ಅಗಲ್ಪಾಡಿಯಲ್ಲಿ ಧನ್ವಂತರಿ ಹೋಮ ಸಂಪನ್ನ
ಅಗಲ್ಪಾಡಿ : ಕಾಸರಗೋಡು ಜಿಲ್ಲೆಯ ಉಬ್ರಂಗಳ ಗ್ರಾಮದ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ವೇದಮಾತಾ ಟ್ರಸ್ಟ್ ಅಗಲ್ಪಾಡಿ ವತಿಯಿಂದ ನಡೆಯುವ ಋಕ್ ಸಂಹಿತಾ ಯಾಗ, ಸಹಸ್ರ ಚಂಡಿಕಾ ಯಾಗ ಪ್ರಯುಕ್ತ ಶನಿವಾರ ಧನ್ವಂತರಿ ಹೋಮ ನಡೆಯಿತು.
ಮುಂಜಾನೆ ಧನ್ವಂತರಿ ಹೋಮ ಪ್ರಾರಂಭವಾಗಿ ಬೆಳಗ್ಗೆ 11 ಗಂಟೆಗೆ ಪೂರ್ಣಾಹುತಿ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಭಿಜ್ಞಾ...
ಮಾ.25: ಕುಲಶೇಖರ ಹೋಲಿ ಕ್ರಾಸ್ ಚರ್ಚಿನಲ್ಲಿ “ಶಿಲುಬೆಯ ಹಾದಿ” ಕಾಯ೯ಕ್ರಮ
ಮಂಗಳೂರು: ನಗರದ ಕುಲಶೇಖರದ ಹೋಲಿ ಕ್ರಾಸ್ ಚರ್ಚಿನಲ್ಲಿ ಮಾ.25 ರ ಸಂಜೆ 4.30 ಗಂಟೆಗೆ ನಗರದ ಸಿಟಿ ವಲಯದ 12 ಚರ್ಚುಗಳ ಸುಮಾರು 200ಕ್ಕೂ ಮಿಕ್ಕಿ ಕಲಾವಿದರು ಹಾಗೂ ನಿರೂಪಕರಿಂದ “ಶಿಲುಬೆಯ ಹಾದಿ” (ಖುರ್ಸಾಚಿ ವಾಟ್) ಕಾರ್ಯಕ್ರಮ ನಡೆಸಲಾಗುವುದು ಎಂದು ಕಾರ್ಡೆಲ್ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಪಾ| ಕ್ಲಿಫರ್ಡ್ ಫೆರ್ನಾಂಡಿಸ್ ತಿಳಿಸಿದ್ದಾರೆ.ಮಂಗಳೂರಿನ...
ಬಂಟ್ಸ್ ಹಾಸ್ಟೇಲ್ : ಸಾರ್ವಜನಿಕ ಶ್ರೀಗಣೇಶೋತ್ದವ
ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಶ್ರೀಗಣೇಶೋತ್ದವದ ಬಂಟ್ಸ್ ಹಾಸ್ಟೇಲ್ ಓಂಕಾರ ನಗರಕ್ಕೆ ಶರವು ಬಳಿಯ ಶ್ರೀ ರಾಧಾಕೃಷ್ಣ ದೇವಸ್ಥಾನದಿಂದ ಸಿದ್ದಿವಿನಾಯಕ ದೇವರ ವಿಗ್ರಹವನ್ನು ಬಂಟ್ಸ್ ಹಾಸ್ಟೇಲ್ ಓಂಕಾರ ನಗರಕ್ಕೆ ತರಲಾಯಿತು.ಸಿದ್ದಿ ವಿನಾಯಕ ಪ್ರತಿಷ್ಢಾನದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಬಂಟರ ಯಾನೆ...
ಶಿಬರೂರು ಶ್ರೀ ಕೊಡಮಾಣಿತ್ತಾಯ ಕ್ಷೇತ್ರ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತ
ಸುರತ್ಕಲ್: ಶಿಬರೂರುನಲ್ಲಿ ಇದೇ ತಿಂಗಳ ಎ.22ರಿಂದ ಆರಂಭಗೊಳ್ಳುವ ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತವನ್ನು ತಂತ್ರಿವರೇಣ್ಯ ವೇದಮೂರ್ತಿ ವೇದವ್ಯಾಸ ತಂತ್ರಿಗಳ ಪೌರೋಹಿತ್ಯದಲ್ಲಿ ಧಾರ್ಮಿಕ ಮುಂದಾಳು ಶೆಡ್ಡೆ ಮಂಜುನಾಥ ಭಂಡಾರಿ ನೆರವೇರಿಸಿದರು.ಶಿಬರೂರು ಶ್ರೀ ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವಸ್ಥಾನದಲ್ಲಿ ಎ.26 ರಂದು ಬ್ರಹ್ಮಕುಂಭಾಭಿಷೇಕ ಮತ್ತು ನಾಗಮಂಡಲ ನಡೆಯಲಿದೆ. ಬಳಿಕ ಎ.30ರವರೆಗೆ ವಿಶೇಷ ಜಾತ್ರಾ ಮಹೋತ್ಸವ...
ಡಿ. 3 : ಭಟ್ರಕುಮೇರು ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ದ್ವಿತೀಯ ವರ್ಷದ ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆ
ಮಂಗಳೂರು : ನಗರದ ಪದವಿನಂಗಡಿ ಸಮೀಪದ ಭಟ್ರಕುಮೇರು ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ಸ್ವಾಮಿ ಕೊರಗ ತನಿಯ ದೈವದ ದ್ವಿತೀಯ ವರ್ಷದ ಪ್ರತಿಷ್ಠಾವರ್ಧಂತಿಹಾಗೂ ಕೋಲ ಸೇವೆಯು ಸಾನಿಧ್ಯದ ಯಜಮಾನರು ಹಾಗೂ ದೈವಾರಾಧಕ ಭಾಸ್ಕರ ಬಂಗೇರ ಅವರ ನೇತೃತ್ವದಲ್ಲಿ ಡಿ. 3ಅದಿತ್ಯವಾರದಂದು ಜರುಗಲಿದೆ.
ಬೆಳಿಗ್ಗೆ 10 ಗಂಟೆಗೆ ತಂತ್ರಿಗಳಾದ ರವಿ ಆನಂದ ಶಾಂತಿ ಆಡುಮರೋಳಿ ಅವರ ಮಾರ್ಗದರ್ಶನದಲ್ಲಿ...
ನ.30: ಶ್ರೀ ಆದಿ ಕ್ಷೇತ್ರ ಜಾರದಲ್ಲಿ ನಿಧಿ ಕುಂಭ ಮತ್ತು ಶಿಲಾನ್ಯಾಸ ಕಾರ್ಯಕ್ರಮ
ಮಂಗಳೂರು: ವಾಮಂಜೂರು ಮೂಡುಶೆಡ್ಡೆಯಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಜಾರದಲ್ಲಿ ನ. 30ರಂದು ಬೆಳಿಗ್ಗೆ 8 ಗಂಟೆಯಿಂದ ಜಾರಂದಾಯ ಬಂಟ ಪರಿವಾರ ಸಾನಿಧ್ಯ ಮತ್ತು ಕ್ಷೇತ್ರ ಕಲ್ಲುರ್ಟಿ ಸಾನಿಧ್ಯಗಳ ನಿಧಿ ಕುಂಭ ಮತ್ತು ಶಿಲಾನ್ಯಾಸ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಲಿದೆ ಎಂದು ದೈವಜ್ಞ ಪ್ರಕಾಶ ವಿ. ಹೊಳ್ಳ ಶಕ್ತಿನಗರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು."ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆಗಳು...
ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಉಗ್ರಾಣ ಮುಹೂರ್ತ, ಧಾರ್ಮಿಕ ಸಭೆ
ಸುರತ್ಕಲ್: ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಎ.26ರಂದು ನಡೆಯಲಿರುವ ಬ್ರಹ್ಮಕುಂಭಾಭಿಷೇಕ ಮತ್ತು ನಾಗಮಂಡಲ ಹಾಗೂ ವಿಶೇಷ ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಉಗ್ರಾಣ ಮುಹೂರ್ತ ಕಾರ್ಯಕ್ರಮವು ತಂತ್ರಿವರೇಣ್ಯ ವೇದಮೂರ್ತಿ ವೇದವ್ಯಾಸ ತಂತ್ರಿಗಳ ಪೌರೋಹಿತ್ಯದಲ್ಲಿ ಸೋಮವಾರ ಬೆಳಗ್ಗೆ ನಡೆಯಿತು.ಪ್ರಾರಂಭದಲ್ಲಿ ಕೊಡಮಣಿತ್ತಾಯ ದೈವಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ...
ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಚಿನ್ನದ ಪಲ್ಲಕ್ಕಿ ಸಮರ್ಪಣೆ
ಟೀಲು: ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತ ಚಿನ್ನದ ಪಲ್ಲಕ್ಕಿಯನ್ನು ಕಟೀಲಿನಿಂದ ವೈಭವದ ಮೆರವಣಿಗೆಯಲ್ಲಿ ಕೊಂಡೊಯ್ದು ಶಿಬರೂರು ದೈವಸ್ಥಾನದಲ್ಲಿ ಸಮರ್ಪಿಸಲಾಯಿತು.ಜೀರ್ಣೋದ್ಧಾರಗೊಂಡ ದೈವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು, ನೂತನ ಚಿನ್ನ ಪಲ್ಲಕ್ಕಿಯನ್ನು ಭಕ್ತಾದಿಗಳ ಸಹಕಾರದಿಂದ ನಿರ್ಮಿಸಲಾಗಿದೆ. ಸುಮಾರು ಎರಡು ಕೆಜಿಯಷ್ಟು ಬಂಗಾರವನ್ನು ಭಕ್ತಾದಿಗಳೇ ನೀಡಿದ್ದಾರೆ.ಕಟೀಲಿನಿಂದ ಶಿಬರೂರಿಗೆ ನಡೆದ ಮೆರವಣಿಗೆಗೆ ಪಲಿಮಾರು ಶ್ರೀ...
ಏ. 3ರಂದು ಅಗಲ್ಪಾಡಿಯಲ್ಲಿ ಋಕ್ ಸಂಹಿತಾ ಯಾಗ, ಸಹಸ್ರ ಚಂಡಿಕಾಯಾಗ ಪೂರ್ಣಾಹುತಿ
ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿಯ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಯಾಗದ ಅಂಗವಾಗಿ ಏ.3ರಂದು ಬೆಳಗ್ಗೆ ಋಕ್ ಸಂಹಿತಾ ಯಾಗ ಹಾಗೂ ಸಹಸ್ರ ಚಂಡಿಯಾಗ ಮಹಾಪೂರ್ಣಾಹುತಿ, ಪೂಜೆ ನಡೆಯಲಿದೆ.
ಮುಂಜಾನೆ 5 ಗಂಟೆಗೆ ಅಗ್ನಿ ಪ್ರತಿಷ್ಠೆ ನಡೆದು ಸಹಸ್ರ ಚಂಡಿಕಾಯಾಗ ಪ್ರಾರಂಭವಾಗಲಿದೆ. ಬೆಳಗ್ಗೆ 10 ಗಂಟೆಗೆ ಋಕ್ ಸಂಹಿತಾ...
ಫೆ.22- ಮಾ.1: ವೇಣೂರುನಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವ
ವೇಣೂರು: ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ಮಹೋತ್ಸವ ಫೆ.22ರಿ೦ದ ಆರಂಭಗೊಂಡು ಮಾ.1ರ ವರೆಗೆ ಜರಗಲಿದೆ .
ಮಹಾಮಸ್ತಕಾಭಿಷೇಕದ ಈ 9 ದಿನಗಳಲ್ಲೂ ಸಂಜೆ ಧಾರ್ಮಿಕ ಸಭೆಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡು ಸಭಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿಯುತ್ತವೆ. ಸಂಜೆ 5.30 ಕ್ಕೆ ಮಹಾಮಸ್ತಕಾಭಿಷೇಕ ಆರಂಭಗೊಳ್ಳುತ್ತದೆ. ಅಗೋದಕ ಮೆರವಣಿಗೆ, ಜಲ,ಕಷಾಯ,ಕಲ್ಕಚೂರ್ಣ, ಅರಶಿನ, ಶ್ರೀಗಂಧ, ಚಂದನ,ಅಷ್ಟಗಂಧ, ಹಾಲು,ಎಳನೀರು,...