25.1 C
Karnataka
Monday, June 15, 2026

ಮಾನವೀಯ ಸೇವೆಗೆ ರೆಡ್‌ಕ್ರಾಸ್ ಸದಾ ಬದ್ಧ

ಮಂಗಳೂರು : ಮಾನವೀಯ ಸೇವೆಯೇ ರೆಡ್‌ಕ್ರಾಸ್ ಸಂಸ್ಥೆಯ ಧ್ಯೇಯವಾಗಿದ್ದು ರಕ್ತನಿಧಿ ಸೇವೆ, ಅಗತ್ಯ ಇರುವ ವಿಕಲ ಚೇತನರಿಗೆ ಗಾಲಿಕುರ್ಚಿ ವಿತರಣೆ, ಉಚಿತ ವೈದ್ಯಕೀಯ ಶಿಬಿರ ಮುಂತಾದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಅಶಕ್ತರ ಸೇವೆಗೆ ದ.ಕ.ಜಿಲ್ಲಾ ಸದಾ ರೆಡ್‌ಕ್ರಾಸ್ ಸಂಸ್ಥೆ ಸದಾ ಬದ್ಧವಾಗಿದೆ ಎಂದು ದ.ಕ.ಜಿಲ್ಲಾ ರೆಡ್‌ಕ್ರಾಸ್
ಸಮಿತಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪದವಿನಂಗಡಿಯ ಮಹಿಳೆಯೋರ್ವರಿಗೆ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರ ವಿನಂತಿ ಮೇರೆಗೆ
ದ.ಕ.ಜಿಲ್ಲಾ ರೆಡ್‌ಕ್ರಾಸ್ ಸಮಿತಿ ವತಿಯಿಂದ ವಿಶೇಷ ಆರಾಮದಾಯಕ ಮಂಚ ವಿತರಿಸಿ ಅವರು ಮಾತನಾಡಿದರು.
ಮಾಜಿ ಮೇಯರ್ ಜಯಾನಂದ ಅಂಚನ್, ರೆಡ್‌ಕ್ರಾಸ್ ಜಿಲ್ಲಾ ಸಮಿತಿಯ ನಿರ್ದೇಶಕ ಪಿ.ಬಿ.ಹರೀಶ್ ರೈ, ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ಪ್ರಮುಖರಾದ ಪ್ರಜ್ವಲ್ ಶೆಟ್ಟಿ, ಹರಿಪ್ರಸಾದ್, ಉಮೇಶ್ ಶೆಟ್ಟಿ, ರವೀಂದ್ರ ಅಮೀನ್, ಸಂಜೀತ್ ಶೆಟ್ಟಿ, ಸರೋಜಿನಿ, ದಿವ್ಯ, ಜಯ ಮೇರಿಹಿಲ್, ಮಾಧವ, ಫಲಾನುಭವಿಯ ತಾಯಿ ಮೀನಾಕ್ಷಿ, ರೆಡ್‌ಕ್ರಾಸ್ ಸಿಬ್ಬಂದಿ
ಗಿರೀಶ್ ಕುಮಾರ್, ಅನಿತಾ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles