24.3 C
Karnataka
Thursday, April 30, 2026

ಪ್ರಯೋಗಾಲಯಗಳಿಗೆ ಆರೋಗ್ಯ ಇಲಾಖೆ ಭೇಟಿ – ಪರಿಶೀಲನೆ

ನಗರದ ವಿವಿದೆಡೆ ಕಾರ್ಯಾಚರಿಸುತ್ತಿದ್ದ ವ್ಯದ್ಯಕೀಯ ಪ್ರಯೋಗಾಲಯಗಳಿಗೆ ಅರೋಗ್ಯ ಇಲಾಖೆ ತಂಡ ಶನಿವಾರ ಭೇಟಿ ನೀಡಿ ಪರಿಶೀಲಿಸಿತು.
ನಗರದ ಹಂಪನಕಟ್ಟೆ ಪರಿಸರದ ವಿವಿಧ ಪ್ರಯೋಗಾಲಯಗಳಿಗೆ ಭೇಟಿ ನೀಡಿದಾಗ ಅಲ್ಲಿನ ಲೈಸನ್ಸ್ ಅವಧಿ ಮುಕ್ತಾಯವಾಗಿ ಮತ್ತು ನಿಯಮಾನುಸಾರ ಕಾರ್ಯನಿರ್ವಾಹಿಸದಿರುವು ದು, ಬಯೋಮೆಡಿಕಲ್ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸದಿರುವ ಪ್ರಕರಣಗಳು ಕಂಡುಬಂದಿದ್ದು, ಇವುಗಳಿಗೆ ನೋಟೀಸ್ ನೀಡಲಾಗಿದೆ.
ದೇರಳಕಟ್ಟೆಯ ಪ್ರಯೋಗಾಲಯವೊಂದು ಯಾವುದೇ ದಾಖಲೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದೆಯೇ ನೋಟೀಸ್ ನೀಡಿ ಸೂಕ್ತ ಪರವಾನಿಗೆಗಳನ್ನು ಪಡೆಯಲು ಸೂಚಿಸಲಾಗಿತ್ತು. ಆದರೂ ಯಾವುದೇ ಪರವಾನಿಗೆ ಇಲ್ಲದೆ ಮುಂದುವರಿದ್ದರಿಂದ ಈ ಪ್ರಯೋಗಾಲಯಕ್ಕೆ ಬೀಗಮುದ್ರೆ ಜಡಿಯಲಾಯಿತು.
ಈ ತಪಾಸಣೆಯಲ್ಲಿ ಜಿಲ್ಲಾ ಅರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಅರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ. ದೀಪಾ ಪ್ರಭು, ಡಾ. ಚಿರಾಗ್ ಮತ್ತಿತರರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles