24.3 C
Karnataka
Thursday, May 21, 2026

ಕೆ.ಪಿ.ಟಿ : ಲ್ಯಾಟರಲ್ ಎಂಟ್ರಿ ಮತ್ತು ವರ್ಕಿಂಗ್‍ಪ್ರೊಫೆಶನಲ್ಸ್ ಡಿಪ್ಲೊಮಾ ಕೋರ್ಸ್ ಪ್ರವೇಶಾತಿಗೆ ಅರ್ಜಿಆಹ್ವಾನ

ಮಂಗಳೂರು: ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್(ಸ್ವಾಯತ್ತತೆ), ಮಂಗಳೂರು ಇಲ್ಲಿ 2026-27ನೇ ಸಾಲಿನಲ್ಲಿ 2 ವರ್ಷಗಳ ಐಟಿಐ/ದ್ವಿತೀಯ ಪಿ.ಯು.ಸಿ(ವಿಜ್ಞಾನ)/ದ್ವಿತೀಯ ಪಿ.ಯು.ಸಿ (ತಾಂತ್ರಿಕ ವಿಷಯಗಳಲ್ಲಿ) ಪಾಸ್ ಆಗಿರುವ ಅರ್ಹ ಅಭ್ಯರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಸ್ಕೀಂ ಮುಖಾಂತರ 2ನೇ ವರ್ಷ / 3ನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸ್‍ಗಳ ಪ್ರವೇಶಾತಿಗೆ ಹಾಗೂ ಒಂದು ವರ್ಷದ ತಾಂತ್ರಿಕ ಕೆಲಸದ ಅನುಭವ ಹೊಂದಿದ್ದು, ಖಾಯಂ ಸೇವೆಯಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಸಕ್ತ ಅಭ್ಯರ್ಥಿಗಳಿಗೆ ವರ್ಕಿಂಗ್ ಪ್ರೊಫೆಶನಲ್ಸ್ ಡಿಪ್ಲೊಮಾ ಕೋರ್ಸ್‍ಗಳಿಗೆ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳ ಮೆರಿಟ್‍ಗನುಗುಣವಾಗಿ ಆಫ್‍ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು. ಅರ್ಹ ಆಸಕ್ತ ಅಭ್ಯರ್ಥಿಗಳು ಈ ಸಂಸ್ಥೆಯಲ್ಲಿ ಸೂಕ್ತ ಮೂಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಮೆರಿಟ್ ಆಧಾರಿತ ಲ್ಯಾಟರಲ್ ಎಂಟ್ರಿ ಮೂಲಕ 2 ವರ್ಷ/3ನೇ ಸೆಮಿಸ್ಟರ್ ಆಫ್‍ಲೈನ್ ಪ್ರವೇಶಾತಿ ಹಾಗೂ ವರ್ಕಿಂಗ್ ಪ್ರೊಫೆಶನಲ್ಸ್ ಡಿಪ್ಲೊಮಾ ಕೋರ್ಸ್‍ಗಳ ಪ್ರವೇಶ ಪ್ರಕ್ರಿಯೆಯ ವಿವಿಧ ಹಂತಗಳ ತಾತ್ಕಾಲಿಕ ವೇಳಾಪಟ್ಟಿ:
ಅರ್ಜಿ ಸಲ್ಲಿಸಲು ಜೂನ್ 6 ಕೊನೆಯ ದಿನ. ಕೆ.ಪಿ.ಟಿ- ಸಿ.ಎ.ಟಿ ಪರೀಕ್ಷಾ ದಿನ ಜೂನ್ 8 ರಂದು ಬೆಳಿಗ್ಗೆ 10, ಕೆಪಿಟಿ ಸಾಮಾನ್ಯ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಯ ಮಾದರಿ ಉತ್ತರ ಪ್ರಕಟಣೆ ಜೂನ್ 8 ರಂದು ಮಧ್ಯಾಹ್ನ 12 ಗಂಟೆಗೆ, ಕೆÀಪಿಟಿ ಸಾಮಾನ್ಯ ಪ್ರವೇಶ ಪರೀಕ್ಷೆ ವಿಷಯಗಳಿಗೆ ಸಂಬಂಧಿತ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಆನ್‍ಲೈನ್ ಅರ್ಜಿ ಸಲ್ಲಿಕೆ ಕೇಂದ್ರಕ್ಕೆ ಭೇಟಿ ನೀಡಿ ಮನವಿಯನ್ನು ಸಲ್ಲಿಸಲು ಜೂನ್ 9 ಅಂತಿಮ ದಿನ. ಕೆ.ಪಿ.ಟಿ- ಸಿ.ಎ.ಟಿ ಪರೀಕ್ಷಾ ಫಲಿತಾಂಶ ಪ್ರಕಟಣೆ ಜೂನ್ 10, ಕೆಪಿಟಿ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶಗಳಿಗೆ ಸಂಬಂಧಿತ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಆನ್‍ಲೈನ್ ಅರ್ಜಿ ಸಲ್ಲಿಕೆ ಕೇಂದ್ರಕ್ಕೆ ಭೇಟಿ ನೀಡಿ ಮನವಿಯನ್ನು ಸಲ್ಲಿಸಲು ಅಂತಿಮ ದಿನ ಜೂನ್ 11, ಕರಡು ಮೆರಿಟ್ ಪಟ್ಟಿ -ಜೂನ್ 12 ಸಂಜೆ 5 ಗಂಟೆ, ಕರಡು ಮೆರಿಟ್ ಪಟ್ಟಿ ಸಂಬಂಧಿತ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಆನ್‍ಲೈನ್ ಅರ್ಜಿ ಸಲ್ಲಿಕೆ ಕೇಂದ್ರಕ್ಕೆ ಭೇಟಿ ನೀಡಿ ಮನವಿಯನ್ನು ಸಲ್ಲಿಸಲು ಅಂತಿಮ ದಿನ ಜೂನ್ 13, ಅಂತಿಮ ಮೆರಿಟ್ ಪಟ್ಟಿ- ಜೂನ್ 15 ಬೆಳಿಗ್ಗೆ 8 ಗಂಟೆ, ಕೌನ್ಸೆಲಿಂಗ್, ಲ್ಯಾಟರಲ್ ಎಂಟ್ರಿ & ವರ್ಕಿಂಗ್ ಪ್ರೊಫೆಶನಲ್ಸ್ – ಜೂನ್ 16, ಕೌನ್ಸೆಲಿಂಗ್ ನಂತರ ಉಳಿಕೆ ಸೀಟುಗಳನ್ನು ಡೀನ್ (ಶೈಕ್ಷಣಿಕ), ಇವರ ಹಂತದಲ್ಲಿಯೇ ಆಫ್‍ಲೈನ್ ಮೂಲಕ ಮೆರಿಟ್ ಹಾಗೂ ರೋಸ್ಟರ್‍ಗನುಗುಣವಾಗಿ ಸೀಟು ಹಂಚಿಕೆ ಮಾಡಲು ಪ್ರಾರಂಭದ ದಿನ ಜೂನ್ 17 ಮತ್ತು ಅಂತಿಮ ದಿನ ಜೂನ್ 24.
ಹೆಚ್ಚಿನ ವಿವರಗಳಿಗೆ ಸಂಸ್ಥೆಯ ಅಧಿಕೃತ ವೆಬ್‍ಸೈಟ್ http://gpt.karnatataka.gov.in/kptmangalor/public/en ಅಥವಾ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ (ಸ್ವಾಯತ್ತತೆ) ಮಂಗಳೂರು ಕಛೇರಿಯ ದೂರವಾಣಿ ಸಂಖ್ಯೆ: 0824-2211636, 3516910 ನ್ನು ಸಂಪರ್ಕಿಸಬಹುದು ಎಂದು ಕೆ.ಪಿ.ಟಿ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles