ಮಂಗಳೂರು : ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ಮಂಗಳೂರಿನ ಡಾ.ಬಿ.ಸಚ್ಚಿದಾನಂದ ರೈ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ʼ

ವಿಜಯಪುರದಲ್ಲಿ ನಡೆದ ಅಸೋಸಿಯೇಶನ್‌ನ ಸುವರ್ಣ ಮಹೋತ್ಸವ ಸಮ್ಮೇಳನದಲ್ಲಿ ಮುಂದಿನ ಒಂದು ವರ್ಷ ಅವಧಿಗೆ ಅವರು ಅಧಿಕಾರ ವಹಿಸಿಕೊಂಡರು. ರಾಜ್ಯದ ೨,೫೦೦ಕ್ಕೂ ಅಧಿಕ ಮೂಳೆ ಚಿಕಿತ್ಸಾ ಶಸ್ತ್ರ ಚಿಕಿತ್ಸಕರು ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಶನ್‌ನ ಸದಸ್ಯತ್ವ ಹೊಂದಿದ್ದಾರೆ.


