24.8 C
Karnataka
Thursday, April 30, 2026

ಮಂಗಳೂರು ವಿ.ವಿ ಘಟಕ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಸಂದರ್ಶನ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಿಗೆ ಅಗತ್ಯವಿರುವ ಪದವಿ ಮಟ್ಟದ (Uಉ) ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂದರ್ಶನ ಕೊಣಾಜೆ ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಸಿಂಡಿಕೇಟು ಸಭಾಂಗಣದಲ್ಲಿ ಜುಲೈ 3, 4 ಮತ್ತು 5 ರಂದು ನಡೆಯಲಿದೆ.
ವಿಷಯವಾರು ಸಂದರ್ಶನದ ದಿನಾಂಕ ಮತ್ತು ಸಮಯ:
ಜುಲೈ 3 – ಬೆಳಿಗ್ಗೆ 10 ರಿಂದ 11:45 ರವರೆಗೆ ಕನ್ನಡ, 11:45 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಇಂಗ್ಲಿಷ್, 1 ಗಂಟೆಯಿಂದ 1:30 ರವರೆಗೆ ಹಿಂದಿ, 2:30 ರಿಂದ 2:45 ಸಂಸ್ಕøತ, 2:45 ರಿಂದ 3:45 ಇತಿಹಾಸ, 3:45 ರಿಂದ 5:30 ರವರೆಗೆ ಅರ್ಥಶಾಸ್ತ್ರ.
ಜುಲೈ 4 – ಬೆಳಿಗ್ಗೆ 10 ರಿಂದ 11:45 ರವರೆಗೆ ರಾಜ್ಯಶಾಸ್ತ್ರ, 11:45 ರಿಂದ 11:50 ಸಮಾಜಶಾಸ್ತ್ರ, 11:50 ರಿಂದ 12:30 ಭೂಗೋಳಶಾಸ್ತ್ರ, 12:30 ರಿಂದ 1 ರವರೆಗೆ ಪತ್ರಿಕೋದ್ಯಮ, 1 ರಿಂದ 1:30 ರವರೆಗೆ ದೈಹಿಕ ಶಿಕ್ಷಣ/ಕ್ರೀಡೆ, 2:30 ರಿಂದ 3 ರವರೆಗೆ ಕಂಪ್ಯೂಟರ್ ಸೈನ್ಸ್/ಬಿ.ಸಿ.ಎ, 3 ರಿಂದ 3:10 ಫಿಸಿಕ್ಸ್ , 3:10 ರಿಂದ 4 ರವರೆಗೆ ಕೆಮಿಸ್ಟ್ರಿ, 4 ರಿಂದ 4:30 ರವರೆಗೆ ಮ್ಯಾತ್‍ಮ್ಯಾಟಿಕ್ಸ್, 4:30 ರಿಂದ 5 ರವರೆಗೆ ಬಾಟನಿ, 5 ರಿಂದ 5:10 ರವರೆಗೆ ಪ್ರಾಣಿಶಾಸ್ತ್ರ, 5:10 ರಿಂದ 5:30 ಮೈಕ್ರೋ ಬಯಾಲಜಿ.
ಜುಲೈ 5 – ಬೆಳಿಗ್ಗೆ 10 ರಿಂದ 1:30 ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್, 2:30 ರಿಂದ 3:30 ರವರೆಗೆ ಬಿಬಿಎ (ಟ್ರಾವೆಲ್ &ಟೂರಿಸಂ).
ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು, ಕಡ್ಡಾಯವಾಗಿ ಎಲ್ಲಾ ಮೂಲ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಹಾಜರಾಗಬೇಕು. ಪೂರ್ಣಕಾಲಿಕ ಬೋಧನಾ ಅವಧಿಯನ್ನು ಕಲಾ ಮತ್ತು ವಾಣಿಜ್ಯ ನಿಕಾಯಕ್ಕೆ ವಾರಕ್ಕೆ 16 ಗಂಟೆ ಎಂದು ಹಾಗೂ ವಿಜ್ಞಾನ ನಿಕಾಯಕ್ಕೆ 20 ಗಂಟೆಯೆಂದು ಪರಿಗಣಿಸಲಾಗುತ್ತದೆ. ಪೂರ್ಣಕಾಲಿಕ ಬೋಧನಾ ಅವಧಿ ಇದ್ದಲ್ಲಿ ಮಾಸಿಕ ಗರಿಷ್ಠ ರೂ.40,000 (Uಉಅ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ಮಾತ್ರ) ಮತ್ತು ಯು.ಜಿ.ಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದದವರಿಗೆ ಮಾಸಿಕ ಗರಿಷ್ಟ ರೂ.35,000 ಸಂಭಾವನೆ ಪಾವತಿ ಮಾಡಲಾಗುತ್ತದೆ. ಯು.ಜಿ.ಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ಕಲಾ ಮತ್ತು ವಾಣಿಜ್ಯ ನಿಕಾಯಕ್ಕೆ 16 ಗಂಟೆಗಿಂತ ಕಡಿಮೆ ಕಾರ್ಯಭಾರ/ ವಿಜ್ಞಾನ ನಿಕಾಯಕ್ಕೆ 20 ಗಂಟೆಗಿಂತ ಕಡಿಮೆ ಕಾರ್ಯಭಾರ ಇದ್ದ ಪಕ್ಷದಲ್ಲಿ ಪ್ರತಿ ಗಂಟೆಯ ‘ಬೋಧನಾ ಅವಧಿಗೆ ರೂ. 650 ರಂತೆ ಮತ್ತು ಯು.ಜಿ.ಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದದವರಿಗೆ ಕಲಾ ಮತ್ತು ವಾಣಿಜ್ಯ ನಿಕಾಯಕ್ಕೆ 16 ಗಂಟೆಗಿಂತ ಕಡಿಮೆ ಕಾರ್ಯಭಾರ/ ವಿಜ್ಞಾನ ನಿಕಾಯಕ್ಕೆ 20 ಗಂಟೆಗಿಂತ ಕಡಿಮೆ ಕಾರ್ಯಭಾರ ಇದ್ದ ಪಕ್ಷದಲ್ಲಿ ಪ್ರತಿ ಗಂಟೆಯ ಬೋಧನಾ ಅವಧಿಗೆ ರೂ. 600 ರಂತೆ ಸಂಭಾವನೆ ಪಾವತಿ ಮಾಡಲಾಗುತ್ತದೆ. ವಿಶ್ವವಿದ್ಯಾನಿಲಯವು ವಹಿಸುವ ಇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಬದ್ಧರಿರಬೇಕು. ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ಅಪ್ಲೋಡ್ ಮಾಡಿದ ಅರ್ಜಿ ಹಾಗೂ ಮೂಲದಾಖಲೆಗಳ ಪ್ರತಿಯನ್ನು ಸಂದರ್ಶನ ದಿನದಂದು ಕಡ್ಡಾಯವಾಗಿ ತರಬೇಕು. ಆಯ್ಕೆಯಾದ ಅಭ್ಯರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯದ ಯಾವುದೇ ಘಟಕ ಕಾಲೇಜುಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರಬೇಕು ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles