ಮ೦ಗಳೂರು : ಕೆಎಸ್ ಆರ್ ಟಿಸಿ ಮಂಗಳೂರು ವಿಭಾಗಕ್ಕೆ ಪಿಎ೦-ಇ-ಬಸ್ ಸೇವಾ ಯೋಜನೆಯಡಿಯಲ್ಲಿ 100 ಎಲೆಕ್ಟ್ರಿಕಲ್ ಬಸ್‌ಗಳು ಮಂಜೂರಾಗಿದೆ.
ಈ ಬಸ್‌ಗಳು ಮಂಗಳೂರು ನಗರದಲ್ಲಿ ಕಾರ್ಯಾಚರಿಸಲು ಮಂಗಳೂರಿನ ಪಂಪ್‌ವಲ್‌ನಲ್ಲಿ ಮಹಾನಗರ ಪಾಲಿಕೆಯು ವಶಪಡಿಸಿಕೊಂಡಿರುವ 7 ಎಕರೆ ಜಾಗವನ್ನು ಕ.ರಾ.ರ.ಸಾ.ನಿಗಮಕ್ಕೆ ಉಚಿತವಾಗಿ ಹಸ್ತಾಂತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗು೦ಡೂರಾವ್ ಅವರು ದ.ಕ.ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದಾರೆ.
ಎಲೆಕ್ಟ್ರಿಕಲ್ ಬಸ್‌ಘಟಕ ಹಾಗೂ ವಿಭಾಗೀಯ ಕಾರ್ಯಾಗಾರವನ್ನು ನಿರ್ಮಿಸಲು ಉಳ್ಳಾಲ ತಾಲ್ಲೂಕಿನ ಮುಡಿಪುವಿನ ಬಾಳೆಪುಣಿ ಗ್ರಾಮದ ಸರ್ವೆ ನಂ. 87 ರಲ್ಲಿ ಒಟ್ಟು 9.90 ಎಕರೆ ಪಂಚಾಯತ್‌ನ ಜಮೀನು ಲಭ್ಯವಿದ್ದು, ಈ ಜಾಗವನ್ನು ನಿಯಮಾನುಸಾರ ನಿಗಮಕ್ಕೆ ಉಚಿತವಾಗಿ ನೀಡುವಂತೆ ಅವರು ಸೂಚಿಸಿದ್ದಾರೆ..


