ಮ೦ಗಳೂರು: ಬ್ಯಾಂಕಿಂಗ್’ನಲ್ಲಿ ಹೊಸ ದಿಗಂತಗಳನ್ನು ಅನ್ವೇಷಿಸಲು ಮತ್ತು ಮುಂದಿನ ಹಂತದ ಬೆಳವಣಿಗೆಗೆ ವಿಚಾರ, ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಲು, ಎಂಸಿಸಿ ಬ್ಯಾಂಕ್ ಜುಲೈ 24 ರಂದು ಮಂಗಳೂರಿನ ಅತ್ತಾವರದಲ್ಲಿರುವ ಹೋಟೆಲ್ ಅವತಾರ್‌ನಲ್ಲಿ ‘ಐಡಿಯಾ ಸಮ್ಮಿತ್ 2025’ ಅನ್ನು ಆಯೋಜಿಸಿತ್ತು.
ಸಮ್ಮಿತ್’ನ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೋ ಅವರು ವಹಿಸಿದ್ದರು. ಗಣ್ಯ ಭಾಷಣಕಾರರಲ್ಲಿ ಹೆಸರಾಂತ ಎನ್‌ಆರ್‌ಐ ಉದ್ಯಮಿ ಮತ್ತು ಉದಾರ ದಾನಿ ಮೈಕಲ್ ಡಿಸೋಜಾ, ಎನ್‌ಐಟಿಕೆ ಸುರತ್ಕಲ್‌ನ ನಿವೃತ್ತ ಪ್ರಾಧ್ಯಾಪಕರು ಪ್ರೊ. ಡಾ| ಅಲೋಶಿಯಸ್ ಸಿಕ್ವೇರಾ, ಆರ್‌ಎಂಸಿಆರ್ & ಕಂ., ಪಾಲುದಾರರಾದ ಸಿಎ ಮ್ಯಾಕ್ಸಿಮ್ ಎಂ. ಫೆರ್ನಾಂಡಿಸ್, ಚಾರ್ಟರ್ಡ್ ಅಕೌಂಟೆಂಟ್, ಆರ್ಬಿಟ್ರೇಟರ್ ಮತ್ತು IIM kozhikode ಇದರ ಅತಿಥಿ ಪ್ರಾಧ್ಯಾಪಕ ಪ್ರೊ. ಸಿಎ ಲಾಯ್ನಲ್ ಅರಾನ್ಹಾ ಮತ್ತು ಅನುಭವಿ ಬ್ಯಾಂಕರ್ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಲೆನ್ ಸಿ. ಪಿರೇರಾ ಉಪಸ್ಥಿತರಿದ್ದರು.
ಮಂಗಳೂರಿನ ಬಿಷಪ್ ಪೂಜ್ಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಮತ್ತು ಉಡುಪಿಯ ಬಿಷಪ್ ಪೂಜ್ಯ ಡಾ| ಜೆರಾಲ್ಡ್ ಐಸಾಕ್ ಲೋಬೋ ಅವರು ಉಪಸ್ಥಿತರಿದ್ದ ಗಣ್ಯರೊಂದಿಗೆ ಸಭೆಯನ್ನು ಉದ್ಘಾಟಿಸಿದರು.
ಕಳೆದ ಏಳು ವರ್ಷಗಳಲ್ಲಿ ಎಂಸಿಸಿ ಬ್ಯಾಂಕ್’ನ ಗಮನಾರ್ಹ ಬೆಳವಣಿಗೆ ಮತ್ತು ಕಳೆದ 105 ವರ್ಷಗಳ ಪ್ರಗತಿಯನ್ನು ಪ್ರಸ್ತುತಪಡಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷರು, ನಿರ್ದೇಶಕರು, ಜನರಲ್ ಮ್ಯಾನೇಜರ್, ಡೆಪ್ಯೂಟಿ ಜನರಲ್ ಮ್ಯಾನೇಜರ್, ಹಿರಿಯ ವ್ಯವಸ್ಥಾಪಕರು, ಶಾಖಾ ವ್ಯವಸ್ಥಾಪಕರು, ಬ್ಯಾಂಕ್ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು ಮತ್ತು ಉನ್ನತ ಠೇವಣಿದಾರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಫ್ಲಾಯ್ಡ್ ಡಿಮೆಲ್ಲೋ ನಿರೂಪಿಸಿದರು.


