಾಲೂಕು ಪಡುಶೆಡ್ಡೆ ಗ್ರಾಮದ ಬೊಂದೆಲ್ – ಮೂಡುಶೆಡ್ಡೆ ರಸ್ತೆಯಲ್ಲಿರುವ ರೈಲ್ವೆ ಟ್ರ್ಯಾಕ್ ನ ರೈಲ್ವೆ ಅಂಡರ್ ಪಾಸ್ ಬಳಿಯಲ್ಲಿ ಎ೦ಡಿಎ೦ಎ ಮಾರಾಟ ಮಾಡುತ್ತಿದ್ದಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬ೦ಧಿಸಿದ್ದಾರೆ. ಮೂಡುಶೆಡ್ಡೆ, ಶಿವನಗರ ನಿವಾಸಿ ಮೊಹಮ್ಮದ್ ರಿಜ್ವಾನ್(34 ) ಬ೦ಧಿತ ಆರೋಪಿ.ಆರೋಪಿಯಿ೦ದ ಒಟ್ಟು 91,280 ರೂ ಮೌಲ್ಯದ ಸೊತ್ತು ವಶಕ್ಕೆ. ಪಡೆದುಕೊಳ್ಳಲಾಗಿದೆ.
ಬೊಂದೆಲ್ –...