23.9 C
Karnataka
Sunday, September 13, 2026

ಸುದ್ದಿ

ಜ.26ರಂದು ಜಿಲ್ಲಾಮಟ್ಟದ ಗಣರಾಜ್ಯೋತ್ಸವ

0
ಮಂಗಳೂರು:ಜಿಲ್ಲಾಡಳಿತದ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಜ.26ರ ಗುರುವಾರ ಬೆಳಿಗ್ಗೆ 9 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಘನ ಉಪಸ್ಥಿತಿಯಲ್ಲಿ ಆರೋಗ್ಯ ಮತ್ತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸಂದೇಶ ನೀಡುವರು.ಕಾರ್ಯಕ್ರಮದ...

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಸಹಾಯಧನ ವಿತರಣೆ

0
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಸಮಾಜ ಕಲ್ಯಾಣ ಸಹಾಯಧನ ಚೆಕ್ ವಿತರಣಾ ಕಾರ್ಯಕ್ರಮ ಬುಧವಾರ ಬಂಟ್ಸ್ ಹಾಸ್ಟೆಲ್ ನಲ್ಲಿರುವ ಬಂಟರ ಮಾತೃ ಸಂಘದ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರುಗಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.ಇದೇ ಸಂದರ್ಭದಲ್ಲಿ ಮಂಗಳೂರು...

ಜ.29 ರಂದು ಮೇಯರ್ ಫೋನ್‌ ಇನ್‌ ಕಾರ್ಯಕ್ರಮ

0
ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಸಾರ್ವಜನಿಕರೊಂದಿಗೆ ಜನವರಿ 29ರಂದು ಬೆಳಿಗ್ಗೆ 11 ಗಂಟೆಯಿಂದ 12 ಗಂಟೆಯವರೆಗೆ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಾತನಾಡಲಿರುವರು.ಸಾರ್ವಜನಿಕರು ತಮ್ಮ ಅಹವಾಲುಗಳನ್ನು ದೂರವಾಣಿ ಸಂಖ್ಯೆ: 0824-2220301 ಅಥವಾ 0824-2220318 ಕರೆ ಮಾಡಿ ತಿಳಿಸಬಹುದು ಎಂದು ಮಹಾನಗರಪಾಲಿಕೆ ಪರಿಷತ್ತು ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂವಿಧಾನ ಜಾಥಾ ಯಶಸ್ಸಿಗೆ ಜಿಲ್ಲಾಧಿಕಾರಿ ಸೂಚನೆ

0
ಮಂಗಳೂರು: ಜ. 26 ರಿಂದ ಜಿಲ್ಲೆಯಲ್ಲಿ ನಡೆಯಲಿರುವ ಸಂವಿಧಾನ ಜಾಥಾ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.ಅವರು ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂವಿಧಾನ ಜಾಥಾ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಸಂವಿಧಾನದ ವಿವಿಧ ಅಂಶಗಳ ಮಹತ್ವ ಸಾರುವ ಆಕರ್ಷಕ ಸ್ಥಬ್ಧಚಿತ್ರ ಹಾಗೂ ಕಲಾ...

ಮಂಗಳೂರು ವಿಮಾನ ನಿಲ್ದಾಣ :ಕಾರ್ಗೋ ಟರ್ಮಿನಲ್ ನಲ್ಲಿ ಅಡಿಕೆ ಪಾರ್ಸೆಲ್ ನಿರ್ವಹಣೆ

0
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಎಂಐಎ) 2024 ರ ಜನವರಿ ಆರಂಭದಲ್ಲಿ ತನ್ನ ಇಂಟಿಗ್ರೇಟೆಡ್ ಕಾರ್ಗೋಟರ್ಮಿನಲ್ (ಐಸಿಟಿ) ನಲ್ಲಿ ಅಡಿಕೆಯನ್ನು ಒಳಬರುವ ನಿರ್ವಹಣೆಗೆ ಅನುಕೂಲ ಮಾಡಿಕೊಟ್ಟಿತ್ತು. 1519 ಕೆಜಿ ತೂಕದಕೆಂಪು ತಳಿಯ ಅಡಿಕೆಯನ್ನು 60 ಮೂಟೆಗಳಲ್ಲಿ ಅಗರ್ತಲಾದಿಂದ ಈ ಕರಾವಳಿ ಪಟ್ಟಣಕ್ಕೆ ಬೈಲಿ ಏರ್ ಕಾರ್ಗೋ ಎಂದು ತರಲಾಗಿತ್ತು. ಮೇ 1,2023 ರಂದು...

ಸುಳ್ಯ :ಮಂಗಳವಾರ ಜಿಲ್ಲಾ ಮಟ್ಟದ ಜನತಾದರ್ಶನ

0
ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಮಂಗಳವಾರ ಸುಳ್ಯದಲ್ಲಿ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮ ನಡೆಯಲಿದೆ.ಸುಳ್ಯ ಕೆವಿಜಿ ಪುರಭವನದಲ್ಲಿ ನಡೆಯುವ ಈ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾರ್ವಜನಿಕರ ಕುಂದುಕೊರತೆ, ಅಹವಾಲುಗಳನ್ನು ಉಸ್ತುವಾರಿ ಸಚಿವರು ಸ್ವೀಕರಿಸಿ, ಪರಿಹಾರ ಒದಗಿಸಲು ವ್ಯವಸ್ಥೆ ಮಾಡಲಾಗಿದೆ.ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ಜನತಾ ದರ್ಶನ...

ಶಾಸಕ ವೇದವ್ಯಾಸ್ ಕಾಮತ್ ಅವರಿ೦ದ ಉರುಳು ಸೇವೆಯ ಸಂಕಲ್ಪ ಈಡೇರಿಕೆ

0
ಮ೦ಗಳೂರು: ರಾಮಮಂದಿರದ ವಿವಾದ ನ್ಯಾಯಾಲಯದಲ್ಲಿ ಇದ್ದಂತಹ ಕಾಲದಲ್ಲಿ, "ತೀರ್ಪು ಮಂದಿರದ ಪರವಾಗಿಯೇ ಬರಬೇಕು, ಅಲ್ಲಿಯೇ ಮಂದಿರ ನಿರ್ಮಾಣವಾಗಬೇಕು" ಎಂದು ಬಜಿಲಕೇರಿಯ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಉರುಳು ಸೇವೆಯ ಸಂಕಲ್ಪವನ್ನು ಕೈಗೊಂಡಿದ್ದ ಶಾಸಕ ವೇದವ್ಯಾಸ್ ಕಾಮತ್ ಅವರು ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನ ಸಂದರ್ಭದಲ್ಲಿ ತಮ್ಮ ಸಂಕಲ್ಪವನ್ನು ಈಡೇರಿಸಿಕೊಂಡರು. ಕ್ಷೇತ್ರದ ಶಾಸಕನಾಗಿರುವಂತಹ ಸಂದರ್ಭದಲ್ಲಿ ಇಂತಹ ಅಪೂರ್ವ ಘಳಿಗೆಗೆ ಸಾಕ್ಷಿಯಾಗಿರುವುದು...

ಜ.22:ಶ್ರೀರಾಮ ವೈಭವ -ಸಂಗೀತ ಕಾರ್ಯಕ್ರಮ

0
ಮಂಗಳೂರು:ಕಲಾಸಾಧನ ಮ್ಯೂಸಿಕ್ ಸ್ಕೂಲ್ ನ ವತಿಯಿಂದ ಶಕ್ತಿ ನಗರದ ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಜ.22ರಂದು 10ಗಂಟೆಗೆ ನಡೆಯಲಿರುವ ಶ್ರೀರಾಮ ವೈಭವ ಸಂಗೀತ ಕಾರ್ಯಕ್ರಮ ವನ್ನು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉದ್ಘಾಟಿಸಲಿದ್ದಾರೆ.ಶಕ್ತಿ ಶಿಕ್ಷಣ ಸಂಸ್ಥೆ ಗಳ ಅಧ್ಯಕ್ಷ ಡಾ.ಕೆ.ಸಿ.ನಾಯಕ್ ಸಮಾರಂಭ ದ ಅಧ್ಯಕ್ಷತೆ ವಹಿಸಲಿದ್ದಾರೆ.ಬಳಿಕ ಶ್ರೀಮತಿ ವಿಭಾ ನಾಯಕ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ...

ಫೆ.10ರಂದು ಸುಳ್ಯ ತಾಲೂಕಿನ ಕೊಲ್ಲಮೊಗ್ರದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ

0
ಸುಳ್ಯ: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಹಾಗೂ ಜಿಲ್ಲಾಡಳಿತ, ತಾಲೂಕು ಆಡಳಿತ, ಸ್ಥಳೀಯಾಡಳಿತಗಳ ಸಹಕಾರದಲ್ಲಿ ಫೆ.10ರಂದು ಕೊಲ್ಲಮೊಗ್ರದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಪತ್ರಕರ್ತರ ಸಂಘದ ನೇತೃತ್ವದಲ್ಲಿ ನಡೆಯುವ 5ನೇ ಹಾಗೂ ಸುಳ್ಯ ತಾಲೂಕಿನಲ್ಲಿ ನಡೆಯುವ ಎರಡನೇ ಗ್ರಾಮ...

ಮ೦ಗಳೂರು: ನಗರದ ವಿವಿದೆಡೆ ಪೊಲೀಸ್‌ ಪಥಸ೦ಚಲನ

0
ಮ೦ಗಳೂರು:ಜ.22 ರಂದು ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ವ್ಯಾಪಕ ಬಂದೋಬಸ್ತ್ ಯೋಜನೆಯನ್ನು ಕೈಗೊಳ್ಳಲಾಗಿದೆ.9 ಸಿ.ಎ.ಆರ್ ಮತ್ತು 3 ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ರವಿವಾರ ನಗರದ ವಿವಿದೆಡೆ ಪೊಲೀಸ್‌ ಪಥಸ೦ಚಲನ ನಡೆಸಲಾಯಿತು.