24.8 C
Karnataka
Thursday, April 30, 2026

ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿ೦ದ ಹಾಸನ–ಬಂಟವಾಳ ರೈಲು ವಿಭಾಗಗಳಲ್ಲಿ ಪರಿಶೀಲನೆ

ಮ೦ಗಳೂರು: ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್ ಅವರು ಇಂದು ಹಾಸನ–ಸಕಲೇಶಪುರ, ಸಕಲೇಶಪುರ–ಸುಬ್ರಹ್ಮಣ್ಯ ರಸ್ತೆ ಮತ್ತು ಸುಬ್ರಹ್ಮಣ್ಯ ರಸ್ತೆ–ಬಂಟವಾಳ ಮಾರ್ಗಗಳವರೆಗೆ ತಪಾಸಣೆ ನಡೆಸಿದರು.

ಈ ತಪಾಸಣೆಯ ಉದ್ದೇಶವು ಮಾರ್ಗದ ಮೇಲಿರುವ ಹಳೆಯದಾದ ಟ್ರಾಕ್ ಮೂಲಸೌಕರ್ಯ, ಸಂಜ್ಞಾ ವ್ಯವಸ್ಥೆ (ಸಿಗ್ನಲಿಂಗ್ ಸಿಸ್ಟಮ್), ಭದ್ರತೆ ಮತ್ತು ನಿರ್ವಹಣಾ ಮಾನದಂಡಗಳನ್ನು ಪರಿಶೀಲಿಸುವುದಾಗಿತ್ತು. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ ಘಾಟ್ ವಿಭಾಗದಲ್ಲಿ ಟ್ರ್ಯಾಕ್ ನಿಯತಾಂಕಗಳು, ಸೇತುವೆಗಳು, ವಕ್ರಗಳು ಮತ್ತು ಇಳಿಜಾರುಗಳ ಬಗ್ಗೆ ವಿಶೇಷ ಗಮನ ನೀಡಲಾಯಿತು.

ಅಮೃತ ಭಾರತ ನಿಲ್ದಾಣ ಯೋಜನೆಯ ಅಡಿಯಲ್ಲಿ ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ ಮತ್ತು ಬಂಟವಾಳ ರೈಲು ನಿಲ್ದಾಣಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ಕೂಡ ಡಿಆರ್ ಎಮ್ ಪರಿಶೀಲಿಸಿದರು. ಈ ಯೋಜನೆಯು ಪ್ರಯಾಣಿಕರಿಗೆ ಉತ್ತಮ ಸೌಲಭ್ಯ, ನಿಲ್ದಾಣಗಳ ಮೇಲ್ದರ್ಜೆ ಮತ್ತು ಆಕರ್ಷಕ ವಾತಾವರಣವನ್ನು ಒದಗಿಸುವ ಉದ್ದೇಶವಾಗಿದೆ.

ಮುದಿತ್ ಮಿತ್ತಲ್ ಅವರು ಸ್ಥಳದಲ್ಲಿರುವ ಇಂಜಿನಿಯರಿಂಗ್ ತಂಡಗಳೊಂದಿಗೆ ಸಂವಾದ ನಡೆಸಿದರು. ಕಾಮಗಾರಿಗಳು ನಿಗದಿಪಡಿಸಿದ ಸಮಯಕ್ಕೆ ಪೂರ್ಣಗೊಳ್ಳುವಂತೆ, ಗುಣಮಟ್ಟ ಮತ್ತು ಭದ್ರತಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಅವರ ಜೊತೆ ಗತಿಶಕ್ತಿ ಘಟಕದ ಮುಖ್ಯ ಯೋಜನಾ ವ್ಯವಸ್ಥಾಪಕರಾದ ಆನಂದ್ ಭಾರತಿ ಹಾಗೂ ಇತರ ಹಿರಿಯ ವಿಭಾಗೀಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles