ಟೆರೇಸ್ ಗಾರ್ಡನಿಂಗ್ : ಉಚಿತ ಮಾಹಿತಿ ಶಿಬಿರ
ಮ೦ಗಳೂರು: ಆಮ್ ಆದ್ಮಿ ಪಕ್ಷ ದ.ಕ.ಜಿಲ್ಲಾ ಮಹಿಳಾ ಘಟಕದ ವತಿಯಿಂದ ಫೆಬ್ರವರಿ 10 ಶನಿವಾರದಂದು ಟೆರೇಸ್ ಗಾರ್ಡನಿಂಗ್ ವಿಷಯದಲ್ಲಿ ಉಚಿತ ಮಾಹಿತಿ ಶಿಬಿರವನ್ನು ಮಂಗಳೂರಿನ ಬಲ್ಮಠದಲ್ಲಿರುವ ಶಾಂತಿ ನಿಲಯ ಹಾಲ್ ನಲ್ಲಿ ಬೆಳಿಗ್ಗೆ 9:15 ರಿಂದ ಮಧ್ಯಾಹ್ನ 12:30 ರವರೆಗೆ ಆಯೋಜಿಸಲಾಗಿದೆ. ಆಸಕ್ತರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬಹುದು.ಶಿಬಿರಾರ್ಥಿಗಳಿಗೆ ಹಣ್ಣಿನ ಗಿಡ ಹಾಗೂ ತರಕಾರಿ...
ತುಂಬೆಯಿ೦ದ ಸರಬರಾಜು ಆಗುವ ಕುಡಿಯುವ ನೀರು ಮುಖ್ಯ ಕೊಳವೆಗೆ ಮಾಡಿರುವ ಅನಧಿಕೃತ ಜೋಡಣೆ ತೆರವು
ಮಂಗಳೂರು:ತುಂಬೆಯಿ೦ದ ಸರಬರಾಜು ಆಗುವ ಕುಡಿಯುವ ನೀರು ಮುಖ್ಯ ಕೊಳವೆಗೆ ವಿವಿಧ ಪಂಚಾಯತ್ ವ್ಯಾಪ್ತಿಗಳಲ್ಲಿ ಮಾಡಿರುವ ಅನಧಿಕೃತ ಜೋಡಣೆಗಳ ತೆರವು ಕಾಯಾ೯ಚರಣೆ ಶನಿವಾರ ಜರಗಿತು.ಮಂಗಳೂರು ಮಹಾನಗರಪಾಲಿಕೆಗೆ ತುಂಬೆ ಅಣೆಕಟ್ಟಿನಿಂದ ಪಂಪ್ ಮಾಡಲಾಗುವ ಕುಡಿಯುವ ನೀರನ್ನು ಪಂಚಾಯತ್ ವ್ಯಾಪ್ತಿ ಮೂಲಕ ಹಾದು ಹೋಗಿರುವ ಮುಖ್ಯ ಕೊಳವೆಯಿಂದ ವಿವಿಧ ಪಂಚಾಯತ್ ವ್ಯಾಪ್ತಿಗಳಲ್ಲಿ ಕಟ್ಟಡ ರಚನೆಗೆ, ವಾಣಿಜ್ಯ ಉದ್ದೇಶಕ್ಕೆ ಹಾಗೂ...
ಅರಣ್ಯ ಸಚಿವ ಈಶ್ವರ ಖಂಡ್ರೆ ಜಿಲ್ಲಾ ಪ್ರವಾಸ
ಮಂಗಳೂರು: ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಫೆ. 4 ರಿಂದ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಫೆ. 4 ರ೦ದು ರಾತ್ರಿ 9:25 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ, ರಾತ್ರಿ 9.45ಕ್ಕೆ ಧರ್ಮಸ್ಥಳಕ್ಕೆ ತೆರಳಿ ವಾಸ್ತವ್ಯ.ಫೆ. 5 ಸೋಮವಾರ ಬೆಳಗ್ಗೆ 8- ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ...
ಫೆ.16ರಿಂದ ತಣ್ಣೀರುಬಾವಿ ಬೀಚ್‍ನಲ್ಲಿ ತಪಸ್ಯ ಬೀಚ್ ಉತ್ಸವ, ಟ್ರಯತ್ಲಾನ್
ಮಂಗಳೂರು: ಫೆಬ್ರವರಿ 16 ರಿಂದ 18ರವರೆಗೆ ತಣ್ಣೀರುಬಾವಿ ಬೀಚ್‍ನಲ್ಲಿ ಮಂಗಳೂರು ಟ್ರಯತ್ಲಾನ್ ಮತ್ತು ತಪಸ್ಯ ಬೀಚ್ ಫೆಸ್ಟಿವಲ್ ಬಗ್ಗೆ ಸಭೆಯು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.ಮಂಗಳೂರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಉದ್ದೇಶದಿಂದ ಮತ್ತು ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ತಪಸ್ಯ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಸಂಸ್ಥೆಯ ಟ್ರಸ್ಟಿ ಡಾ. ಆಶಾಜ್ಯೋತಿ...
ಮುಖ್ಯಮಂತ್ರಿ ಸಿದ್ಧರಾಮಯ್ಯರಿಂದ ದ.ಕ . ಪತ್ರಕರ್ತರ ಗ್ರಾಮ ವಾಸ್ತವ್ಯದ ಮಾಹಿತಿ ಪತ್ರ ಬಿಡುಗಡೆ
ದಾವಣಗೆರೆ:ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ,ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ,ದ.ಕ ಜಿಲ್ಲಾ ಪಂಚಾಯತ್,ಸುಳ್ಯ ತಾಲೂಕು ಪಂಚಾಯತ್ ,ದ.ಕ ಜಿಲ್ಲಾ ಪೊಲೀಸ್ ಇಲಾಖೆ. ಹರಿಹರ,ಕೊಲ್ಲಮೊಗರು ಗ್ರಾಮ ಪಂಚಾಯತ್ ಮತ್ತು ಸ್ಥಳೀಯಾಡಳಿತ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋ ಗದೊಂದಿಗೆ ಕೊಲ್ಲಮೊಗರುವಿನ ಬಂಗ್ಲೆ ಗುಡ್ಡೆ ಸರಕಾರಿ ಶಾಲಾ...
ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿ ಡಾ.ಸಲೀಮುಲ್ಲಾ ಖಾನ್ ಆಯ್ಕೆ
ಮಂಗಳೂರು - ಪಿ.ಎ. ಕಾಲೇಜ್ ಆಫ್ ಫಾರ್ಮಸಿ ಇದರ ಪ್ರಾಂಶುಪಾಲರಾದ ಡಾ.ಸಲೀಮುಲ್ಲಾ ಖಾನ್ ಇವರನ್ನು ಕರ್ನಾಟಕಸರಕಾರವು ಫಾರ್ಮಸಿ ಕಾಯ್ದೆ 1948 ರ ಸೆಕ್ಷನ್ 3(ಎಚ್) ಅಡಿಯಲ್ಲಿ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದ ಸೆಂಟ್ರಲ್ ಕೌನ್ಸಿಲ್ಸದಸ್ಯರಾಗಿ ನಾಮನಿರ್ದೇಶನ ಮಾಡಿದ್ದು, ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ಡಾ.ಸಲೀಮುಲ್ಲಾ ಖಾನ್ ಇವರನ್ನು 5ವರ್ಷಗಳ ಅವಧಿಗೆ ಸೆಂಟ್ರಲ್ ಕೌನ್ಸಿಲ್ ಸದಸ್ಯರಾಗಿ...
ಬಿಜೆಪಿಯ ಹಿರಿಯ ನಾಯಕರನ್ನು ಸ್ಮರಿಸುವುದು ಆದ್ಯ ಕರ್ತವ್ಯವಾಗಿದೆ :ವೇದವ್ಯಾಸ್ ಕಾಮತ್
ಮಂಗಳೂರು: ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರ ತ್ಯಾಗ, ಪರಿಶ್ರಮದಿಂದ ಪಕ್ಷವು ಇಂದು ದೇಶದಾದ್ಯಂತ ಬಲಿಷ್ಠವಾಗಿ ಬೆಳೆದು ನಿಂತಿದ್ದು ಮಾತ್ರವಲ್ಲದೇ ಜಗತ್ತಿನಲ್ಲಿಯೇ ಅತಿ ದೊಡ್ಡ ಪಕ್ಷವಾಗಿ ಬೆಳೆದು ನಿಂತಿದೆ. ಇಂಥಹ ಸಂದರ್ಭದಲ್ಲಿ ಅವರೆಲ್ಲರನ್ನು ಸ್ಮರಿಸುವುದು, ಅವರು ತೋರಿದ ಹಾದಿಯಲ್ಲಿ ಸಾಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹಿರಿಯ ಕಾರ್ಯಕರ್ತ ಮಾ.ಚಂದ್ರಹಾಸರವರ ಮನೆಗೆ ಭೇಟಿ ನೀಡಿದ...
ವಿದೇಶಗಳಲ್ಲಿ ಇಂಜಿನಿಯರಿಂಗ್ ಉದ್ಯೋಗಾವಕಾಶ
ಮಂಗಳೂರು: ಹಂಗೇರಿ ಯೂರೋಪ್ ದೇಶಗಳಲ್ಲಿ ಮೆಕಾನಿಕಲ್, ಇಲೆಕ್ಟ್ರಿಕಲ್, ಮೆಕಾಟ್ರೋನಿಕ್ಸ್ ಇಂಜಿನಿಯರಿಂಗ್ ಅಭ್ಯಥಿಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.ಮಾಸಿಕ ವೇತನ ರೂ. 1.50 ಲಕ್ಷದವರೆಗೆ ಇದ್ದು, ಹೆಚ್ಚುವರಿಯಾಗಿ ಫರ್ಫಾಮೆನ್ಸ್ ಲಿಂಕ್ ಇನ್ಸೆಂಟಿವ್ ((PLI),), ವಾರ್ಷಿಕ ಬೋನಸ್, ಸೇವಾ ಬೋನಸ್, ಕೆಫೆಟೇರಿಯಾ ಭತ್ಯೆಗಳನ್ನು ನೀಡಲಾಗುತ್ತದೆ. ಇಂಗ್ಲಿಷ್ ಭಾಷೆ ಕಡ್ಡಾಯವಾಗಿ ತಿಳಿದಿರಬೇಕು.ಅಭ್ಯರ್ಥಿಗಳನ್ನು ಆನ್‍ಲೈನ್ ಸಂದರ್ಶನ ಹಾಗೂ ಪ್ರಾಯೋಗಿಕ ಕೌಶಲ್ಯ ಪರೀಕ್ಷೆಗಳ...
ಮಂಗಳೂರಿನಿಂದ ಜೆಡ್ಡಾಗೆ ವಿಮಾನಯಾನ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮುಂಬರುವ ಬೇಸಿಗೆ ವೇಳಾಪಟ್ಟಿಯಲ್ಲಿ ಜೆಡ್ಡಾವನ್ನು ತನ್ನಎಂಟನೇ ಸಾಗರೋತ್ತರ ವಲಯವಾಗಿ ಸೇರಿಸಲು ಸಜ್ಜಾಗಿದೆ. ಏ.3ರಿಂದ ಪ್ರತಿ ಬುಧವಾರ ಕಾರ್ಯನಿರ್ವಹಿಸುವಸಾಪ್ತಾಹಿಕ ವಿಮಾನವನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಿಸಿದೆ. ಮಂಗಳೂರು-ಜೆಡ್ಡಾ ವಿಮಾನ ಮಧ್ಯಾಹ್ನ 2.50ಕ್ಕೆಮಂಗಳೂರಿನಿಂದ ಹೊರಟು ಸಂಜೆ 6.25ಕ್ಕೆ ಜೆಡ್ಡಾ ತಲುಪಲಿದೆ. ಐಎಕ್ಸ್ 498 ವಿಮಾನವು ಜೆಡ್ಡಾದಿಂದ ರಾತ್ರಿ 7.25ಕ್ಕೆ ಹೊರಟುಗುರುವಾರ...
ಗ್ರಾಮ ವಾಸ್ತವ್ಯದ ಪೂರ್ವಭಾವಿಯಾಗಿ ಎಸಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ
ಸುಳ್ಯ: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಫೆ.10ರಂದು ನಡೆಯುವ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡುವುದಾಗಿ ಪುತ್ತೂರು ಸಹಾಯಕ ಕಮೀಷನರ್ ಜುಬಿನ್ ಮಹಾಪಾತ್ರ ಹೇಳಿದ್ದಾರೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಪೂರ್ವಭಾವಿಯಾಗಿ ಸುಳ್ಯ ತಾಲೂಕು ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನರಿಂದ...






