ಮ೦ಗಳೂರು: ನಗರದ ಕದ್ರಿ, ಲೋಬೊ ಲೇನ್ ಎಂಬಲ್ಲಿ ಮನೆಯೊ೦ದರಲ್ಲಿ ಕಾಯಾ೯ಚರಿಸುತ್ತಿದ್ದ ನಕಲಿ ವೈನ್ ತಯಾರಿ ಅಡ್ಡೆಗೆ ಮೇಲೆ ದಾಳಿ ನಡೆಸಿರುವ ಅಬಕಾರಿ ದಳ 238.500 ಲೀಟರ್ ನಕಲಿ ವೈನ್ ಹಾಗೂ1,500 ಲೀಟರ್ ವೈನ್ ತಯಾರಿಸುವ ಕೊಳೆಯನ್ನು ವಶಪಡಿಸಿಕೊ೦ಡಿದ್ದಾರೆ. ಆರೋಪಿ ಮೈಕಲ್, ಬ್ಲೈಸ್ ಮಿನೀಜಸ್ ಎಂಬುವನನ್ನು ಬ೦ಧಿಸಲಾಗಿದೆ.

ಆರೋಪಿಯ ಮನೆಯಿ೦ದ 3.180 ಲೀಟರ್ ಮದ್ಯ ಹಾಗೂ ನಕಲಿ ವೈನ್ ತಯಾರಿಸುವ ಸಲಕರಣೆಗಳನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ. ಸೊತ್ತಿನ ನ ಒಟ್ಟು ಅಂದಾಜು ಮೌಲ್ಯ 5,57,690 ರೂ.- ಅಗಿರುತ್ತದೆ.
ಮಂಗಳೂರು ವಿಭಾಗ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನ ಹಾಗೂ ದ.ಕ.ಜಿಲ್ಲೆ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಂತೆ, ಅಬಕಾರಿ ಉಪ ಅಧೀಕ್ಷಕರು ಮಂಗಳೂರು ಉಪ ವಿಭಾಗ-1, ಮತ್ತು ಮಂಗಳೂರು, ಅಬಕಾರಿ ನಿರೀಕ್ಷರರು, ತಲಪಾಡಿ ತನಿಖಾ ಠಾಣೆ ಯ ಅಬಕಾರಿ ನಿರೀಕ್ಷಕರು ಮತ್ತು ಮಂಗಳೂರು ದಕ್ಷಿಣ ವಲಯ -1 ರ ಅಬಕಾರಿ ನಿರೀಕ್ಷಕರವರ ನೇತೃತ್ವದಲ್ಲಿ ವಲಯದ ಅಬಕಾರಿ ಉಪ ನಿರೀಕ್ಷಕರು-1 ರವರು ಸಿಬ್ಬಂದಿಗಳೊಂದಿಗೆ ಸೆ.22 ರಂದು ಮನೆಯ ಮೇಲೆ ದಾಳಿ ನಡೆಸಿದ್ದರು. ಆರೋಪಿಯನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಲಾಗಿದೆ.


