ಪಟಾಕಿ ಮಳಿಗೆ ಗೊಂದಲ ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದ ಹುನ್ನಾರ : ಶಾಸಕ ಕಾಮತ್
ಮ೦ಗಳೂರು: ದೀಪಾವಳಿಯ ಸಂದರ್ಭದಲ್ಲಿಯೇ ಹತ್ತು ಹಲವು ನೆಪವೊಡ್ಡಿ ಹಬ್ಬದ ಸಂಭ್ರಮದ ವಾತಾವರಣಕ್ಕೆ ಅಡ್ಡಿಪಡಿಸುವ ತನ್ನ ಎಂದಿನ ಚಾಳಿಯನ್ನು ಕಾಂಗ್ರೆಸ್ ಸರ್ಕಾರ ಮತ್ತೆ ಶುರು ಮಾಡಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೀಪಾವಳಿಯ ಸಂದರ್ಭದಲ್ಲಿ ಮಾತ್ರ ಪಟಾಕಿ ವಿಷಯದಲ್ಲಿ ಇಲ್ಲ ಸಲ್ಲದ ನಿಯಮಾವಳಿಗಳನ್ನು ಹೇರಿ ಗೊಂದಲಮಯ ವಾತಾವರಣ ಸೃಷ್ಟಿಸುವುದು, ಆ ಮೂಲಕ ಹಿಂದೂ...
ಪೊಲೀಸ್ ಆಯುಕ್ತರ ಕಚೇರಿ:ಫೋನ್-ಇನ್, ಸಾರ್ವಜನಿಕರ ಕುಂದುಕೊರತೆಗಳ ಸಭೆ
ಮಂಗಳೂರು: ಮಂಗಳೂರು ನಗರ ಪೊಲೀಸ್ ಘಟಕದ ವತಿಯಿಂದ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುವ ಸಲುವಾಗಿ ದಿನಾಂಕ: 11-11-2023 ನೇ ಶನಿವಾರದಂದು ಬೆಳಿಗ್ಗೆ 10.00 ಗಂಟೆಯಿಂದ 11.00 ಗಂಟೆಯವರೆಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಫೋನ್-ಇನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸದರಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಫೋನ್ ಮೂಲಕ ನೇರವಾಗಿ ಪೊಲೀಸ್ ಆಯುಕ್ತರೊಂದಿಗೆ ಸಂಭಾಷಣೆ ಮಾಡಿ...
ಇಂಜಿನಿಯರಿಂಗ್ ಡಿಪ್ಲೋಮಾ ಪದವಿ ಉದ್ಯೋಗಾವಕಾಶ
ಮಂಗಳೂರು: ಆದಿತ್ಯ ಬಿರ್ಲಾ ಗ್ರೂಪ್ ಗ್ರಾಸಿಮ್ ಇಂಡಸ್ಟ್ರೀಸ್ ಚಾಮರಾಜನಗರ ವತಿಯಿಂದ ಚಾಮರಾಜನಗರದಲ್ಲಿ ಖಾಲಿ ಇರುವ ಡಿಪ್ಲೋಮಾ ಎಂಜಿನಿಯರ್ , ಪ್ರೊಡಕ್ಷನ್ ಕ್ವಾಲಿಟಿ ಮೆಟೀರಿಯಲ್ ಹ್ಯಾಂಡಲಿಂಗ್ ಮತ್ತು ಸೆಕ್ಷನಲ್ ಇಂಜಿನಿಯರ್ ಹುದ್ದೆಗಳಿಗೆ ನೇರ ಸಂದರ್ಶನ ನವೆಂಬರ 10ರ ಶುಕ್ರವಾರದ ಬೆಳಗ್ಗೆ 10 ರಿಂದ 1.30 ರವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಂಗಳೂರು ಮಹಾನಗರ ಪಾಲಿಕೆ...
ಮಾನವೀಯತೆ ಕಸಿದುಕೊಳ್ಳುವ ದುಶ್ಚಟ: ಶಾಂತರಾಮ ಶೆಟ್ಟಿ
ಮಂಗಳೂರು: ಮನುಷ್ಯನಿಗೆ ಬದುಕಿನ ಕಷ್ಟದ ಸಂದರ್ಭದಲ್ಲಿ ಸದ್ಗುಣ ಇದ್ದಾಗ ಮಾನವೀಯತೆ ಜೀವಂತವಾಗಿರುತ್ತದೆ. ಅದೇ ಮನುಷ್ಯನಲ್ಲಿ ದುಶ್ಚಟಗಳು ಕೂಡಿಕೊಂಡಾಗ ಮಾನವೀಯತೆ ಮರೆಯಾಗುತ್ತಾ ಹೋಗುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ನಿರ್ದೇಶಕ ಸಿ. ಎ. ಶಾಂತರಾಮ್ ಶೆಟ್ಟಿ ಹೇಳಿದರು.ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಯುವ ರೆಡ್ ಕ್ರಾಸ್, ಎನ್.ಸಿ.ಸಿ. (ಭೂದಳ ಮತ್ತು ನೌಕಾದಳ),...
ನವೆಂಬರ್ 9 ರಿಂದ ಜಲ ದೀಪಾವಳಿ ಕಾರ್ಯಕ್ರಮ
ಮಂಗಳೂರು: ಜೀವ ಜಲ ನೀರಿನ ಮಹತ್ವದ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘’ಮಹಿಳೆಯರಿಗಾಗಿ ನೀರು, ನೀರಿಗೆ ಮಹಿಳೆಯರು’’ ಎಂಬ ಧ್ಯೇಯದೊಂದಿಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಿರ್ದೇಶನಂತೆ ಅಮೃತ್ 2.0 ಯೋಜನೆಯಡಿ ದೇಶದಾದ್ಯಂತ ನವೆಂಬರ್ 7ರಿಂದ 9ರವರೆಗೆ ರಾಷ್ಟ್ರೀಯ ಜೀವನೋಪಾಯ ಅಭಿಯಾನವನ್ನು ಸ್ವಸಹಾಯ ಸಂಘದ ಸದಸ್ಯರಿಗೆ ಜಲ ದೀಪಾವಳಿ ವಿನೂತನ...
ಉಳ್ಳಾಲ: ನವೆಂಬರ್ 8ರಂದು ಲೋಕಾಯುಕ್ತ ಜನಸಂಪರ್ಕ ಸಭೆ
ಮಂಗಳೂರು: ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಉಪಾಧೀಕ್ಷಕರು ಹಾಗೂ ನಿರೀಕ್ಷಕರು ನವೆಂಬರ್ 8 ರಂದು ಬೆಳಿಗ್ಗೆ 11 ಗಂಟೆಯಿಂದ ಉಳ್ಳಾಲ ನಗರಸಭೆ ಕಚೇರಿಯಲ್ಲಿ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಂಡಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಮತ್ತು ಇನ್ನಿತರೆ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ ಅಥವಾ ನೌಕರರ ವಿರುದ್ಧ ಈ ಸಭೆಯಲ್ಲಿ ದೂರು ನೀಡಬಹುದಾಗಿದೆ.ಹೆಚ್ಚಿನ ಮಾಹಿತಿಗೆ...
ಜೀವವಿಜ್ಞಾನಗಳ ಇತ್ತೀಚಿನ ಪ್ರವೃತ್ತಿಗಳ ಕುರಿತು ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗವು ಮಂಗಳಾ ಸಭಾಂಗಣದಲ್ಲಿ ನವೆಂಬರ್ 8 ರಿಂದ 10 ರವರೆಗೆ ಮೂರು ದಿನಗಳ ಜೀವವಿಜ್ಞಾನದ ಇತ್ತೀಚಿನ ಪ್ರವೃತ್ತಿಗಳ ಕುರಿತು ರಾಷ್ಟ್ರೀಯ ಸಮ್ಮೇಳನ(NCTRBS-2023)ʼ ವನ್ನು ಆಯೋಜಿಸಿದೆ.ಸಮ್ಮೇಳನವು ದೇಶಾದ್ಯಂತದ ವಿಜ್ಞಾನಿಗಳು ಮತ್ತು ಸಂಶೋಧಕರಿಗೆಜೈವಿಕ ವಿಜ್ಞಾನದಲ್ಲಿನ ಇತ್ತೀಚಿನ ಸಂಶೋಧನೆಗಳನ್ನು ಪ್ರಸ್ತುತಪಡಿಸಲು ಒಂದು ವೇದಿಕೆಯನ್ನು ನೀಡುವ ಜೊತೆಗೆ ಉನ್ನತ ಮಟ್ಟದ ಸಂಶೋಧನೆಗಾಗಿ...
ಕೆ.ಎಸ್.ಆರ್.ಟಿ.ಸಿ ಶಿಶಿಕ್ಷು ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ
ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಲ್ಲಿ ಶಿಶಿಕ್ಷು ವೃತ್ತಿ ತರಬೇತಿ ಪಡೆಯಲು ಎಸ್.ಎಸ್.ಎಲ್.ಸಿ ಅಥವಾ ಐಟಿಐ ತೇರ್ಗಡೆಯಾದ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಎಸ್.ಎಸ್.ಎಲ್.ಸಿ ತೇರ್ಗಡೆಯಾದ ವಿದ್ಯಾರ್ಥಿಗಳು ಮೆಕ್ಯಾನಿಕ್ ಡೀಸೆಲ್ ವೃತ್ತಿಯನ್ನು ಆಯ್ಕೆ ಮಾಡಬಹುದು. ಐಟಿಐ ತೇರ್ಗಡೆಯಾದ ವಿದ್ಯಾರ್ಥಿಗಳು ಮೆಕ್ಯಾನಿಕ್ ಡೀಸೆಲ್, ಎಲೆಕ್ಟ್ರೀಶಿಯನ್, ವೆಲ್ಡರ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್,...
ವಸತಿ ಶಾಲೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ
ಮಂಗಳೂರು:ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ ಶುಕ್ರವಾರ ಪುತ್ತೂರು ತಾಲೂಕಿಗೆ ಭೇಟಿ ಸಂದರ್ಭದಲ್ಲಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಮೊರಾರ್ಜಿ ದೇಸಾಯಿ ಶಾಲೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಹಾಸ್ಟೆಲ್ ಸಮಗ್ರ ಕಟ್ಟಡ ಹಾಗೂ ಅಡುಗೆ ಕೋಣೆಯನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳ ಭೋಜನದ ಗುಣಮಟ್ಟ...
ರಾತ್ರಿ 10 ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ: ಮಹಾನಗರಪಾಲಿಕೆ
ಮಂಗಳೂರು: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ದೀಪಾವಳಿ, ತುಳಸಿಪೂಜೆ ಮತ್ತು ಕ್ರಿಸ್ಮಸ್ ಹಬ್ಬಗಳ ಸಂಧರ್ಭದಲ್ಲಿ ಪಟಾಕಿಗಳ ಮಾರಾಟ ಮತ್ತು ಬಳಕೆ ನಿಯಂತ್ರಿಸುವ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಆದೇಶ ಮತ್ತು ನಿರ್ದೇಶನ ನೀಡಿದೆ. ಹಬ್ಬಗಳ ಸಂದÀರ್ಭದಲ್ಲಿ ಹಸಿರು ಪಟಾಕಿಗಳು ಮಾತ್ರ ಬಳಸಬೇಕು, ಪಟಾಕಿಗಳನ್ನು ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿ, ಮಕ್ಕಳು ಹಾಗೂ ವೃದ್ದರಿಗೆ ತೊಂದರೆಯಾಗದಂತೆ ಬಳಸಬೇಕು. ಪಟಾಕಿ ಹಚ್ಚುವ...




