25.2 C
Karnataka
Sunday, May 19, 2024

“ಗಬ್ಬರ್ ಸಿಂಗ್” ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

ಮಂಗಳೂರು: ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ಚಂದ್ರಶೇಖರ ನಾನಿಲ್, ನಾಗೇಶ್ ಪೂಜಾರಿ ಅರ್ಪಿಸುವ ಸತೀಶ್ ಪೂಜಾರಿ ಬಾರ್ಕೂರು ನಿರ್ಮಾಣದ “ಗಬ್ಬರ್ ಸಿಂಗ್” ತುಳು ಚಲನ ಚಿತ್ರ ಮಂಗಳೂರಿನ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ತೆರೆಕಂಡಿದೆ.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಟ್ರಸ್ಟಿ ಎಂ ಶೇಖರ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಚಲನ ಚಿತ್ರಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿ ನಿರ್ಮಾಪಕ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ ತುಳು ಸಿನಿಮಾ ತೆರೆಕಾಣದೆ ಕೆಲವು ಸಮಯ ಆಗಿದೆ. ಬೇಸಿಗೆ ಕಾಲದಲ್ಲಿ ತರೆಕಾಣುತ್ತಿರುವ ಗಬ್ಬರ್ ಸಿಂಗ್ ಸಿನಿಮಾ ಹಾಸ್ಯಭರಿತವಾಗಿದ್ದು ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ಒದಗಿಸಿದೆ. ಭೋಜಾರಾಜ್ ವಾಮಂಜೂರು ಅವರ ಹಾಸ್ಯಕ್ಕೆ ಒತ್ತು ಕೊಟ್ಟ ಪಾತ್ರ ಮತ್ತು ಗಿರೀಶ್ ಶೆಟ್ಟಿಯವರ ಖಡಕ್ ವಿಲನ್ ಪಾತ್ರ, ನಾಯಕ ಶರಣ್ ಶೆಟ್ಟಿ, ನಾಯಕಿ ವೆನ್ಸಿಟಾ ಡಯಾಸ್ ಪಾತ್ರಗಳು ಗಮನ ಸೆಳೆಯುತ್ತದೆ ಎಂದರು.


ಸಮಾರಂಭದಲ್ಲಿ ಡಾ ಮೆಲ್ವಿನ್ ಡಿ ಸೋಜಾ, ರಂಜಿತಾ ಹೇಮನಾಥ ಶೆಟ್ಟಿ ಕಾವು, ಭೋಜರಾಜ ವಾಮಂಜೂರು, ತುಳು ಚಲನ ಚಿತ್ರನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್, ಉದ್ಯಮಿ ಗಿರೀಶ್ ಎಂ ಶೆಟ್ಟಿಕಟೀಲ್, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಮೋಹನ್ ಕೊಪ್ಪಲ, ತಮ್ಮಲಕ್ಷ್ಮಣ, ಮಧು ಸುರತ್ಕಲ್, ಚಂದ್ರಶೇಖರ ನಾನಿಲ್ ಹಳೆಯಂಗಡಿ, ಜಯಾನಂದ ಅಮೀನ್, ನಿರ್ಮಾಪಕ ಸತೀಶ್ ಪೂಜಾರಿ ಬಾರ್ಕೂರು, ನಟ ಶರಣ್ ಶೆಟ್ಟಿ, ನಟಿ ವೆನ್ಸಿಟಾ ಡಯಾಸ್, ರಾಹುಲ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು. ಲಕ್ಷ್ಮೀಶ ಸುವರ್ಣ ಕಾರ್ಯಕ್ರಮ‌ ನಿರ್ವಹಿಸಿದರು
ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಸಿನಿಪೊಲೀಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರ ಮಂದಿರಗಳಲ್ಲಿ”ಗಬ್ಬರ್ ಸಿಂಗ್” ಸಿನಿಮಾ ತೆರೆ ಕಂಡಿದೆ.
ಗಬ್ಬರ್ ಸಿಂಗ್ ತುಳು ಸಿನಿಮಾ ವಿಭಿನ್ನ ಕತೆಯನ್ನೊಳಗೊಂಡಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಕತೆಯನ್ನು ಹೆಣೆಯಲಾಗಿದೆ. ಉತ್ತಮ‌ ಕತೆ, ನವಿರಾದ ಹಾಸ್ಯದೊಂದಿಗೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫೈಟ್ಸ್ ಇದೆ. ಸಿನಿಮಾಕ್ಕೆ ಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಸಿನಿಮಾಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ನಟನಾಗಿ ಶರಣ್ ಶೆಟ್ಟಿ ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದಾಗ ಮತ್ತೆ ಶಾಂತಿ ನೆಲೆಸುವಂತೆ ಮಾಡುವ ಖಡಕ್ ಅಧಿಕಾರಿ ಪಾತ್ರದಲ್ಲಿ ಶರಣ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
“ಗಬ್ಬರ್ ಸಿಂಗ್” ಆ್ಯಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್ ಆಗಿದೆ. ಸಿನಿಮಾ ಕತೆ ಚಿತ್ರಕತೆ ಸತೀಶ್ ಪೂಜಾರಿ ಬಾರ್ಕೂರ್. ಮಧು ಸುರತ್ಕಲ್ ಸಂಭಾಷಣೆ.
ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಾಯಿಕೃಷ್ಣ, ಉಮೇಶ್ ಮಿಜಾರ್, ರವಿರಾಮ ಕುಂಜ, ಗಿರೀಶ್ ಎಂ. ಶೆಟ್ಟಿ ಕಟೀಲ್, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್, ಉದಯ ಆಳ್ವ ಇಡ್ಯಾ, ಸಂದೀಪ್ ಭಕ್ತ, ಕಿರಣ್ ಮಲ್ಪೆ, ಪೂರ್ಣಿಮಾ ಶೆಟ್ಟಿ, ಪವಿತ್ರ ಶೆಟ್ಟಿ,ಚಂದ್ರಹಾಸ ಶೆಟ್ಟಿ ಮಾಣಿ, ಸಂಪತ್ ಲೋಬೋ, ಆಶಾ ಶೆಟ್ಟಿ ಶಿಬರೂರು, ಲಹರಿ ಶೆಟ್ಟಿ ಪಡ್ರೆ, ಶಿಲ್ಪಾ ಶೆಟ್ಟಿ, ಭವ್ಯಾ ಶೆಟ್ಟಿ ಸುರತ್ಕಲ್ ಸಂತೋಷ್, ಚಂದ್ರಹಾಸ ಶೆಟ್ಟಿ ಕಪ್ಪೆಟ್ಟು, ಫ್ರಾಂಕಿ ಕೊಳಲಗಿರಿ, ಉಮೇಶ್ ಶೆಟ್ಟಿ ಹಾವಂಜೆ, ಬೇಬಿ ಆಧ್ಯಾ ಉಡುಪಿ ಮೊದಲಾದವರಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles