27.2 C
Karnataka
Friday, May 1, 2026

ಕಾಸ್ಕ್ ಸೆಂಟಿನರಿ ಟ್ರಸ್ಟ್ ಸ್ಕಾಲರ್’ಶಿಪ್ ವಿತರಣೆ

ಮ೦ಗಳೂರು: ಸೇಂಟ್ ಅಗ್ನೆಸ್ ಕಾಲೇಜಿನ ಸೆಂಟಿನರಿ ಬ್ಲಾಕ್’ನಲ್ಲಿ, ಕಾಸ್ಕ್ ಸೆಂಟಿನರಿ ಟ್ರಸ್ಟ್ ವತಿಯಿ೦ದ 307 ಯೋಗ್ಯ ವಿದ್ಯಾರ್ಥಿಗಳಿಗೆ 30 ಲಕ್ಷ ರೂಪಾಯಿಗಳಿಗೂ ಹೆಚ್ಚು ಮೊತ್ತದ ಸ್ಕಾಲರ್’ಶಿಪ್ ನೀಡಲಾಯಿತು.
ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅಧ್ಯಕ್ಷತೆ ವಹಿಸಿದ್ದರು. ದಾನಿ ಮೈಕಲ್ ಡಿಸೋಜಾ ಮತ್ತು ಸೇಂಟ್ ಅಗ್ನೆಸ್ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ವೆನಿಸ್ಸಾ ಗೌರವ ಅತಿಥಿಗಳಾಗಿದ್ದರು. ಸ್ಕಾಲರ್’ಶಿಪ್ ಪಡೆದ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಕಾಸ್ಕ್ ಸೆಂಟಿನರಿ ಟ್ರಸ್ಟಿನ ದಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
2014ರಿಂದಲೂ, ಕಾಸ್ಕ್ ಸೆಂಟಿನರಿ ಟ್ರಸ್ಟ್ ಸಹಾಯ ಮಾಡುತ್ತಿದೆ. ಧರ್ಮ, ಭಾಷೆ, ಅಂಕಗಳು ಅಥವಾ ಯೋಗ್ಯತೆಯನ್ನು ಪರಿಗಣಿಸದೆ, ಅರ್ಜಿದಾರರ ಆರ್ಥಿಕ ಸ್ಥಿತಿಯನ್ನು ಮಾತ್ರ ಗಮನದಲ್ಲಿಟ್ಟು ಸ್ಕಾಲರ್’ಶಿಪ್ ನೀಡಲಾಗುತ್ತಿದೆ. ಪ್ರಯೋಜನವನ್ನು ಪಡೆದವರಲ್ಲಿ ದಿನಗೂಲಿಗಳು, ರಿಕ್ಷಾ ಚಾಲಕರು ಮತ್ತು ಬೀದಿ ಅಂಗಡಿಗಾರರ ಮಕ್ಕಳು ಸೇರಿದ್ದಾರೆ. ಅನೇಕ ಮಕ್ಕಳು, ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದರೆ, ಅನೇಕ ಪೋಷಕರು ನಿರುದ್ಯೋಗಿಗಳೂ ಆಗಿದ್ದಾರೆ.

307 ಪ್ರಯೋಜನಾರ್ಥಿಗಳಲ್ಲಿ 162 ಹುಡುಗಿಯರು ಹಾಗೂ ಸುಮಾರು ಶೇ.40 ವಿದ್ಯಾರ್ಥಿಗಳುಗ್ರಾಮೀಣ ಪ್ರದೇಶದವರಾಗಿದ್ದಾರೆ. ಈ ವಿದ್ಯಾರ್ಥಿಗಳು 70ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಗೆ ಸೇರಿದವರಾಗಿದ್ದು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಜೊತೆಗೆ ನರ್ಸಿಂಗ್, ಇಂಜಿನಿಯರಿಂಗ್ ಮತ್ತು ಪ್ಯಾರಾ-ಮೆಡಿಕಲ್ ಕೋರ್ಸ್ಗಳ ವಿದ್ಯಾರ್ಥಿಗಳೂ ಸೇರಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles