24.5 C
Karnataka
Thursday, April 30, 2026

ಎಂ.ಸಿ.ಸಿ ಬ್ಯಾಂಕಿನ ಕುಲಶೇಖರ ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮತ್ತು 11ನೇ ಎಟಿಎ೦ ಉದ್ಘಾಟನೆ

ಮ೦ಗಳೂರು: ಗ್ರಾಹಕರ ಅನುಕೂಲಕ್ಕಾಗಿ, ಎಂಸಿಸಿ ಬ್ಯಾಂಕಿನ ಕುಲಶೇಖರ ಶಾಖೆಯನ್ನು ಆ. 17ರಂದು ಮಂಗಳೂರಿನ ಕಲ್ಪನೆಯಲ್ಲಿರುವ ಸ್ಪೆಕ್ಟ್ರಮ್ ಬಿಸಿನೆಸ್ ಸೆಂಟರ್‌ನ ಕೆಳ ಮಹಡಿಯಲ್ಲಿರುವ ಹೊಸದಾಗಿ ಖರೀದಿಸಿದ ಸ್ವಂತ ನಿವೇಶನಕ್ಕೆ ಸ್ಥಳಾಂತರಿಸಲಾಯಿತು.
ಹೊಸ ಕಛೇರಿಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಮಂಗಳೂರಿನ ಬಿಕರ್ನಕಟ್ಟೆಯ ಇನ್ಫೆಂಟ್ ಜೀಸಸ್ ಶ್ರೈನ್‌ನ ನಿರ್ದೇಶಕ ವಂದನೀಯ ಸ್ಟಿಫನ್ ಪಿರೇರಾ, ಒಸಿಡಿ ಅವರು ದೀಪ ಬೆಳಗಿಸುವ ಮೂಲಕ ಪ್ರಾರಂಬಿಸಿದರು.. ಕೊರ್ಡೆಲ್ ಹೋಲಿ ಕ್ರಾಸ್ ಚರ್ಚ್ನ ಧರ್ಮಗುರುಗಳಾದ ವಂದನೀಯ ಕ್ಲಿಫರ್ಡ್ ಫೆರ್ನಾಂಡಿಸ್ ಅವರು ಹೊಸ ಕಛೇರಿಯನ್ನು ಆಶೀರ್ವದಿಸಿದರು.


ಸೇಫ್ ರೂಮ್ ಅನ್ನು ಮುಖ್ಯ ಅತಿಥಿ, ಸಿಸ್ಟರ್ಸ್ ಆಫ್ ದಿ ಲಿಟಲ್ ಫ್ಲವರ್ ಆಫ್ ಬೆಥನಿಯ ಪ್ರೊಕ್ಯುರೇಟರ್ ಸಿ. ಫ್ಲೋಸಿ ಮಿನೆಜಸ್ ಉದ್ಘಾಟಿಸಿದರು. ಎಟಿಎಂ ಸೌಲಭ್ಯವನ್ನು ಮಂಗಳೂರಿನ ವೈಟ್ ಡವ್ಸ್ನ ಸ್ಥಾಪಕಿ ಮತ್ತು ಅಧ್ಯಕ್ಷೆ ಕೊರಿನ್ ರಸ್ಕ್ವಿನ್ಹಾ ಉದ್ಘಾಟಿಸಿದರು. ಮೊದಲ ಎಟಿಎಂ ನಗದು ಹಿಂಪಡೆಯುವಿಕೆಯನ್ನು ಮಂಗಳೂರಿನ ಪ್ರಸಾದ್ ಪ್ರಿಂಟರ್ಸ್ನ ಮಾಲೀಕ ಪ್ರವೀಣ್ ಪತ್ರಾವೊ ನೆರವೆರಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಸರ್ಕಾರಿ ವಕೀಲ ಮತ್ತು ಎಂಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಎಂ.ಪಿ. ನೊರೊನ್ಹಾ, ಎಂಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ವ್ಯಾಲೆಂಟೈನ್ ಡಿಸಿಲ್ವಾ, ಪ್ರೊವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ (ಐಡಿಯಲ್ ಚಿಕನ್) ನ ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ, ಹೋಲಿ ಕ್ರಾಸ್ ಚಚ್ ಕೊರ್ಡೆಲ್‌ನ ಪ್ಯಾರಿಶ್ ಕೌನ್ಸಿಲ್ ಉಪಾಧ್ಯಕ್ಷರಾದ ರುತ್ ಕ್ಯಾಸ್ಟೆಲಿನೊ, ಅವರು ಅತಿಥಿಗಳಾಗಿದ್ದರು, ಮಹಾಪ್ರಬಂಧಕ ಸುನಿಲ್ ಮಿನೇಜಸ್, ಶಾಖಾ ವ್ಯವಸ್ಥಾಪಕಿ ವಿಲ್ಮಾ ಜ್ಯೋತಿ ಸಿಕ್ವೇರಾ ವೇದಿಕೆಯಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಸರ್ಕಾರಿ ವಕೀಲರಾಗಿ ನೇಮಕಗೊಂಡಿದ್ದಕ್ಕಾಗಿ ಎಂ.ಪಿ. ನೊರೊನ್ಹಾ ಅವರನ್ನು ಸನ್ಮಾನಿಸಲಾಯಿತುಆಚರಣೆಯ ಭಾಗವಾಗಿ, ಶಿಕ್ಷಣದಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಗ್ರಾಹಕರ ಮಕ್ಕಳನ್ನು ಸನ್ಮಾನಿಸಲಾಯಿತು. ಸಮಾಜ ಸೇವಾ ಸಂಸ್ಥೆಗಳಾದ ಅವ್ ಮಾರಿಯಾ ಪ್ಯಾಲಿಯೇಟಿವ್ ಕೇರ್, ಸಾನಿಧ್ಯ, ವೈಟ್ ಡವ್ಸ್ ಮತ್ತು ರಿಯಾ ಫೌಂಡೇಶನ್‌ಗೆ ಬ್ಯಾಂಕಿನ ದತ್ತಿ ನಿಧಿಯಿಂದ ತಲಾ ರೂ.50,000/- ಚೆಕ್ ನೀಡಿ ಸನ್ಮಾನಿಸಲಾಯಿತು. ಯುವ ಸಾಧಕರಾದ ವೆನ್ಸಿಟಾ ಡಯಾಸ್, ವಿ.ಜೆ. ಡಿಕ್ಸನ್, ಸಪ್ನಾ ಕ್ರಾಸ್ತಾ ಮತ್ತು ಸೋನಾಲ್ ಮಾಂತೆರೊ ಅವರನ್ನು ಹಾಗೂ ರ‍್ಯಾಂಕ್ ಪಡೆದ ಗ್ರಾಹಕರ ಮಕ್ಕಳನ್ನು ಸನ್ಮಾನಿಸಲಾಯಿತು.
ಹಳೆಯ ಕಟ್ಟಡದ ಮಾಲೀಕಫ್ರಾನ್ಸಿಸ್ ಕುಟಿನ್ಹೋ, ಹೊಸ ಆವರಣದ ನಿರ್ಮಾಣಕಾರ ಅವಲಾನ್ ಪತ್ರಾವೊ, ಅಜಿತ್ ಕುಮಾರ್, ಮತ್ತು ಅರ್ಕಿಟೆಕ್ಟ್ ದೀಪಕ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು.
ನಿರ್ದೇಶಕರಾದ ಎಲ್ರಾಯ್ ಕಿರಣ್ ಕ್ರಾಸ್ಟೊ, ಜೋಸೆಫ್ ಅನಿಲ್ ಪತ್ರಾವೊ, ಜೆ.ಪಿ. ರೋಡ್ರಿಗಸ್, ರೋಶನ್ ಡಿಸೋಜಾ,ಹೆರಾಲ್ಡ್ ಜಾನ್ ಮೊಂತೆರೊ, ಡೇವಿಡ್ ಡಿಸೋಜಾ, ಮೆಲ್ವಿನ್ ವಾಸ್, ಸುಶಾಂತ್ ಸಲ್ಡಾನಾ, ಫೆಲಿಕ್ಸ್ ಡಿಕ್ರೂಜ್, ಸಿ.ಜಿ.ಪಿಂಟೊ, ಶರ್ಮಿಳಾ ಮೆನೆಜಸ್, ಆಲ್ವಿನ್ ಪಿ. ಮೊಂತೆರೊ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಾಖಾ ನಿರ್ದೇಶಕಿ ಐರೀನ್ ರೆಬೆಲ್ಲೊ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕಿ ವಿಲ್ಮಾ ಜ್ಯೋತಿ ಸಿಕ್ವೇರಾ ಧನ್ಯವಾದ ಅರ್ಪಿಸಿದರು ಮತ್ತು ಅಲೋಶಿಯಸ್ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles