ಆರೋಗ್ಯ ಕಾರ್ಡ್ ಫಲಾನುಭವಿ: ಗುರುತಿನ ಕಾರ್ಡ್ ಸ್ವಯಂ ನೋಂದಾವಣೆ
ಮಂಗಳೂರು: ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಪಿಎಲ್ ಕುಟುಂಬಗಳಿಗೆ ವರ್ಷಕ್ಕೆ ರೂ.5 ಲಕ್ಷ ಹಾಗೂ ಎಪಿಎಲ್ ಕುಟುಂಬಗಳಿಗೆ ರೂ.1.5 ಲಕ್ಷದವರೆಗಿನ ಚಿಕಿತ್ಸೆಯನ್ನು ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಹೆಚ್ಚುವರಿ ಚಿಕಿತ್ಸೆಗಾಗಿ ಮೇಲ್ದರ್ಜೆ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುವ ಸಲುವಾಗಿ ಫಲಾನುಭವಿ ಗುರುತಿನ ಚೀಟಿ...
ಯುವನಿಧಿಗೆ ಅರ್ಜಿ ಸಲ್ಲಿಕೆ ಆರಂಭ:ಪದವೀಧರರಿಗೆ ಮಾಸಿಕ ರೂ. 3000, ಡಿಪ್ಲೊಮಾ – ರೂ.1500
ಮಂಗಳೂರು:ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಭರವಸೆಗೆ ನೋಂದಣಿ ಆರಂಭವಾಗಿದೆ. 2023-24ನೇ ಸಾಲಿನ ಯಾವುದೇ ವೃತ್ತಿಪರ ಕೋರ್ಸ್, ಪದವಿ, ಡಿಪ್ಲೋಮಾ ಉತ್ತೀರ್ಣರಾಗಿ ಆರು ತಿಂಗಳಲ್ಲಿ ಉದ್ಯೋಗ ಸಿಗದವರಿಗೆ ಈ ಯೋಜನೆ ಅನ್ವಯವಾಗಲಿದೆ.ಮುಂದಿನ 2 ವರ್ಷ ಪದವೀಧರರಿಗೆ ಮಾಸಿಕ ರೂಪಾಯಿ 3000 ಮತ್ತು ಡಿಪ್ಲೋಮಾ ಮುಗಿಸಿದವರಿಗೆ ಮಾಸಿಕ ರೂ. 1500 ಸಾವಿರ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ ಉದ್ಯೋಗ...
ಬೈಕಂಪಾಡಿ-ಕೂಳೂರು ಫ್ಲೈಓವರ್: ತ್ವರಿತಗೊಳಿಸಲು ಜಿಲ್ಲಾಧಿಕಾರಿ ಸೂಚನೆ
ಮಂಗಳೂರು:ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕಂಪಾಡಿಯಿಂದ ಕೂಳೂರುವರೆಗೆ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸೂಚಿಸಿದ್ದಾರೆ.ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೈಗಾರಿಕಾ ಸ್ಪಂದನ ಹಾಗೂ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಭೆಯಲ್ಲಿ ಉಪಸ್ಥಿತರಿದ್ದ ಕೈಗಾರಿಕಾ ಅಸೋಸಿಯೇಶನ್‍ಗಳ ಪದಾಧಿಕಾರಿಗಳು, ಹೆದ್ದಾರಿಯಲ್ಲಿ ಬೈಕಂಪಾಡಿ ಕೈಗಾರಿಕಾ ಪ್ರದೇಶ ತಿರುವಿನಲ್ಲಿ ಹಾಗೂ ಕೂಳೂರು...
ಖ್ಯಾತ ಜಾನಪದ ತಜ್ಞ,ಸಾಹಿತಿ ಅಮೃತ ಸೋಮೇಶ್ವರ ವಿಧಿವಶ
ಮ೦ಗಳೂರು:ಖ್ಯಾತ ಜಾನಪದ ತಜ್ಞ,ಯಕ್ಷಗಾನ ಪ್ರಸಂಗಕರ್ತ, ಸಂಶೋಧಕ,ಕವಿ, ಕಥೆಗಾರ, ವಿಮರ್ಶಕ ,ಅನುವಾದಕ ಹೀಗೆಹಲವು ಕ್ಷೇತ್ರಗಳಲ್ಲಿ ಅನನ್ಯ ಕೊಡುಗೆಯೊಂದಿಗೆಸಾಹಿತ್ಯಲೋಕದಲ್ಲಿ ತನ್ನದೆ ಛಾಪು ಮೂಡಿಸಿರುವ ಅಮೃತ ಸೋಮೇಶ್ವರ( ೮೮) ಅವರು ಶನಿವಾರ ಬೆಳಗ್ಗೆ ನಿಧನ ಹೊ೦ದಿದ್ದಾರೆ. ಅವರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮಂಗಳೂರು ತಾಲೂಕಿನ ಕೋಟೆಕಾರು ಅಡ್ಕದಲ್ಲಿ 1935ರ ಸೆ. 27 ರಂದು ಜನಿಸಿದರು. ತಂದೆ ಚಿರಿಯಂಡ....
ಕಚ್ಚೂರು ಸೊಸೈಟಿಯ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ
ಮಂಗಳೂರು: ಕಚ್ಚೂರು ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ (ಲಿ.), ಬೆಂದೂರ್'ವೆಲ್, ಕಂಕನಾಡಿ, ಮಂಗಳೂರು ಇದರ ಆಡಳಿತ ಮಂಡಳಿಗೆ ನಿರ್ದೇಶಕರ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಜ.7 ರಂದು ಸುಮಸದನ ಮಂಗಳೂರು ಇಲ್ಲಿ ನಡೆಯಬೇಕಾಗಿದ್ದ ಚುನಾವಣೆ ಇರುವುದಿಲ್ಲ ಎಂದು ಸೊಸೈಟಿಯ ಪ್ರಧಾನ ವ್ಯವಸ್ಥಾಪಕಪದ್ಮನಾಭ ಎಂ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಯುವನಿಧಿ : ಜ.8-9ರಂದು ನೋಂದಣಿ ಮೇಳ
ಮಂಗಳೂರು: ಪದವೀಧರರಿಗೆ ರೂ. 3000 ಹಾಗೂ ಡಿಪ್ಲೋಮಾ ಪಡೆದಿರುವವರಿಗೆ ರೂ. 1500 ನಿರುದ್ಯೋಗ ಭತ್ಯೆ ನೀಡುವ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ “ಯುವನಿಧಿ” ಯೋಜನೆಯ ನೋಂದಣಿ ತೀವ್ರಗೊಳಿಸಲು ಜಿಲ್ಲಾಧಿಕಾರಿ ಎಂಪಿ ಮುಲ್ಲೈಮುಗಿಲನ್ ಸೂಚಿಸಿದ್ದಾರೆ.ಅವರು ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ, ದ.ಕ ಜಿಲ್ಲೆಯ ಎಲ್ಲಾ ಪದವಿ ಕಾಲೇಜು ಹಾಗೂ ಡಿಪ್ಲೋಮಾ ಶಿಕ್ಷಣ ಸಂಸ್ಥೆಗಳಲ್ಲಿ ಜನವರಿ...
ಪಿಎಂ ಜನಮನ್ ಅಭಿಯಾನ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಸೂಚನೆ
ಮಂಗಳೂರು:ದುರ್ಬಲ ಬುಡಕಟ್ಟು ಸಮುದಾಯದವರ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಅಭಿಯಾನ (ಪಿಎಂ ಜನಮನ್) ಯೋಜನೆಯಡಿ ಅಭಿವೃದ್ಧಿ ಮಿಷನ್ ಪ್ರಾರಂಭಿಸಲಾಗಿದ್ದು, ಇದರ ಯಶಸ್ವಿಗೆ ಎಲ್ಲ ಅಧಿಕಾರಿಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಕುಮಾರ್ ತಿಳಿಸಿದ್ದಾರೆ.ಅವರು ಈ ಸಂಬಂಧ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ...
ಅನಧಿಕೃತ ಮರಳುಗಾರಿಕೆ: ದೂರು ನೀಡಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಮರಳುಗಾರಿಕೆಗೆಯ ಕಡಿವಾಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.ಅನಧಿಕೃತ ಮರಳುಗಾರಿಕೆಗೆ ಸಂಬಂಧಿಸಿದಂತೆ, ಯಾವುದೇ ದೂರು ನೀಡಬೇಕಾದಲ್ಲಿ ಸಾರ್ವಜನಿಕರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ದೂರವಾಣಿ ಸಂಖ್ಯೆ: 8762339932 ಸಂಪರ್ಕಿಸಬಹುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಅರ್ಜಿ ಆಹ್ವಾನ
ಮಂಗಳೂರು:2023-24ನೇ ಸಾಲಿನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ನೀಡಲಾಗುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅರ್ಹ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ, ಶಿಕ್ಷಣ ಕ್ಷೇತ್ರ, ಸಮಾಜ ಸೇವೆ, ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೈರ್ಯದಿಂದ ಹೋರಾಡಿ ಜೀವಾಪಾಯದಿಂದ ಪಾರು ಮಾಡಿದಂತಹ ಮಹಿಳೆಯರು ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ಜನವರಿ...
ಬ್ಯಾಂಕ್ ಆಫ್ ಬರೋಡ ವತಿಯಿಂದ ಹಸಿರು ಪರಿಸರದ ಕಡೆ ನಮ್ಮ ನಡೆ ಕಾರ್ಯಕ್ರಮ
ಮ೦ಗಳೂರು: ಹಸಿರು ಜಗತ್ತು ಹಾಗೂ ಪ್ರಕಾಶಮಾನ ಭವಿಷ್ಯ ಎಂಬ ಗುರಿಯೊಂದಿಗೆ ಹಸಿರು ಪರಿಸರ ಸಂರಕ್ಷಣೆ ಮಾಡುವ ಕಾಳಜಿಯೊಂದಿಗೆ ಬ್ಯಾಂಕ್ ಒಫ್ ಬರೋಡ ವತಿಯಿಂದ ಗಿಡಗಳ ನೆಡುವಿಕೆ ಹಾಗೂಸಂರಕ್ಷಣೆ ಕಾರ್ಯಕ್ರಮ ಸೋಮೇಶ್ವರದ ಪರಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.ಬ್ಯಾಂಕ್ಆಫ್ ಬರೋಡಾದ ಪ್ರಧಾನ ವ್ಯವಸ್ಥಾಪಕರು ಹಾಗೂ ವಲಯ ಮುಖ್ಯಸ್ಥರಾದ ಗಾಯತ್ರಿ. ಆರ್ ಅವರು ಹಣ್ಣಿನ ಗಿಡಗಳನ್ನು ಹಸ್ತಾಂತರ...



